ಸದ್ಯ ಅನೇಕ ಮನೆಗಳಲ್ಲಿ ಈ ಪ್ರಶ್ನೆಯನ್ನು ಕೇಳಲಾಗುತ್ತದೆ. ಅದಕ್ಕೆ ‘ಅಡುಗೆಯನ್ನು ಮಾಡಿದ ನಂತರ ಬೆವರು ಬರುತ್ತದೆ; ಆದುದರಿಂದ ನಾವು ಅಡುಗೆಯನ್ನು ಮಾಡಿದ ನಂತರವೇ ಸ್ನಾನ ಮಾಡುತ್ತೇವೆ’ ಎಂಬಂತಹ ವಿವಿಧ ಕಾರಣಗಳನ್ನು ಹೇಳಲಾಗುತ್ತದೆ. ಸ್ನಾನದ ನಂತರವೇ ಅಡುಗೆಯನ್ನು ಮಾಡಬೇಕು ಎಂದು ಎಲ್ಲಿ ಬರೆದಿದೆ. ಸ್ನಾನವನ್ನು ಮಾಡದೇ ಅಡುಗೆಯನ್ನು ಮಾಡಿದರೆ ಏನಾಗುತ್ತದೆ ಮುಂತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ ? ಸ್ನಾನವನ್ನು ಮಾಡಿಯೇ ಅಡುಗೆಯನ್ನು ಏಕೆ ಮಾಡಬೇಕು, ಇದರ ಉತ್ತರ
೧. ನಾವು ಸೇವಿಸುವ ಆಹಾರವು ಜಠರಾಗ್ನಿಯಲ್ಲಿ ‘ವೈಶ್ವಾನರ’ ಆಹುತಿಯ ರೂಪದಲ್ಲಿ ಗ್ರಹಿಸಲ್ಪಡುತ್ತದೆ
ನಮ್ಮ ಜಠರದಲ್ಲಿ ವೈಶ್ವಾನರ ಹೆಸರಿನಲ್ಲಿರುವ ಅಗ್ನಿಯು ಪ್ರತ್ಯಕ್ಷ ನಾರಾಯಣನ ಒಂದು ರೂಪವೇ ಆಗಿದೆ. (ಭಗವದ್ಗೀತೆಯಲ್ಲಿರುವ ‘ಅಹಂ ವೈಶ್ವಾನರೋ ಭೂತ್ವಾ’, ಎಂಬ ಶ್ಲೋಕದಲ್ಲಿ ಭಗವಾನ ಯೋಗೇಶ್ವರ ಕೃಷ್ಣನು ‘ನನ್ನ ನಿವಾಸ ಜಠರಾಗ್ನಿಯಲ್ಲಿ ‘ವೈಶ್ವಾನರ’ ರೂಪದಲ್ಲಿದೆ’, ಎಂದು ಹೇಳಿದ್ದಾನೆ.) ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ, ಆ ಆಹಾರ ವೈಶ್ವಾನರ ಅಗ್ನಿಯಲ್ಲಿ ಆಹುತಿಯ ರೂಪದಲ್ಲಿ ಹೋಗುತ್ತದೆ.
೨. ಯಜ್ಞಯಾಗದ ಎಲ್ಲ ನಿಯಮಗಳು ಜಠರಾಗ್ನಿಗೆ ಅನ್ವಯಿಸುತ್ತವೆ
ಒಂದು ವೇಳೆ ನಮ್ಮ ಮನೆಯಲ್ಲಿ ಯಾವುದಾದರೊಂದು ಯಜ್ಞಯಾಗವನ್ನು ಮಾಡಬೇಕಿದ್ದರೆ, ನಾವು ಆ ಯಜ್ಞದಲ್ಲಿ ಆಹುತಿ ನೀಡಲು ಯಾವ ಆಹಾರವನ್ನು (ಅನ್ನ ಪಾಯಸ ಇತ್ಯಾದಿ) ತಯಾರಿಸುತ್ತೇವೆಯೋ, ಅದನ್ನು ಸ್ನಾನ ಮಾಡಿಯೇ ತಯಾರಿಸುತ್ತೇವೆ; ಏಕೆಂದರೆ ಅದು ದೇವತೆಗಳಿಗೆ ಸಮರ್ಪಣೆ ಆಗಬೇಕಾಗಿರುತ್ತದೆ. ಹಾಗೆಯೇ ನಮ್ಮ ಹೊಟ್ಟೆಯಲ್ಲಿ, ಜಠರದಲ್ಲಿ ಯಾವ ಅಗ್ನಿನಾರಾಯಣನಿರುವನೋ, ಅವನಿಗೆ ಅನ್ನದ ಆಹುತಿ ನೀಡುವಾಗಲೂ ಇದೇ ನಿಯಮ ಅನ್ವಯಿಸುತ್ತದೆ.
೩. ಭೋಜನಕ್ಕೆ ಮೊದಲು ಶುದ್ಧವಾಗುವುದರ ಹಿಂದಿನ ಕಾರಣ
ನಾವು ಅಥವಾ ನಮ್ಮ ಪುರೋಹಿತರು, ಗುರುಗಳು ಯಜ್ಞದಲ್ಲಿ ಆಹುತಿಯನ್ನು ಕೊಡುವಾಗ ಎಂದಾದರೂ ಚಪ್ಪಲಿಗಳನ್ನು ಹಾಕಿಕೊಂಡು ಕುಳಿತಿರುವುದು ನೋಡಿದ್ದೀರಾ ? ಇಲ್ಲವಲ್ಲ; ಏಕೆಂದರೆ ಆ ಆಹುತಿಗಳನ್ನು ದೇವತೆಗಳಿಗೆ ಅರ್ಪಿಸುವುದಿರುತ್ತದೆ. ಹಾಗೆಯೇ ನಮ್ಮ ಶರೀರದಲ್ಲಿನ ಅಗ್ನಿನಾರಾಯಣನಿಗೆ ಆಹುತಿ ಯನ್ನು ನೀಡುವಾಗಲೂ (ಭೋಜನವನ್ನು ಮಾಡುವಾಗಲೂ) ಇದೇ ನಿಯಮ ಅನ್ವಯಿಸುತ್ತದೆ. ಆದುದರಿಂದ ಭೋಜನದ ಮೊದಲು ಚಪ್ಪಲಿಗಳನ್ನು ತೆಗೆದು, ಕೈಕಾಲುಗಳನ್ನು ತೊಳೆದುಕೊಂಡು, ಬಾಯಿ ಮುಕ್ಕಳಿಸಿ ಶುದ್ಧ ಮತ್ತು ಪವಿತ್ರವಾಗಿ ಆಸನದ ಮೇಲೆ ಶಾಂತ ರೀತಿಯಲ್ಲಿ ಕುಳಿತುಕೊಂಡು ಭೋಜನ ಮಾಡಬೇಕು.
೪. ಆಚರಣೆ ಶುದ್ದಿಯ ಮಹತ್ವ
‘ಆಚಾರ ಮತ್ತು ವಿಚಾರ ಇವೆರಡೂ ಧರ್ಮದ ಮಹತ್ವದ ಅಂಗಗಳಾಗಿವೆ. ಆಚಾರ ಮತ್ತು ವಿಚಾರ ಇವೆರಡೂ ಶುದ್ಧವಾಗಿದ್ದರೆ ಮಾತ್ರ ನಿಶ್ಚಿತವಾಗಿಯೂ ನಮ್ಮ ಕಲ್ಯಾಣವಾಗುತ್ತದೆ’ ಇದರಲ್ಲಿ ಸಂಶಯವೇ ಇಲ್ಲ. ಕೆಲವರು ಒಂದೇ ತಟ್ಟೆಯಲ್ಲಿ ಎಂಜಲು ಮುಸುರೆಯ ವಿಚಾರ ಮಾಡದೇ ತಿನ್ನುತ್ತಾರೆ. ಇದರಿಂದ ಅವರ ಬುದ್ಧಿ ಶೇ. ೧೦೦ ರಷ್ಟು ಭ್ರಷ್ಟವಾಗುತ್ತದೆ. ಇದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಶುದ್ಧ ಆಚರಣೆಗೆ ಮಹತ್ವವಿದೆ.
‘ಒಂದು ವೇಳೆ ನಿಮಗೆ ಶ್ರೀಕೃಷ್ಣನ ಮೇಲೆ ವಿಶ್ವಾಸವಿದ್ದರೆ’ ಅವನು ನಮ್ಮ ಶರೀರದಲ್ಲಿದ್ದಾನೆ’ ಎಂಬುದು ನಿಶ್ಚಿತವಾಗಿದ್ದರೆ, ‘ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ ಅದನ್ನು ಅವನಿಗೇ ಸಮರ್ಪಿಸುತ್ತಿದ್ದೇವೆ’, ಎಂಬ ಭಾವವನ್ನಿಟ್ಟುಕೊಳ್ಳಿ. ನಂತರ ೬ ತಿಂಗಳುಗಳ ನಂತರ ವಿಚಾರ, ಬುದ್ಧಿ ಮತ್ತು ನಡುವಳಿಕೆಗಳಲ್ಲಿ ಒಳ್ಳೆಯ ಅಮೂಲಾಗ್ರ ಬದಲಾವಣೆಯಾಗಿದೆಯೋ ಅಥವಾ ಇಲ್ಲವೋ ? ಎಂಬುದನ್ನು ನೀವೇ ನೋಡಿ.
– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ವೆಂಗುರ್ಲೆ, ಸಿಂಧುದುರ್ಗ. (೧೫.೫.೨೦೨೩)