ನಾನು ಶ್ರೀರಾಮನ ಭಕ್ತನಲ್ಲ, ನಾನು ಸಂವಿಧಾನದ ಭಕ್ತನಾಗಿದ್ದೇನೆ !’ ಅಂತೆ – ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಇವರ ಹೇಳಿಕೆ !

ಬೆಂಗಳೂರು – ನಾನು ಸಂವಿಧಾನದ ಭಕ್ತನಾಗಿದ್ದೇನೆ. ನನಗೆ ರಾಮನ ಮೇಲೆ ಭಕ್ತಿ ಇಲ್ಲ. ಆದ್ದರಿಂದ ನಾನು ಶ್ರೀರಾಮ ಮಂದಿರಕ್ಕೆ ಹೋಗುತ್ತಿಲ್ಲ. ಯಾರಾದರೂ ಕರೆದರೆ ದೇವಸ್ಥಾನದ ವಾಸ್ತು ಶಿಲ್ಪ ನೋಡಲು ಅಯೋಧ್ಯೆಗೆ ಹೋಗುವೆ, ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಇವರು ಹೇಳಿಕೆ ನೀಡಿದರು. ಭಾಜಪ ೩ ಕೋಟಿ ಜನರಿಗೆ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಿದೆ, ಈ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ಪ್ರಿಯಾಂಕ್ ಖರ್ಗೆ ಮಾತು ಮುಂದುವರೆಸಿ, ಕಾಂಗ್ರೆಸ್ ಶ್ರೀರಾಮ ಮಂದಿರಕ್ಕೆ ವಿರೋಧಿಸಿಲ್ಲ. ಶಂಕರಾಚಾರ್ಯರು ವಿರೋಧಿಸಿದರು. (ಯಾವುದೇ ಶಂಕರಾಚಾರ್ಯರು ಶ್ರೀರಾಮ ಮಂದಿರವನ್ನು ವಿರೋಧಿಸಿಲ್ಲ, ಖರ್ಗೆ ಇವರು ಉದ್ದೇಶಪೂರ್ವಕವಾಗಿ ಸುಳ್ಳು ಮಾತನಾಡುತ್ತಿದ್ದಾರೆ – ಸಂಪಾದಕರು) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಾಧು ಸಂತರು ಮಾಡಬೇಕು. ‘ಅಪೂರ್ಣ ಮಂದಿರದ ಉದ್ಘಾಟನೆ ಆಗಬಾರದೆಂದು’ ಶಂಕರಾಚಾರ್ಯರು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಏಕೆ ಉತ್ತರ ನೀಡುತ್ತಿದೆ ? ಅಧಿಕಾರದಲ್ಲಿರುವ ಭಾಜಪದವರು ಇರುವರು ಅಲ್ಲವೇ ? ಅವರು ಉತ್ತರ ನೀಡಬೇಕು. ನಮ್ಮ ಕಾರ್ಯಕರ್ತರು ಅವರ ಇಚ್ಛೆಯ ಪ್ರಕಾರ ಮಾಡಬೇಕೆಂದು ಮುಖ್ಯಸ್ಥರು ಹೇಳಿದ್ದಾರೆ. ನಾನು ಬುದ್ಧ ಮತ್ತು ಬಸವರಾಜ ಸ್ವಾಮಿಯ ತತ್ವಗಳನ್ನು ಪಾಲಿಸುತ್ತೇನೆ ಎಂದು ಹೇಳಿದರು.