Supreme Court On Gyanvapi : ವ್ಯಾಸ ನೆಲಮಾಳಿಗೆಯಲ್ಲಿ ಪೂಜೆಯ ಅನುಮತಿ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಹೋಗಿರಿ ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಮುಸಲ್ಮಾನ ಅರ್ಜಿದಾರರಿಗೆ ಆದೇಶ !

ನವ ದೆಹಲಿ – ವಾರಾಣಸಿಯ ಜ್ಞಾನವಾಪಿ ಮಸೀದಿಯ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷದವರಿಗೆ ಪೂಜೆ ನಡೆಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿರುವುದರ ವಿರುದ್ಧ ಮುಸ್ಲಿಂ ಪಕ್ಷದವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದರು. ಅದಕ್ಕೆ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷದವರಿಗೆ ಈ ಅನುಮತಿಯ ವಿರುದ್ಧ ಅಲಹಾಬಾದ ಉಚ್ಚ ನ್ಯಾಯಾಲಯಕ್ಕೆ ಹೋಗುವಂತೆ ಆದೇಶ ನೀಡಿತು ಈ ಕುರಿತು ಫೆಬ್ರುವರಿ 6 ರಂದು ಮುಂದಿನ ವಿಚಾರಣೆ ನಡೆಯಲಿದೆ.

ಮುಸ್ಲಿಂ ಪಕ್ಷದ ಅಂಜುಮನ್ ಇಂತೇಜಾಮಿಯಾ ಮಸಿದಿ ಸಮಿತಿಯು ಈ ಅರ್ಜಿ ದಾಖಲಿಸಿತ್ತು. ಇದರಲ್ಲಿ, ಜಿಲ್ಲಾ ನ್ಯಾಯಾಲಯದ ಅನುಮತಿಯ ನಂತರ ಆಡಳಿತವು ಗಡಿಬಿಡಿಯಿಂದ ಸಂಬಂಧಿಸಿದ ಸ್ಥಳದಲ್ಲಿ ಬಿಗಿಯಾದ ಭದ್ರತೆಯ ವ್ಯವಸ್ಥೆಗಳನ್ನು ಮಾಡಿ ಅಲ್ಲಿಯ ಕಬ್ಬಿಣದ ತಡೆಗೋಡೆಯನ್ನು ತೆಗೆದು ಹಾಕಿದರು, ಪೂಜೆಗಾಗಿ ಆವಶ್ಯಕವಿರುವ ವ್ಯವಸ್ಥೆಯನ್ನು ಮಾಡಲು ಜಿಲ್ಲಾ ನ್ಯಾಯಾಲಯವು ಒಂದು ವಾರದ ಕಾಲಾವಧಿಯನ್ನು ನೀಡಿರುವಾಗಲೂ, ರಾತ್ರೋರಾತ್ರಿ ಗಡಿಬಿಡಿಯಿಂದ ಕೆಲಸವನ್ನು ಕೈಗೆತ್ತಿಕೊಳ್ಳುವುದು ಆಡಳಿತಕ್ಕೆ ಯಾವುದೇ ಕಾರಣವಿರಲಿಲ್ಲ. ಮಸಿದಿ ಆಡಳಿತ ಸಮಿತಿಗೆ ಈ ಆದೇಶದ ವಿರುದ್ಧ ಕಾನೂನು ಮಾರ್ಗವನ್ನು ಅವಲಂಬಿಸಲು ಸಾಧ್ಯವಾಗಬಾರದು ಎಂದು ಆಡಳಿತವು ಫಿರ್ಯಾದುದಾರರೊಂದಿಗೆ ಸೇರಿ ಮಾಡುತ್ತಿರುವ ಪ್ರಯತ್ನಗಳೇ ಈ ಗಡಿಬಿಡಿಯ ಕಾರಣವಾಗಿದೆಯೆಂದು ದಾವೆ ಮಾಡಿದೆ.

ಸಾಮಾನ್ಯ ಭಕ್ತಾದಿಗಳಿಗೆ ನೆಲಮಾಳಿಗೆಯಲ್ಲಿ ದರ್ಶನಕ್ಕೆ ಅನುಮತಿ

ನ್ಯಾಯಾಲಯದ ಆದೇಶದ ನಂತರ, ಜನವರಿ 31 ರ ರಾತ್ರಿ ವಾರಣಾಸಿಯ ಜಿಲ್ಲಾಡಳಿತವು ಹಿಂದೂ ಪಕ್ಷಗಳಿಗೆ ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷದವರಿಗೆ ಪೂಜೆ ಮಾಡಲು ವ್ಯವಸ್ಥೆಯನ್ನು ಮಾಡಿತು, ಈಗ ಸಾಮಾನ್ಯ ಭಕ್ತರಿಗೂ ನೆಲಮಾಳಿಗೆಗೆ ಹೋಗಿ ದೇವರ ದರ್ಶನವನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದರಿಂದ ಕಾಶಿ ವಿಶ್ವನಾಥ ಮಂದಿರಕ್ಕೆ ದರ್ಶನಕ್ಕೆ ಬರುವ ಭಕ್ತರು ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಗೆ ಹೋಗಿ ದೇವರ ದರ್ಶವನ್ನು ಪಡೆದುಕೊಳ್ಳುತ್ತಿದ್ದಾರೆ.

ಶುಕ್ರವಾರ ದರ್ಶನ ಮತ್ತು ನಮಾಜ್ ಎರಡೂ ಪ್ರಾರಂಭ

ಫೆಬ್ರುವರಿ 2 ಶುಕ್ರವಾರವಾಗಿರುವುದರಿಂದ ಮುಸ್ಲಿಮರಿಗೆ ಎಂದಿನಂತೆ ನಮಾಜ ಮಾಡಲು ಜ್ಞಾನವಾಪಿಯ ಪರಿಸರದಲ್ಲಿ ಅನುಮತಿ ನೀಡಲಾಗಿತ್ತು. ಅದೇ ಸಮಯಕ್ಕೆ ಅಲ್ಲಿಯ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಎರಡೂ ವಿಷಯಗಳು ಸಮಾನಾಂತರ ಮಾಡಲಾಗಿತ್ತು. ಆ ಸಮಯದಲ್ಲಿ ದೊಡ್ಡ ಪೊಲೀಸ್ ಬಂದೋಬಸ್ತ ಇಡಲಾಗಿತ್ತು. ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಿದ್ದರಿಂದ ಅಲ್ಲಿನ ಮುಸ್ಲಿಮರು ಫೆಬ್ರವರಿ 2 ರಂದು ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ನಿಷೇಧವನ್ನು ವ್ಯಕ್ತಪಡಿಸಿದರು.

ವ್ಯಾಸ ನೆಲಮಾಳಿಗೆಯಲ್ಲ, ಅದು ‘ಜ್ಞಾನ್ ತಾಲಗೃಹ’ !

ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಪ್ರಾರಂಭವಾದ ಬಳಿಕ, ಕಾಶಿಯ ಸಂತ ಸಮಾಜದವರು ಮತ್ತು ಕಾಶಿ ವಿದ್ವತ್ ಪರಿಷತ್ತಿನ ವಿದ್ವಾಂಸರೂ ಪೂಜೆಯನ್ನು ಮಾಡಿದರು. ಕಾಶಿ ವಿದ್ವತ ಪರಿಷತ್ತಿನವರು ಈ ನೆಲಮಾಳಿಗೆಗೆ `ಜ್ಞಾನ ತಾಲಗೃಹ’ ಎಂದು ಹೊಸ ಹೆಸರನ್ನು ಇಟ್ಟರು. ‘ಅದು ನೆಲಮಾಳಿಗೆಯಲ್ಲ, ಅದೀಗ ಜ್ಞಾನ ತಾಲಗೃಹ ಎಂದು ಗುರುತಿಸಲ್ಪಡುವುದು’ ಎಂದು ಹೇಳಿದರು. ಅಖಿಲ ಭಾರತೀಯ ಸಂತ ಸಮಿತಿಯೂ ಇದಕ್ಕೆ ಮಾನ್ಯತೆ ನೀಡಿದೆ.

ಸಂಪಾದಕೀಯ ನಿಲುವು

ಜ್ಞಾನವಾಪಿಯಲ್ಲಿ ಮೊದಲು ಹಿಂದೂ ದೇವಾಲಯವಿತ್ತು ಮತ್ತು ಅಲ್ಲಿ 1993 ರ ಮೊದಲಿನಿಂದಲೂ ಪೂಜೆ ನಡೆಯುತ್ತಿತ್ತು ಎಂದು ಎಲ್ಲರಿಗೂ ತಿಳಿದಿದೆ. ಹೀಗಿರುವಾಗಲೂ ಮುಸಲ್ಮಾನರು ತಮ್ಮ ದಾವೆಗಳನ್ನು ಬಿಡುವುದಿಲ್ಲ. ಇದರಿಂದ ಅವರು ಸರ್ವಧರ್ಮದಲ್ಲಿ ಸಮಾನತೆಯನ್ನು ತೋರಿಸಲು ಬಯಸುವುದಿಲ್ಲ, ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ತಥಾಕಥಿತ ಜಾತ್ಯತೀತ ವಾದಿಗಳು ಮತ್ತು ಪ್ರಗತಿ(ಅದೋ)ಪರರು ಇದನ್ನು ಗಮನಿಸಬೇಕು !