ಶ್ರೀರಾಮ ಮಂದಿರಕ್ಕೆ 57 ಇಸ್ಲಾಮಿಕ್ ದೇಶಗಳ ಸಂಘಟನೆಯಿಂದ ವಿರೋಧ

‘ಮುಸ್ಲಿಂ ಸ್ಥಳಗಳನ್ನು ನಾಶಪಡಿಸುವ ಇಂತಹ ಉಪಾಯಯೋಜನೆಗಳನ್ನು ನಾವು ಖಂಡಿಸುತ್ತೇವಂತೆ!’ 

ಜೆಡ್ಡಾ (ಸೌದಿ ಅರೇಬಿಯಾ) – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಂತರ, ಪಾಕಿಸ್ತಾನವು ಭಾರತವನ್ನು ಟೀಕಿಸಿದ ಬಳಿಕ, ಈಗ 57 ಮುಸ್ಲಿಂ ದೇಶಗಳ ಸಂಘಟನೆಯಾದ ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್’ (ಓ.ಐ.ಸಿ) ಕೂಡ ಟೀಕಿಸಿದೆ. ಈ ಸಂಘಟನೆಯು ಪ್ರಸಾರ ಮಾಡಿರುವ ಪತ್ರಿಕಾ ವರದಿಯಲ್ಲಿ, ಭಾರತದ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬಾಬರಿ ಮಸೀದಿಯನ್ನು ಕೆಡವಲಾಯಿತೋ, ಅದೇ ಸ್ಥಳದಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಮತ್ತು ನಂತರ ಅಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುವುದು ಕಳವಳಕಾರಿ ವಿಷಯವಾಗಿದೆ. ಕಳೆದ ಸಲ ವಿದೇಶಾಂಗ ಸಚಿವರ ಪರಿಷತ್ತಿನ ಅಧಿವೇಶನದಲ್ಲಿಯೂ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೆವು. ಬಾಬ್ರಿ ಮಸೀದಿಯಂತಹ ಪ್ರಮುಖ ಇಸ್ಲಾಮಿಕ್ ತಾಣಗಳನ್ನು ನಾಶಮಾಡುವ ಇಂತಹ ಉಪಾಯಯೋಜನೆಗಳನ್ನು ನಾವು ನಿಷೇಧಿಸುತ್ತೇವೆ. ಬಾಬ್ರಿ ಮಸೀದಿಯು 5 ಶತಕಗಳ ಕಾಲ ಇತ್ತು ಎಂದು ಹೇಳಿದೆ.

ಸಂಪಾದಕರ ನಿಲುವು

* ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕಳೆದ 500 ವರ್ಷಗಳಲ್ಲಿ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿದರು ಮತ್ತು ಇಂದಿಗೂ ಪಾಕಿಸ್ತಾನ, ಬಾಂಗ್ಲಾದೇಶ ಈ ಮುಸ್ಲಿಂ ದೇಶಗಳಲ್ಲಿ ಇದೇ ಮಾಡುತ್ತಿದ್ದಾರೆ. ಇತರೆ ಮುಸ್ಲಿಂ ದೇಶಗಳಲ್ಲಿ ಹಿಂದೂಗಳಿಗೆ ಅವರ ಧಾರ್ಮಿಕ ಸ್ಥಳಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವುದಿಲ್ಲ, ಈ ವಿಷಯದಲ್ಲಿ ಈ ಮುಸ್ಲಿಂ ಸಂಘಟನೆಗಳು ಬಾಯಿ ತೆರೆಯಬೇಕು !