ಶ್ರೀಕೃಷ್ಣ ಜನ್ಮಭೂಮಿಯ ಸಂದರ್ಭದಲ್ಲಿಯೂ ಜ್ಞಾನವಾಪಿಯಂತೆ ತೀರ್ಪು ಬರಲಿದೆ ! – ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ

ಹತ್ರಾಸ್ (ಉತ್ತರ ಪ್ರದೇಶ) – ಜ್ಞಾನವಾಪಿ ದೊರಕಿದೆ. ಶ್ರೀಕೃಷ್ಣ ಜನ್ಮಭೂಮಿ ಸಂದರ್ಭದಲ್ಲೂ ಇದೇ ರೀತಿಯ ನಿರ್ಣಯ ಬರಲಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಹೇಳಿಕೆ ನೀಡಿದ್ದಾರೆ.

ಹತ್ರಾಸ್‌ನ ಲಾಡಪುರ ಗ್ರಾಮದಲ್ಲಿ ನಡೆಯುತ್ತಿರುವ ರಾಮಕಥೆಯ ಸಮಯದಲ್ಲಿ ಅವರು ಹೇಳಿದರು, ತಮ್ಮ ಮಾತನ್ನು ಮುಂದುವರೆಸಿ, ಸಂಪೂರ್ಣ ವಾತಾವರಣ ರಾಮಮಯವಾಗಿದೆ ಎಂದು. 2024ರ ಲೋಕಸಭೆ ಚುನಾವಣೆ ಬರಲಿದೆ. ರಾಮ-ಸೀತೆಯನ್ನು ಪ್ರೀತಿಸದ ವಿರೋಧಿಗಳಿಗೆ ಮತ ಹಾಕುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು. ‘ವಿರೋಧಿಗಳು ಶ್ರೀರಾಮಲಲ್ಲಾನ (ಶ್ರೀರಾಮನ ಮಗುವಿನ ರೂಪ) ದೇವಸ್ಥಾನಕ್ಕೆ ಹೋಗದಿದ್ದರೆ ಮತ ಹಾಕಲು ಅವರಿಗೆ ಯಾವ ಹಕ್ಕಿದೆ ? ಎಂದು ಹೇಳಿದರು.