ನವ ದೆಹಲಿ – ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ನ್ಯಾಯಾಲಯವು ಮೇ 19 , 2023 ರಂದು ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಆವರಣದ ಪ್ರದೇಶದ ವೈಜ್ಞಾನಿಕ ಸಮೀಕ್ಷೆಯನ್ನು ನ್ಯಾಯಾಲಯ ನಿಷೇಧಿಸಿತ್ತು. ಹಿಂದೂ ಪರ ವಕೀಲ ವಿಷ್ಣು ಶಂಕರ ಜೈನ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಈ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು, ಹಾಗೆಯೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರಿಗೆ ಈ ಸ್ಥಳದ ಸಮೀಕ್ಷೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಲಾಗಿದೆ. ಈ ಮೂಲಕ ಮುಚ್ಚಿದ ಪ್ರದೇಶದಲ್ಲಿ ಶಿವಲಿಂಗದ ರೂಪ ಮತ್ತು ಅದಕ್ಕೆ ಸಂಬಂಧಿಸಿರುವ ಇತರ ವಸ್ತುಗಳ ಸ್ಥಿತಿಯನ್ನು ಯಾವುದೇ ಹಾನಿಯಾಗದಂತೆ ಪರಿಶೀಲಿಸಬಹುದು.
1. ಈ ಮನವಿಯಲ್ಲಿ `ಆವರಣದಲ್ಲಿ ನಿರ್ಮಿಸಿರುವ ಹೊಸ ಗೋಡೆಗಳ ಬಗ್ಗೆ, ಮೇಲ್ಛಾವಣಿ ತೆಗೆಸಬೇಕು ಎಂದು ಆಗ್ರಹಿಸಲಾಗಿದೆ. ಇದಲ್ಲದೇ ಬೀಗ ಜಡಿದಿರುವ ಜಾಗಗಳಲ್ಲಿ ಅಗೆಯುವುದು ಮತ್ತಿತರ ವೈಜ್ಞಾನಿಕ ವಿಧಾನಗಳನ್ನು ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.
2. ವಕೀಲ ಜೈನ್ ಅವರು ವಜು ಖಾನಾ (ನಮಾಜ್ ಸಮಯದಲ್ಲಿ ಕೈಕಾಲು ತೊಳೆಯುವ ಸ್ಥಳಗಳು) ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆಂದು ಹೇಳಿದ್ದರು. ಇದರಿಂದ ‘ಶಿವಲಿಂಗ’ ವಿದೆಯೋ ಅಥವಾ ಕಾರಂಜಿಯೋ ಎಂಬುದು ಸ್ಪಷ್ಟವಾಗುತ್ತದೆ. ಸದ್ಯಕ್ಕೆ ವಜೂಖಾನೆಯ ಪರಿಸರಕ್ಕೆ ಬೀಗ ಹಾಕಲಾಗುತ್ತಿದೆ. ಅದರ ಉಸ್ತುವಾರಿಯನ್ನು ಸಧ್ಯಕ್ಕೆ ವಾರಣಾಸಿಯ ಜಿಲ್ಲಾ ದಂಡಾಧಿಕಾರಿಗಳ ಬಳಿಯಿದೆ.
3. ಇತ್ತೀಚೆಗೆ ವಜುಖಾನಾ ಪರಿಸರದ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿತ್ತು. ಇದರಿಂದ ಇಲ್ಲಿ ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆಯೆಂದು ಕಂಡುಬರುತ್ತದೆ.