‘ಶ್ರೀ ರಾಮಮಂದಿರ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಳಂಕವಂತೆ !’ – ಪಾಕಿಸ್ತಾನ

  • ಮುಸ್ಲಿಮರನ್ನು ಪ್ರತ್ಯೇಕಿಸುವ ಪ್ರಯತ್ನ

  • ಜ್ಞಾನವಾಪಿ, ಶಾಹಿ ಈದ್ಗಾ ಸೇರಿದಂತೆ ದೇಶದ ಹಲವು ಮಸೀದಿಗಳಿಗೆ ಅಪಾಯ ಎಂದು ದಾವೆ

ಇಸ್ಲಾಮಾಬಾದ (ಪಾಕಿಸ್ತಾನ) – ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತನ್ನ ಮನವಿಯನ್ನು ಪ್ರಸಾರ ಮಾಡಿದೆ. ಇದರಲ್ಲಿ ನಾವು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ನಿಷೇಧಿಸುತ್ತೇವೆ. ಈ ಮಂದಿರವನ್ನು ಬಾಬ್ರಿ ಮಸೀದಿಯನ್ನು ಕೆಡವಿ ನಿರ್ಮಿಸಲಾಗಿದೆ. ಧ್ವಂಸಗೊಂಡ ಮಸೀದಿಯ ಸ್ಥಳದಲ್ಲಿ ನಿರ್ಮಿಸಲಾದ ಮಂದಿರ ಮುಂದಿನ ದಿನಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ಹಣೆಯ ಮೇಲೆ ಕಳಂಕವಾಗಿ ಉಳಿಯುತ್ತದೆ ಎಂದು ಟೀಕಿಸಿದ್ದಾರೆ. ‘ಭಾರತದಲ್ಲಿ ಬೆಳೆಯುತ್ತಿರುವ ಹಿಂದುತ್ವದ ಸಿದ್ಧಾಂತವು ಧಾರ್ಮಿಕ ಸಾಮರಸ್ಯ ಮತ್ತು ಪ್ರಾದೇಶಿಕ ಶಾಂತಿಗೆ ದೊಡ್ಡ ಅಪಾಯವಾಗಿದೆ. ಈ ರೀತಿ ಭಾರತದ ಮುಸ್ಲಿಮರನ್ನು ಪ್ರತ್ಯೇಕಿಸುವ ಯತ್ನ ನಡೆಯುತ್ತಿದೆ’ ಎಂದೂ ಸಹ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.

(ಸೌಜನ್ಯ – ANI News)

ಪಾಕಿಸ್ತಾನ,

1. ಪ್ರಾಚೀನ ಬಾಬ್ರಿಯನ್ನು ಡಿಸೆಂಬರ್ 6 ರಂದು ಕಟ್ಟರವಾದಿಗಳು ಧ್ವಂಸಗೊಳಿಸಿದರು. ದುರ್ದೈವದ ವಿಷಯವೆಂದರೆ, ಭಾರತದ ಸರ್ವೋಚ್ಚ ನ್ಯಾಯಾಲಯವು ಇದಕ್ಕೆ ಜವಾಬ್ದಾರರಾಗಿದ್ದವರನ್ನು ಖುಲಾಸೆಗೊಳಿಸಿದೆ ಮತ್ತು ಮಸೀದಿಯ ಸ್ಥಳದಲ್ಲಿ ಮದಿರವನ್ನು ನಿರ್ಮಿಸಲು ಅನುಮತಿ ನೀಡಿತು. 31 ವರ್ಷಗಳವರೆಗೆ ಈ ಪ್ರಕರಣ ನಡೆಯಿತು ಮತ್ತು ಇಂದು ಉದ್ಘಾಟನೆ ಆಯಿತು. ಇದು ಭಾರತದಲ್ಲಿ ಒಂದು ಸಮಾಜಕ್ಕೆ ಪ್ರೋತ್ಸಾಹ ಸಿಗುತ್ತಿದೆಯೆಂದು ಕಂಡು ಬರುತ್ತಿದೆ. ಇದು ಭಾರತೀಯ ಮುಸ್ಲಿಮರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದಕ್ಕೆ ತಳ್ಳುವ ಪ್ರಯತ್ನಗಳಲ್ಲಿ ಒಂದಾಗಿದೆ.

2. ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿದಂತೆ ಹಲವು ಮಸೀದಿಗಳಿಗೆ ಈಗ ಅಪಾಯ ನಿರ್ಮಾಣವಾಗಿದೆ. ಅವುಗಳನ್ನು ನಾಶಪಡಿಸಬಹುದು.

3. ಭಾರತದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಈ ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳು ‘ಬಾಬ್ರಿಯ ಪತನ ಮತ್ತು ಶ್ರೀರಾಮ ಮಂದಿರದ ಉದ್ಘಾಟನೆ ಈ ಘಟನೆ ಪಾಕಿಸ್ತಾನದ ಕೆಲವು ಭಾಗಗಳ ಮೇಲೆ ಪುನಃ ಹಿಡಿತ ಸಾಧಿಸಲು ಮೊದಲ ಹೆಜ್ಜೆಗಳು’ ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ಸಮಾಜವು ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಂ ದ್ವೇಷ ಮತ್ತು ಇತರೆ ದ್ವೇಷಗಳ ಹೇಳಿಕೆಗಳ ಕಡೆಗೆ ಗಮನಹರಿಸಬೇಕು.

4. ವಿಶ್ವಸಂಸ್ಥೆ ಮತ್ತು ಇತರ ಅಂತರಾಷ್ಟ್ರೀಯ ಸಂಘಟನೆಗಳು ಭಾರತದಲ್ಲಿ ಪ್ರಾಚೀನ ಇಸ್ಲಾಮಿಕ ವಾಸ್ತುಗಳನ್ನು ಕಟ್ಟರವಾದಿ ಗುಂಪುಗಳಿಂದ ರಕ್ಷಿಸಬೇಕು, ಹಾಗೆಯೇ ಭಾರತದಲ್ಲಿನ ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಪಾಕಿಸ್ತಾನ ಇದಕ್ಕಾಗಿ ಭಾರತ ಸರಕಾರಕ್ಕೆ ಆಗ್ರಹಿಸುತ್ತಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಕಳೆದ 75 ವರ್ಷಗಳಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದು, ಹಿಂದೂಗಳ ಮಂದಿರಗಳು ನಾಶವಾದರೂ ಆಶ್ಚರ್ಯವಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಪಾಕಿಸ್ತಾನ ಭಾರತದ ಮೇಲೆ ಬೆರಳು ತೋರಿಸುವುದೆಂದರೆ, `ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಒರೆಸಿದಂತಿದೆ’ ಎನ್ನುವಂತಿದೆ.

ಪಾಕಿಸ್ತಾನವು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಚಿಂತಿಸುವ ಬದಲು, ತನ್ನ ದೇಶದ ಪ್ರಜಾಪ್ರಭುತ್ವದ ಬಗ್ಗೆ ಮೊದಲು ಚಿಂತಿಸಬೇಕು !