ಕಾರಸೇವಕರ ಬಲಿದಾನ ಎಂದು ಮರೆಯುವುದಿಲ್ಲ ! – ಓಂ ಭಾರತಿ

೧೯೯೦ ರಲ್ಲಿ ೧೨೫ ಕಾರಸೇವಕರಿಗೆ ಆಶ್ರಯ ನೀಡಿರುವ ಶ್ರೀಮತಿ ಓಂ ಭಾರತಿ ಇವರಿಗೆ ಉದ್ಘಾಟನೆಯ ಆಮಂತ್ರಣ

ಶ್ರೀಮತಿ ಓಂ ಭಾರತಿ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದ ಉದ್ಘಾಟನೆಗಾಗಿ ೮ ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಶ್ರೀಮತಿ ಓಂ ಭಾರತಿ ಇವರು ಕೂಡ ಒಬ್ಬರು. ೧೯೯೦ ರಲ್ಲಿ ರಾಜ್ಯದಲ್ಲಿ ಮುಲಾಯಂ ಸಿಂಹ ಇವರ ಸರಕಾರ ಇರುವಾಗ ಅಯೋಧ್ಯೆಗೆ ಬಂದಿರುವ ಕಾರಸೇವಕರ ಮೇಲೆ ಗುಂಡು ಹಾರಾಟ ಮಾಡಲಾಗಿತ್ತು. ಆ ಸಮಯದಲ್ಲಿ ೧೨೫ ಕಾರಸೇವಕರಿಗೆ ಓಂ ಭಾರತಿ ಇವರು ಮನೆಯಲ್ಲಿ ಆಶ್ರಯ ನೀಡಿ ಅವರ ರಕ್ಷಣೆಯನ್ನು ಮಾಡಿದ್ದರು. ಆ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರಾದ ಅಶೋಕ ಸಿಂಘಾಲ ಇವರು ಕೂಡ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆಗ ನಡೆದಿರುವ ಗುಂಡು ಹಾರಾಟದಲ್ಲಿ ಕೊಲಕಾತಾದ ಕೋಠಾರಿ ಬಂದುಗಳು ಹುತಾತ್ಮರಾದರು. ಇವರು ಕೂಡ ಓಂ ಭಾರತಿ ಇವರ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಓಂ ಭಾರತಿ ಇವರು, ನವಂಬರ್ ೨, ೧೯೯೦ ರಂದು ಆಗಿನ ಮುಲಾಯಂ ಸಿಂಹ ಸರಕಾರವು ಪೊಲೀಸರಿಗೆ ಕಾರಸೇವಕರ ಮೇಲೆ ಗುಂಡು ಹಾರಿಸುವ ಆದೇಶ ನೀಡಿತ್ತು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಗುಂಡು ಹಾರಿಸುವ ಆದೇಶ ನೀಡಿದ್ದರು, ಎಂದು ಹೇಳಿದರು. ಈಗ ಶ್ರೀರಾಮಮಂದಿರದ ಉದ್ಘಾಟನೆ ಆಗುತ್ತಿದೆ. ಅದರ ಆನಂದ ಮತ್ತು ಸಮಾಧಾನ ಇದೆ; ಆದರೆ ನನ್ನ ಕಾರಸೇವಕರ ಬಲಿದಾನ, ಹರಿದಿರುವ ಅವರ ರಕ್ತ ಮತ್ತು ಅವರು ಸಹಿಸಿರುವ ದುಃಖ ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕೋಠಾರಿ ಬಂಧು ನನ್ನ ಮನೆಯಲ್ಲಿ ಅಡಗಿದ್ದರು. ಗುಂಡಿನಿಂದ ತಮ್ಮ ಜೀವ ರಕ್ಷಿಸಿಕೊಳ್ಳುವುದಕ್ಕಾಗಿ ಅವರು ನಮ್ಮ ಮನೆಯ ಆಶ್ರಯ ಪಡೆದಿದ್ದರು. ಮನೆಯಿಂದ ಹೊರಗೆ ಹೋಗುತ್ತಲೇ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಶ್ರೀರಾಮಮಂದಿರಕ್ಕಾಗಿ ಅವರು ಹುತಾತ್ಮರಾದರು. ಆ ಸಮಯದಲ್ಲಿ ಕಾಂಗ್ರೆಸ್ ಕೇವಲ ವೀಕ್ಷಿಸುವ ನಿಲುವು ತಾಳಿತ್ತು. ಅವರು ಯಾವುದೇ ಸಹಾಯ ಮಾಡಲಿಲ್ಲ. ಆ ಸಮಯದಲ್ಲಿ ಮುಖ್ಯಮಂತ್ರಿ ಮುಸಲ್ಮಾನ ಮತದಾರನ್ನು ಸಂತೋಷಪಡಿಸುತ್ತಿದ್ದರು. ಅದಕ್ಕಾಗಿ ಅವರು ಕಾರಸೇವಕರ ಮೇಲೆ ಗುಂಡು ಹಾರಿಸುವ ಆದೇಶ ನೀಡಿದ್ದರು ಎಂದು ಹೇಳಿದರು.

(ಸೌಜನ್ಯ: India Today)