ಅಖಿಲ ಭಾರತ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕ ಶಾಮ ಮಾನವ ಇವರ ಮೂರ್ಖತನದ ಪ್ರದರ್ಶನ !
ಮುಂಬಯಿ – ಕಾನೂನು ಎಲ್ಲರಿಗೂ ಸಮಾನವಾಗಿದೆ. ಅದರಂತೆ ಎಲ್ಲರ ಮೇಲೆ ಕ್ರಮ ಕೈಕೊಳ್ಳುವುದು ಅಪೇಕ್ಷಿತವಿದೆ. ಆದರೆ ದುರದೃಷ್ಟವಶಾತ್ ಅದು ಆಗುವುದಿಲ್ಲ. ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರವು ಮೇಲ್ವರ್ಗದವರು ಮತ್ತು ಬ್ರಾಹ್ಮಣ ಜಾತಿಯ ಬಾಬಾರವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮಹಾರಾಜರು ಬ್ರಾಹ್ಮಣರಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೇ? ಎನ್ನುವ ಶಬ್ದಗಳಲ್ಲಿ ಅಖಿಲ ಭಾರತ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾದ ಶಾಮ ಮಾನವ ತಮ್ಮ ಅತಿಯಾದ ಮೂರ್ಖತನವನ್ನು(ಜಾಣತನವನ್ನು) ಪ್ರದರ್ಶಿಸಿದ್ದಾರೆ.
ಶಾಮ ಮಾನವ ತಮ್ಮ ಮಾತನ್ನು ಮುಂದುವರಿಸಿ,
1. 2005ರಲ್ಲಿ ವಾಮಾಚಾರ ವಿರೋಧಿ ಕಾನೂನನ್ನು ರೂಪಿಸಿದ ತಕ್ಷಣ, ಅಂದಿನ ಸಾಮಾಜಿಕ ನ್ಯಾಯ ರಾಜ್ಯ ಸಚಿವರು ಕೆರಳಿ ನನಗೆ ಈ ಕಾನೂನಿನ ದುಷ್ಪರಿಣಾಮಗಳನ್ನು ತಿಳಿಸಿ ಹೇಳಿದ್ದರು.
2. 2005 ರಲ್ಲಿ ಈ ಕಾನೂನು ಅನುಮೋದನೆ ಪಡೆಯಿತು. ಆ ಸಮಯದಲ್ಲಿ ಅವರು ನನಗೆ ಈ ಕಾನೂನಿನ ಮೂಲಕ ನಮ್ಮ ಆದಿವಾಸಿ ಬಾಬಾರವರ ಮೇಲೆ ಕ್ರಮ ಕೈಕೊಳ್ಳುವಿರಿ. ಬಡ ಮತ್ತು ದಲಿತರ ಮೇಲೆಯೂ ಕ್ರಮ ಕೈಕೊಳ್ಳುವಿರಿ; ಆದರೆ ಮೇಲ್ವರ್ಗದವರು ಮತ್ತು ಬ್ರಾಹ್ಮಣರು ಬಾಬಾ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಪೋಲೀಸರೆ ಇರಲಿ ಅಥವಾ ಸರಕಾರವೇ ಇರಲಿ, ಯಾರಿಗೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.
3. ಅದಕ್ಕೆ ನಾನು ಅವರಿಗೆ, ಕಾನೂನು ಎಲ್ಲರಿಗೂ ಸಮಾನ ಆಗಿದೆಯೆನ್ನುವ ವಿಷಯವನ್ನು ಗಮನಕ್ಕೆ ತಂದು ಕೊಡುತ್ತಿದ್ದೇನೆ. ‘ಮೇಲ್ವರ್ಗದವರು ಇರಲಿ ಅಥವಾ ಮೇಲಿನ ಜಾತಿಯಲ್ಲಿ ಜನಿಸಿದವರು ಇರಲಿ, ಎಲ್ಲರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ನಾನು ಒತ್ತಿ ಹೇಳಿದ್ದೆನು. (ಬ್ರಾಹ್ಮಣ ದ್ವೇಷದ ಕಾಮಾಲೆ ಕಣ್ಣಿನವರಿಗೆ ಮತ್ತಿನ್ನೇನು ಹೇಳಬಹುದು? – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂ ರಾಷ್ಟ್ರ ಮತ್ತುಬ್ರಾಹ್ಮಣರ ವಿಷಯದಲ್ಲಿ ಅಸೂಯೆ ಪಡುವ ಪ್ರಾ. ಶಾಮ ಮಾನವ ಜಿಹಾದಿ ಭಯೋತ್ಪಾದಕರ `ಗಝವಾ-ಎ- ಹಿಂದ’ (ಭಾರತವನ್ನು ಇಸ್ಲಾಮೀಕರಣ ಮಾಡುವ) ಸಂಚಿನ ವಿಷಯದಲ್ಲಿ ಚಕಾರ ಶಬ್ದವನ್ನೂ ಎತ್ತುವುದಿಲ್ಲ. ಇದನ್ನು ಗಮನಿಸಬೇಕಾಗಿದೆ. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮಹಾರಾಜರು ನೀಡಿರುವ ಕರೆಯನ್ನು ಸ್ವೀಕರಿಸದೇ, ಓಡಿ ಹೋಗುವ ಶಾಮ ಮಾನವರನ್ನು ಜನರು ಗುರುತಿಸಿದ್ದಾರೆ. |