ತಿಂಗಳಪೂರ್ತಿ ಮೊಬೈಲ್ ಬಳಸದೆ ಇರುವವರಿಗೆ ದೊರೆಯುವುದು ನಿವ್ವಳ ೮ ಲಕ್ಷ ರೂಪಾಯಿ !

ಐಸ್ಲ್ಯಾಂಡ್ ನ ಒಂದು ಕಂಪನಿಯಿಂದ ಸ್ಪರ್ಧೆಯ ಆಯೋಜನೆ !

ರೆಯಿಕಾಜೇವಿಕ (ಐಸ್ಲ್ಯಾಂಡ್) – ಮೊಬೈಲ್ ಇದು ಜೀವನದ ಅವಿಭಾಜ್ಯ ಅಂಗವಾಗಿದೆ. ಇದರ ಅನೇಕ ಲಾಭಗಳಿವೆ; ಆದರೆ ಅದಕ್ಕಿಂತಲೂ ನಷ್ಟವೇ ಜಾಸ್ತಿ ಇದೆ. ಆದರೂ ಕೂಡ ಸಮಾಜದ ಅನೇಕರಿಗೆ ಅದರ ಕೆಟ್ಟ ಚಟ ಇರುವುದರಿಂದ ರಸ್ತೆಯಲ್ಲಿ, ಬಸ್ಸಿನಲ್ಲಿ, ರೈಲಿನಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ಎಂದರೆ ಸಹಜವಾಗಿ ಎಲ್ಲೆಡೆ ಬಳಸುವುದನ್ನು ಕಂಡು ಬರುತ್ತದೆ. ಇದರಿಂದ ಸ್ವಂತಕ್ಕೆ ಕೆಲವು ಸಮಯವಾದರೂ ಅದರಿಂದ ದೂರ ಇಡಲು ಪ್ರಯತ್ನ ಮಾಡುವುದು ಕೂಡ ಹೆಚ್ಚಿದೆ. ಇದಕ್ಕೆ ‘ಡಿಜಿಟಲ್ ಡಿಟಾಕ್ಸ್’ ಎಂದು ಹೆಸರು ಇದೆ. ಅಂದರೆ ಎಲ್ಲಾ ಡಿಜಿಟಲ್ ಉಪಕರಣಗಳ ಜೊತೆಗೆ ಅದರಲ್ಲಿ ಮುಖ್ಯವಾಗಿ ಮೊಬೈಲ್ ಸಮಾವೇಶವಿದೆ, ಇದರಿಂದ ಕೆಲವೊಂದು ಸಮಯದವರೆಗೆ ದೂರ ಇರುವುದು, ಇದರದೇ ಒಂದು ಭಾಗ ಎಂದು ಐಸ್ಲ್ಯಾಂಡಿನಲ್ಲಿ ‘ಸಿಗ್ಗಿ’ ಎಂಬ ಕಂಪನಿಯು ಇಂತಹದ್ದೊಂದು ಸ್ಪರ್ಧೆಯ ಆಯೋಜನೆ ಮಾಡಿದೆ.

ಈ ಸ್ಪರ್ಧೆಗೆ ಕಂಪನಿಯಿಂದ ‘ಡಿಜಿಟಲ್ ಡಿಟಾಕ್ಸ್ ಚಾಲೆಂಜ್’ ಎಂದು ಹೆಸರಿಟ್ಟಿದ್ದು ಇದರ ಅಂತರ್ಗತ ಸಹಭಾಗಿ ಆಗುವ ಸ್ಪರ್ಧಕರಿಗೆ ಒಂದು ತಿಂಗಳ ಮಟ್ಟಿಗೆ ಮೊಬೈಲಿಂದ ದೂರ ಉಳಿಯುವುದು. ಅದನ್ನು ಸಾಧಿಸದ ೧೦ ಭಾಗ್ಯಶಾಲಿ ವಿಜೇತರಿಗೆ ಪ್ರತಿಯೊಬ್ಬರಿಗೂ ೧೦ ಸಾವಿರ ಡಾಲರ್ ಎಂದರೆ ನಿವ್ವಳ ೮ ಲಕ್ಷ ೩೧ ಸಾವಿರ ರೂಪಾಯಿ ಬಹುಮಾನ ನೀಡುವರು. ಸ್ಪರ್ಧೆಯ ಆರಂಭದಲ್ಲಿ ಸ್ಪರ್ಧಕರು ತಮ್ಮ ಮೊಬೈಲ್ ಆಯೋಜಕರ ಕೈಗೆ ಒಪ್ಪಿಸಬೇಕು. ಕೇವಲ ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ಪರ್ಧಕರು ಮೊಬೈಲ್ ಬಳಸಬಹುದು.

ಸಂಪಾದಕರ ನಿಲುವು

* ಇಂದು ಜಗತ್ತಿನಲ್ಲಿ ಮನುಷ್ಯನು ಎಷ್ಟೊಂದು ಮೊಬೈಲಿಗೆ ದಾಸನಾಗಿದ್ದಾನೆ ಎಂದರೆ, ಅವನಿಗಾಗಿ ಈ ರೀತಿಯ ಸ್ಪರ್ಧೆಯ ಆಯೋಜನೆ ಮಾಡಬೇಕಾಗುತ್ತದೆ. ಆಧ್ಯಾತ್ಮ ಇಲ್ಲದೆ ವಿಜ್ಞಾನದ ಅತಿ ಬಳಕೆಯ ಪರಿಣಾಮವಾಗಿದೆ.