ಹಿಂದೂ ಜನಜಾಗೃತಿ ಸಮಿತಿ ಹಾಗೂ ಶಾಸಕ ಟಿ. ರಾಜಾ ಸಿಂಗ್ ಸಭೆ ರದ್ದು ಪಡಿಸಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

  • ಹಿಂದೂದ್ವೇಷಿಗಳಿಗೆ ಸುಪ್ರೀಂ ಕೋರ್ಟ್ ನಿಂದ ಕಪಾಳ ಮೋಕ್ಷ !

  • ಸಭೆಗಳಲ್ಲಿ ದ್ವೇಷದ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅರ್ಜಿದಾರ ಶಾಹೀನ್ ಅಬ್ದುಲ್ಲಾ ಆರೋಪಿಸಿದ್ದರು !

ನವ ದೆಹಲಿ – ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಹಿಂದೂ ಜನಜಾಗೃತಿ ಸಮಿತಿ ಮತ್ತು ಶಾಸಕ ಟಿ. ಸಭೆಯನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಸಮಿತಿ ಮತ್ತು ಶಾಸಕ ಸಿಂಗ್ ಅವರ ಸಭೆಗಳನ್ನು ನಿಷೇಧಿಸಬೇಕೆಂದು ಅರ್ಜಿದಾರರಾದ ಶಾಹೀನ್ ಅಬ್ದುಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ‘ಹಿಂದೂ ಜನಜಾಗೃತಿ ಸಮಿತಿ ಮತ್ತು ಬಿಜೆಪಿ ಸೇರಿ ಜನವರಿ 18 ರಂದು ಮಹಾರಾಷ್ಟ್ರದ ಯವತಮಾಳ್ ನಲ್ಲಿ ಮತ್ತು ಜನವರಿ 19 ರಿಂದ 25 ರವರೆಗೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಸಭೆಗಳನ್ನು ಆಯೋಜಿಸಿದೆ’ ಎಂದು ಅರ್ಜಿದಾರರು ತಿಳಿಸಿದ್ದರು. ಈ ಸಂಬಂಧ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಈ ವೇಳೆ ಯವತಮಾಳ್ ಮತ್ತು ರಾಯ್‌ಪುರದಲ್ಲಿ ನಡೆಯುವ ಸಭೆಗಳಲ್ಲಿ ಯಾವುದೇ ದ್ವೇಷದ ಮಾತುಗಳು ನಡೆಯದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಜೊತೆಗೆ ಸಭೆಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದೆ.

1. ಸಭೆಗಳು ಯಾವುದೇ ರೀತಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಅಲ್ಲದೆ, ಅಗತ್ಯಬಿದ್ದರೆ, ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವಂತೆ ಪೊಲೀಸರಿಗೂ ಸೂಚಿಸಬೇಕು.

2. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಾಂಕರ್ ದತ್ತಾ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

ವಕೀಲ ಕಪಿಲ್ ಸಿಬ್ಬಲ್ ಇವರಿಗೆ ನ್ಯಾಯಾಲಯದಿಂದ ಛೀಮಾರಿ !

ವಕೀಲ ಸಿಬ್ಬಲ್ : ಏನಾದರೂ ಸಂಭವಿಸಿದಾಗ, ನಾವು ನ್ಯಾಯಾಲಯಕ್ಕೆ ಬರುತ್ತೇವೆ ಮತ್ತು ನಂತರ ಪ್ರಕರಣವನ್ನು ದಾಖಲಿಸಲಾಗುತ್ತದೆ; ಆದರೆ ಮುಂದೆ ಏನೂ ಆಗುವುದಿಲ್ಲ. ನಂತರ ಅಂತಹ ಭಾಷಣಗಳು ಮುಂದುವರಿಯುತ್ತವೆ. ಇದಕ್ಕೆ ಅರ್ಥ ಇಲ್ಲ ? ಇದರಿಂದ ಯಾವರೀತಿ ದ್ವೇಷ ಹರಡುತ್ತದೆ ನೋಡಿ!

ನ್ಯಾಯಾಧೀಶರು : ನಾವು ಹಿಂದಿನ ಭಾಷಣಗಳ ವೀಡಿಯೊಗಳನ್ನು ನೋಡಿದ್ದೇವೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಇತರೆ ಸೂಚನೆಗಳನ್ನು ನೀಡಿದ್ದೇವೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರೆ, ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ; ಆದರೆ ಮುಂಚಿತವಾಗಿ ಸಂಭವಿಸುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ನಿಮ್ಮ ಮನವಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಅಥವಾ ಟಿ. ರಾಜಾ ಸಿಂಗ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿಲ್ಲ. ಅಂತಹ ಸಂದರ್ಭಗಳಲ್ಲಿ, ನೈಸರ್ಗಿಕ ನ್ಯಾಯದ ದೃಷ್ಟಿಕೋನದಿಂದ, ಅವರ ಭಾಷಣಗಳನ್ನು ನಿಷೇಧಿಸುವುದು ಸೂಕ್ತವಲ್ಲ ಎಂದು ಹೇಳಿದರು.

ವಕೀಲ ಸಿಬ್ಬಲ್ : ಇದು (ದ್ವೇಷದ ಭಾಷಣ) ನಡೆಯುತ್ತಲೇ ಇರುತ್ತದೆ.

ನ್ಯಾಯಮೂರ್ತಿ : ಒಮ್ಮೆ ನಾವು ನಿರ್ದೇಶನಗಳನ್ನು ನೀಡಿದ್ದೆವು, ಅಂತಹ ಯಾವುದೇ ಹೇಳಿಕೆಗಳನ್ನು ನೀಡಲಾಗಿಲ್ಲ. ಆದರೂ, ನೀವು ಸಕರಾತ್ಮಕವಾಗಿರಬೇಕು. ನಕಾರಾತ್ಮಕ ದೃಷ್ಟಿಕೋನದಿಂದ ಏಕೆ ಯೋಚಿಸಬೇಕು ?

ಅರ್ಜಿಯ ಮೂಲಕ ಸಂತ್ರಸ್ತ ಹಿಂದೂಗಳನ್ನು ‘ಆಕ್ರಮಣಕಾರರು’ ಎಂದು ತೋರಿಸಿ ಹಿಂದುತ್ವದ ಧ್ವನಿಯನ್ನು ಮುಚ್ಚುವ ಪ್ರಯತ್ನ ! – ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ

ಈ ಅರ್ಜಿಯ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಅವರನ್ನು ಸಂಪರ್ಕಿಸಿದಾಗ, “ಹಿಂದುತ್ವನಿಷ್ಠರ ಸುಳ್ಳು ಹೇಳಿಕೆಗಳ ವಿರುದ್ಧ ಅರ್ಜಿ ಸಲ್ಲಿಸಿದ ಅರ್ಜಿದಾರರು ಓವೈಸಿ ಸಹೋದರರ ಪ್ರಚೋದನಕಾರಿ ಭಾಷಣ ಹೇಗೆ ಕಾಣುವುದಿಲ್ಲ ?” ‘ಸರ್ ತಾನ್ ಸೆ ಜುದಾ’ (ತಲೆಯನ್ನು ದೇಹದಿಂದ ಬೇರ್ಪಡಿಸುವುದು) ಎಂಬ ಪ್ರಚೋದನಕಾರಿ ಘೋಷಣೆಗಳನ್ನು ಮಾಡುವವರ ವಿರುದ್ಧ ಅವರು ಏಕೆ ಮಾತನಾಡುವುದಿಲ್ಲ ? ಮೌಲಾನಾ ಮಾಡಿದ ಪ್ರಚೋದನಕಾರಿ ಭಾಷಣಗಳ ಬಗ್ಗೆ ಈ ಅರ್ಜಿದಾರರು ಏಕೆ ಮೌನವಾಗಿದ್ದಾರೆ ? ಹಿಂದುತ್ವನಿಷ್ಠರಿಂದ ‘ಮುಸ್ಲಿಮರ ನರಮೇಧದಂತಹ ಭಾಷೆಯನ್ನು ಬಳಸುತ್ತಿದ್ದಾರೆ’, ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮೂಲತಃ ಕಾಶ್ಮೀರದಲ್ಲಿ ಹಿಂದೂಗಳು ನರಮೇಧವಾಗಿದೆ. ಪಾಕಿಸ್ತಾನದಲ್ಲಿ, ಬಂಗಾಳದಲ್ಲಿ ಹಿಂದೂಗಳ ನರಮೇಧ ಮಾಡಲು ಪ್ರಯತ್ನಿಸಲಾಗುತ್ತಿದೆ. ಹೀಗಿರುವಾಗ ಸಂತ್ರಸ್ತ ಹಿಂದೂಗಳಿಗೆ ‘ಆಕ್ರಮಣಕಾರರು’ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯ ವಿರುದ್ಧ ಇಂತಹ ಅರ್ಜಿಗಳನ್ನು ನಮೂದಿಸಿ ಹಿಂದುತ್ವದ ಧ್ವನಿಯನ್ನು ಅಡಗಿಸುವ ಪ್ರಯತ್ನ ಇದಾಗಿದೆ”, ಎಂದು ಹೇಳಿದರು.