ಇರಾನ್‌ನಿಂದ ಇರಾಕ್‌ನ ‘ಮೋಸದ್’ ಕೇಂದ್ರದ ಮೇಲೆ ಕ್ಷಿಪಣಿಯಿಂದ ದಾಳಿ, ೪ ಸಾವು !

ಇರಾನಿ ಸೈನ್ಯಾಧಿಕಾರಿಯ ಹತ್ಯೆಯ ಸೇಡು ! – ಇರಾನ್

ತೆಹರಾನ್ (ಇರಾನ್) – ಇರಾನ್‌ನ ವಿಶೇಷ ಸೈನ್ಯದಿಂದ ಇರಾಕ್ ನಲ್ಲಿನ ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದ್‌ದ ಕಾರ್ಯಾಲಯದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ೪ ಜನರು ಸಾವನ್ನಪ್ಪಿದರು. ಇರಾನ್‌ ರಾಜ್ಯ ವಾರ್ತಾಸಂಸ್ಥೆ ‘ಐ.ಆರ್.ಎನ್.ಎ. ನೀಡಿರುವ ಮಾಹಿತಿಯ ಪ್ರಕಾರ ಇರಾನ್ ವಿರೋಧಿ ‘ಭಯೋತ್ಪಾದಕ’ ಗುಪ್ತಚರ ಕೇಂದ್ರದ ಮೇಲೆ ಕ್ಷಿಪಣಿಯಿಂದ ದಾಳಿ ಮಾಡಲಾಗಿದೆ. ಇಸ್ರೇಲ್ ನಿಂದ ಇಲ್ಲಿಯವರೆಗೆ ಈ ದಾಳಿಯ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಹೇಳಿದೆ.

೧. ಇಸ್ರೇಲ್ ದಾಳಿಯಲ್ಲಿ ಹತರಾಗಿರುವ ಅವರ ಸೈನ್ಯಧಿಕಾರಿಯ ಸೇಡು ತೀರಿಕೊಳ್ಳಲು ಈ ದಾಳಿ ಮಾಡಿರುವುದಾಗಿ ಹೇಳಿದೆ. ಕಳೆದ ಕೆಲವು ದಿನದಲ್ಲಿ ಇಸ್ರೇಲ್ ನಿಂದ ಸಿರಿಯಾ ಮತ್ತು ಲೆಬಿನಾನ್ ಮೇಲೆ ದಾಳಿ ನಡೆಸಲಾಗಿತ್ತು. ಡಿಸೆಂಬರ್ ೨೫, ೨೦೨೩ ರಂದು ಇರಾನಿನ ಬ್ರಿಗೆಡಿಯರ್ ಜನರಲ್ ರಾಜಿ ಮುಸಾವಿ ಮತ್ತು ಹಮಾಸ್ ದ ಉಪನಾಯಕ ಸಾಲೇಹ ಅಲ್ ಅರೋರಿ ಹತರಾದರು.

೨. ಇನ್ನೊಂದು ಕಡೆ ನ್ಯೂಯಾರ್ಕ್ ಟೈಮ್ಸ್ ನೀಡಿರುವ ಮಾಹಿತಿಯ ಪ್ರಕಾರ ಇರಾಕಿನ ಕುರ್ದಿಸ್ತಾನದ ರಾಜಧಾನಿ ಎರಬಿಲ್ ನಿಂದ ಸುಮಾರು ೪೦ ಕಿಮೀ ಉತ್ತರ ಪೂರ್ವದಲ್ಲಿ ಇರುವ ಅಮೇರಿಕಾದ ರಾಯಭಾರಿ ಕಚೇರಿಯ ಹತ್ತಿರ ಇರಾನಿನ ದಾಳಿ ಮಾಡಿತ್ತು.

೩. ಇರಾನಿನ ದಾಳಿಯ ಬಗ್ಗೆ ಅಮೆರಿಕವು, ಇರಾನಿನ ಇದು ಆತುರದ ನಿರ್ಧಾರವಾಗಿದೆ. ಈ ದಾಳಿ ಇರಾಕಿನ ಸ್ಥಿರತೆಗೆ ದೊಡ್ಡ ಆಘಾತವಾಗಿದೆ ಎಂದು ಹೇಳಿದೆ.

೪. ಗಾಝಾದಲ್ಲಿ ಹಮಾಸ್ ಮತ್ತು ಇಸ್ರೇಲ್ ಇವರಲ್ಲಿ ಯುದ್ಧ ನಡೆದ ನಂತರ ಇರಾನ್ ಮತ್ತು ಅಮೆರಿಕ ನಡುವೆ ಪರೋಕ್ಷ ಯುದ್ಧ ಆರಂಭ ಆಗಿತ್ತು. ಎರಡು ದೇಶ ಇರಾಕ್ ಮತ್ತು ಸಿರಿಯಾ ಇಲ್ಲಿ ಪರಸ್ಪರರ ಗುರಿಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದ ಕಳೆದ ವಾರದಲ್ಲಿ ಇರಾಕದ ಪ್ರಧಾನಮಂತ್ರಿ ಮಹಮ್ಮದ್ ಶಿಯಾ ಅಲ್ ಸುದಾನಿ ಇವರು ಅಮೇರಿಕಾದ ಬಳಿ ಅವರ ನೇತೃತ್ವದಲ್ಲಿನ ಸೈನ್ಯವನ್ನು ದೇಶದಿಂದ ಹಿಂಪಡೆಯಲು ಆಗ್ರಹಿಸಿದ್ದರು.