ಲಂಡನ್ – ಬ್ರಿಟನ್‌ನ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರ ಸರಕಾರವು ಭಾರತೀಯ ಅರ್ಚಕರಿಗೆ ವೀಸಾ ನೀಡುವುದಿಲ್ಲ. ಇದರಿಂದಾಗಿ ಬ್ರಿಟನ್ ನಲ್ಲಿ ಸುಮಾರು 500 ದೇವಸ್ಥಾನಗಳ ಪೈಕಿ 50 ದೇವಸ್ಥಾನಗಳನ್ನು ಮುಚ್ಚಲಾಗಿದೆ. ಹಲವು ದೇವಸ್ಥಾನಗಳಲ್ಲಿ ಹಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಅಲ್ಲಿನ ಹಿಂದೂಗಳು ಸುನಕ್ ಸರಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಸುಮಾರು 20 ಲಕ್ಷ ಭಾರತೀಯ ಹಿಂದೂಗಳು ಬ್ರಿಟನ್ ನಲ್ಲಿ ವಾಸಿಸುತ್ತಿದ್ದಾರೆ. ಆದುದರಿಂದ ಅಲ್ಲಿನ ಹಿಂದೂಗಳಲ್ಲಿ ಪ್ರತಿನಿತ್ಯ ನಡೆಯುವ ಧಾರ್ಮಿಕ ವಿಧಿವಿಧಾನ, ಮದುವೆ ಇತ್ಯಾದಿಗಳಿಗೆ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಪುರೋಹಿತರ ಅಗತ್ಯವಿದೆ; ಆದರೆ ಅರ್ಚಕರಿಗೆ ವೀಸಾ ಸಿಗದ ಕಾರಣ ಹಿಂದೂಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬ್ರಿಟನ್ ಸರಕಾರವು ವೀಸಾಗಳನ್ನು ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹಿಂದೂ ಆಗಿರುವುದರಿಂದ, ರಿಷಿ ಸುನಕ್ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗಿದೆ; ಆದರೆ ಸರಕಾರ ಇಲ್ಲಿಯವರೆಗೆ ಅದನ್ನು ಮಾಡಲು ವಿಫಲವಾಗಿದೆ, ”ಎಂದು ಬರ್ಮಿಂಗ್‌ಹ್ಯಾಮ್‌ನ ಲಕ್ಷ್ಮೀನಾರಾಯಣ ದೇವಸ್ಥಾನದ ಸಹಾಯಕ ಅರ್ಚಕ ಸುನೀಲ್ ಶರ್ಮಾ ಹೇಳಿದರು.
ವೀಸಾ ನೀಡದ ಕಾರಣ ಮುಚ್ಚಲಾದ ದೇವಸ್ಥಾನಗಳು1. ಲಕ್ಷ್ಮೀನಾರಾಯಣ ದೇವಸ್ಥಾನ, ಬರ್ಮಿಂಗ್ಹ್ಯಾಮ್ |
‘ಟಿಯರ್-5’ ಧಾರ್ಮಿಕ ವೀಸಾ ಅವಧಿಯನ್ನು ವಿಸ್ತರಿಸಲು ಆಗ್ರಹ
ಬ್ರಿಟನ್‌ನಲ್ಲಿ ಅರ್ಚಕರಿಗೆ ‘ಟಿಯರ್-5’ ಧಾರ್ಮಿಕ ವೀಸಾವನ್ನು ನೀಡಲಾಗುತ್ತದೆ. ಇದು ತಾತ್ಕಾಲಿಕ ವೀಸಾವಾಗಿದೆ. ದೇವಾಲಯದ ಸಮಿತಿಯು ವೀಸಾ ಅವಧಿ ಮುಗಿಯುವ 6 ತಿಂಗಳ ಮೊದಲು ಹೊಸ ಅರ್ಚಕರಿಗೆ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತದೆ; ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಅನುಮೋದನೆಯಾಗುವುದಿಲ್ಲ. ‘ಟಿಯರ್-5’ ಧಾರ್ಮಿಕ ವೀಸಾ ಅವಧಿಯನ್ನು 2 ರಿಂದ 3 ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಭಾರತೀಯರು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಬ್ರಿಟನ್ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರ ಸರಕಾರವಿದೆ. ಹೀಗಿರುವಾಗ ಅರ್ಚಕರಿಗೆ ವೀಸಾ ಸಿಗದೆ ಅಲ್ಲಿನ ದೇವಸ್ಥಾನಗಳು ಮುಚ್ಚುವುದು ಅಪೇಕ್ಷಿತವಿಲ್ಲ ! |