ಕೆನಡಾದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ ಕೆನಡಾದ ಹಿರುಳಿಲ್ಲದ ಆರೋಪ !

ಕೆನಡಾದ ಸರಕಾರಿ ಆಯೋಗದಿಂದ ವಿಚಾರಣೆ

ಓಟಾವಾ (ಕೆನಡಾ) – ಭಾರತದ ಮೇಲೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಹುರುಳಿಲ್ಲದ ಆರೋಪ ಮಾಡುವ ಕೆನಡಾಗೆ ಈ ವಿಷಯದ ಸಾಕ್ಷಿ ಕೇಳಿದ್ದರು ಅದು ಇಲ್ಲಿಯವರೆಗೆ ಯಾವುದೇ ಸಾಕ್ಷಿ ನೀಡಲಿಲ್ಲ. ಇಂತಹದರಲ್ಲಿ ಅದು ‘ಫಾರಿನ್ ಇಂಟರ್ಫೇರ್ನ್ಸ್ ಕಮಿಷನ್’ನಿಂದ ಭಾರತದ ಮೇಲೆ ಗಂಭೀರ ಆರೋಪ ಮಾಡಿದೆ. ‘ಭಾರತವು ಅಲ್ಲಿಯ ಚುನಾವಣೆ ಪ್ರಭಾವಿತಗೊಳಿಸುವ ಪ್ರಯತ್ನ ಮಾಡಿದೆ’, ಎಂದು ಈ ಆಯೋಗ ಹೇಳಿದೆ. ಇದರ ವಿಚಾರಣೆ ಕೂಡ ಈ ಆಯೋಗ ನಡೆಸುವುದು ಎಂದು ಅವರು ಹೇಳಿದರು.

ಈ ಹಿಂದೆ ಕೂಡ ಕೆನಡಾದಲ್ಲಿ ೨೦೧೯ ಮತ್ತು ೨೦೨೧ ರಲ್ಲಿ ಚೀನಾ ಅದರ ಚುನಾವಣೆ ಪ್ರಭಾವಿತಗೊಳಿಸಿದೆ ಎಂದು ಆರೋಪಿಸಿತ್ತು. ಭಾರತದ ಮೇಲಿನ ಆರೋಪದ ವಿಚಾರಣೆ ನಡೆಸಿ ಕೆನಡಾದ ಆಯೋಗ ಮೇ ೩, ೨೦೨೪ ವರೆಗೆ ಅಂತಿಮ ವರದಿ ಪೂರ್ಣಗೊಳಿಸುವುದು ಹಾಗೂ ಡಿಸೆಂಬರ್ ೩೧, ೨೦೨೪ ವರೆಗೆ ಅಂತಿಮ ವರದಿ ಪ್ರಸ್ತುತಪಡಿಸುವುದು. ಈ ಆಯೋಗ ರಷ್ಯಾ ಮತ್ತು ಇರಾನ್ ಇವರ ತಥಾಕಥಿತ ಸಹಭಾಗದ ವಿಚಾರಣೆ ಕೂಡ ನಡೆಸುತ್ತಿದೆ.

ಸಂಪಾದಕರ ನಿಲುವು

ಭಾರತ ಏನಾದರೂ ಹೇಗೆ ಮಾಡಿದ್ದರೆ, ಅದು ಕೆನಡಾದ ಗಮನಕ್ಕೆ ಎಂದು ಬರುತ್ತಿರಲಿಲ್ಲ. ಆದರೂ ಕೂಡ ಇಂತಹ ಬಾಲಿಶವಾಗಿ ಆರೋಪಿಸಿ ಅದರ ವಿಚಾರಣೆ ನಡೆಸುವ ಕೆನಡಾದ ಹುರುಳಿಲ್ಲದ ಈ ಪ್ರಯತ್ನ ಭಾರತದ್ವೇಷಿ ಆಗಿದೆ, ಇದನ್ನು ತಿಳಿದುಕೊಳ್ಳಿ !

* ಕೆನಡಾದ ವ್ಯವಸ್ಥೆ ಅಶಕ್ತವಾಗಿದೆ ಮತ್ತು ಸಕ್ಷಮ ಇಲ್ಲದಿರುವ ಕಾರಣ ಇತರ ದೇಶಗಳು ಅದರ ಆಂತರಿಕ ವಿಷಯಗಳಲ್ಲಿ ಮೂಗ ತೂರಿಸುತ್ತಾರೆ, ಎಂದು ಹೇಳಬಹುದು !