ಅಯ್ಯೋದ್ಯೆಯಿಂದ ‘ಸನಾತನ ಪ್ರಭಾತ’ದ ವಿಶೇಷ ವರದಿ
ಅಯೋಧ್ಯೆ, ಜನವರಿ ೨೩ (ವಾರ್ತೆ.) – ಶ್ರೀ ರಾಮಲಲ್ಲಾ ವಿರಾಜಮಾನವಾಗಿದ್ದು ಅವನ ಅಲೌಕಿಕ ದರ್ಶನಕ್ಕಾಗಿ ಲಕ್ಷಾಂತರ ಹಿಂದುಗಳು ಅಯೋಧ್ಯೆಗೆ ಬರುತ್ತಿದ್ದಾರೆ. ರಾಮಮಯವಾಗಿರುವ ಅನುಭೂತಿ ಅವರಿಗೆ ಬೇಕು ಎಂದು ಸಂಪೂರ್ಣ ಅಯೋಧ್ಯಾನಗರ ದೈವಿ ಘಟನೆಗಳಿಂದ ಹಾಗೂ ಅತ್ಯಂತ ಸುಂದರ ರೀತಿಯಲ್ಲಿ ಅಲಂಕರಿಸಿದ್ದರು.
ಪಕ್ಷಿಗಳ ಗೂಡಿನಂತೆ ಮರದ ಮೇಲೆ ದೀಪದ ಅಲಂಕಾರ !
ಮರದ ಮೇಲೆ ಯಾವ ರೀತಿ ಗೀಜಗ ಗೂಡು ಕಟ್ಟುತ್ತದೆ, ಅದೇ ರೀತಿ ಅಯೋಧ್ಯೆನಗರದ ಮುಖ್ಯ ಮಾರ್ಗಗಳಲ್ಲಿ ಮರಗಳ ಮೇಲೆ ಆಕರ್ಷಕ ರೀತಿಯಲ್ಲಿ ದೀಪಗಳ ಅಲಂಕಾರ ಮಾಡಲಾಗಿತ್ತು. ರಾತ್ರಿಯ ಸಮಯದಲ್ಲಿ ಮರದ ಮೇಲಿನ ದೀಪಗಳು ರಸ್ತೆಯ ಮೇಲೆ ಬೆಳಕು ಚೆಲ್ಲುತ್ತಿದ್ದವು ಆದ್ದರಿಂದ ಈ ದೀಪಗಳಿಂದ ಮರಗಳು ಆಕರ್ಷಕವಾಗಿ ಕಾಣುತ್ತಿದ್ದವು. ಅಯೋಧ್ಯೆನಗರದ ಮುಖ್ಯಮಾರ್ಗದಲ್ಲಿ ಮರದ ಮೇಲೆ ಈ ರೀತಿಯಲ್ಲಿ ದೀಪಗಳನ್ನು ಹಾಕಿದ್ದರು.
ಪ್ರದಕ್ಷಿಣೆಯ ಮಾರ್ಗದಲ್ಲಿ ಸಾಕಾರಗೊಂಡಿರುವ ರಾಮಾಯಣದ ಗಮನ ಸೆಳೆಯುವ ದೃಶ್ಯಗಳು
ಅಯೋಧ್ಯೆಯಲ್ಲಿನ ಮುಖ್ಯಮಾರ್ಗದಲ್ಲಿನ ಪಾದಚಾರಿ ಮಾರ್ಗದ ಗೋಡೆಗಳ ಮೇಲೆ ಶಿಲ್ಪಗಳಂತೆ ರಾಮಾಯಣದಲ್ಲಿನ ಘಟನೆಗಳು ಸಾಕಾರಗೊಂಡಿದ್ದವು. ಈ ಚಿತ್ರಗಳು ಬಹಳ ಆಕರ್ಷಕವಾಗಿದ್ದು ಆ ಚಿತ್ರಗಳನ್ನು ನೋಡಿದರೆ ರಾಮಾಯಣದ ಕಥೆ ಕಣ್ಣು ಮುಂದೆ ಬರುತ್ತಿತ್ತು. ಇದರಲ್ಲಿ ಹನುಮಂತನು ಸಮುದ್ರದ ಮೇಲಿಂದ ಹಾರುವುದು, ಸೀತಾಪಹರಣ, ಶ್ರೀ ರಾಮನು ಮಾಡಿರುವ ಧನುಷ್ಯ ಭಂಜನ ಮುಂತಾದ ಚಿತ್ರಗಳ ಮೂಲಕ ರಾಮಾಯಣ ಸಾಕಾರಗೊಂಡಿತ್ತು.
ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಿರುವ ಭವ್ಯ ಪ್ರವೇಶ ದ್ವಾರ !
ಶ್ರೀರಾಮ ಮಂದಿರದ ಕಡೆಗೆ ಹೋಗುವ ಎಲ್ಲಾ ಪ್ರವೇಶದ್ವಾರಗಳು ಆಕರ್ಷಕ ರೀತಿಯಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದರು. ಇದರಲ್ಲಿ ಮುಖ್ಯ ಪ್ರವೇಶ ದ್ವಾರ ಭವ್ಯವಾಗಿದ್ದು ಅಲ್ಲಿ ಭಕ್ತರನ್ನು ಸ್ವಾಗತಿಸಲಾಯಿತು. ಇತರ ಒಂದು ಪ್ರವೇಶ ದ್ವಾರದಲ್ಲಿ ಒಂದು ಬದಿಗೆ ೫ ಹಾಗೂ ಇನ್ನೊಂದು ಬದಿಗೆ ೫ ಆನೆಗಳ ೧೦ ಮೂರ್ತಿಗಳು ಇಟ್ಟಿದ್ದರು. ಎಲ್ಲಾ ಮೂರ್ತಿಗಳು ಹೂವಿನಿಂದ ಅಲಂಕರಿಸಲಾಗಿತ್ತು.