ಅಯೋಧ್ಯಾ ನಗರಕ್ಕೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ನಾಗರಿಕರ ಬಹಳ ದಟ್ಟಣೆಯಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ವಾಹನದಲ್ಲಿ ಆಗಮಿಸಿದಾಗ ಎಲ್ಲರೂ ‘ಜೈ ಶ್ರೀರಾಮ್’ ಎಂದು ಜಯಘೋಷ ಮಾಡಿದರು.
ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಎಲ್ಲರಿಗೂ ನೋಡಲು ಸಾಧ್ಯವಾಗಬೇಕು ಎಂದು ಅಯೋಧ್ಯೆ ನಗರದ ವಿವಿಧ ಸ್ಥಳಗಳಲ್ಲಿ ದೊಡ್ಡ ಪರದೆಗಳನ್ನು ಹಾಕುವ ಮೂಲಕ ನೇರ ಪ್ರಸಾರವನ್ನು ತೋರಿಸಲಾಯಿತು.
ಭಗವಾನ್ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗುತ್ತಲೇ ಅಯೋಧ್ಯೆ ನಗರದ ಎಲ್ಲೆಡೆ ಪ್ರಭು ಶ್ರೀರಾಮನ ಜಯಘೋಷವನ್ನು ಮಾಡಲಾಯಿತು.
ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ನಂತರ ಅಯೋಧ್ಯೆ ನಗರದ ವಿವಿಧ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು.
ರಸ್ತೆಯ ಮೇಲೆ ವಿವಿಧ ಸ್ಥಳಗಳಲ್ಲಿ ಸಣ್ಣ ವೇದಿಕೆಗಳನ್ನು ನಿರ್ಮಿಸಿ ಉತ್ತರಪ್ರದೇಶದ ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು.