ಭಾರತ ಮತ್ತು ಮಾಲ್ಡೀವ್ಸ್ ವಿದೇಶಾಂಗ ಸಚಿವರ ನಡುವೆ ಚರ್ಚೆ !

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಉದ್ವಿಗ್ನತೆ ಪ್ರಕರಣ

ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನು ಹಿಂಪಡೆಯುವ ಸೂತ್ರದ ಬಗ್ಗೆ ಚರ್ಚೆ !

ಎಡದಿಂದ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೋಸಾ ಜಮೀರ್

ಕಂಪಾಲಾ (ಉಗಾಂಡಾ) – ಲಕ್ಷದ್ವೀಪ ಪ್ರಕರಣದ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಉಂಟಾದಾಗ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೋಸಾ ಜಮೀರ್ ಅವರನ್ನು ಇಲ್ಲಿ ಭೇಟಿಯಾದರು. ‘ನಾನ್-ಅಲೈಂಡ್ ಮೂಮೇಂಟ್’ (ನಾಮ) ಶೃಂಗಸಭೆಗಾಗಿ ಅವರು ಇಲ್ಲಿಗೆ ಬಂದಾಗ ಈ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಸಂಬಂಧ ಮತ್ತು ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವ ಸೂತ್ರದ ಕುರಿತು ಚರ್ಚಿಸಿದರು. ಇದರೊಂದಿಗೆ, ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಮತ್ತು ‘ಸರ್ಕ್’ ಮತ್ತು ‘ನಾಮ’ ಸಂಘಟನೆಗಳಲ್ಲಿ ಎರಡೂ ದೇಶಗಳ ಭಾಗವಹಿಸುವಿಕೆಯ ಬಗ್ಗೆಯೂ ಚರ್ಚಿಸಲಾಯಿತು. ಪ್ರಸ್ತುತ 88 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಉಭಯ ದೇಶಗಳ ನಡುವೆ ಸೇನೆ ವಾಪಸಾತಿ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.