ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈರುಳ್ಳಿ ಕೆ.ಜಿ.ಗೆ 250 ರೂಪಾಯಿ !

ಹಂಗಾಮಿ ಸರಕಾರದ ಕಾಲಾವಧಿಯಲ್ಲಿ 12.43 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಹೆಚ್ಚಾಗಿದೆ.

ಇಸ್ಲಾಮಾಬಾದ್ (ಪಾಕಿಸ್ತಾನ) – ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಬೆಲೆಯೇರಿಕೆ ಗಗನಕ್ಕೇರಿದೆ. ಲಾಹೋರ್ ನಲ್ಲಿ ಒಂದು ಡಜನ್ ಮೊಟ್ಟೆಯ ಬೆಲೆ 400 ಪಾಕಿಸ್ತಾನಿ ರೂಪಾಯಿಗಳು ಮತ್ತು ಈರುಳ್ಳಿ ಕೆ.ಜಿ. 250 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಸರಕಾರ ಕೆಲವು ಪದಾರ್ಥಗಳ ಬೆಲೆಯನ್ನು ನಿಗದಿ ಮಾಡುವಲ್ಲಿ ಸಂಪೂರ್ಣವಾಗಿ ಸೋತಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆಯೆನ್ನಲಾಗಿದೆ. ಕಳೆದ ಒಂದು ವರ್ಷದಿಂದ ಹಂಗಾಮಿ ಸರಕಾರ ಅಧಿಕಾರದಲ್ಲಿದ್ದು, ಫೆಬ್ರವರಿ 8 ರಂದು ಸಂಸತ್ತಿಗೆ ಚುನಾವಣೆ ನಡೆಯಲಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದನೆ ಮತ್ತು ಭಾರತದ ಮೇಲಿನ ದ್ವೇಷದ ಅಡಿಪಾಯ ಹಾಕಿರುವ ಮತ್ತು ಅದರಲ್ಲಿ ಚೀನಾ ಡ್ರ್ಯಾಗನನೊಂದಿಗೆ ವಿವಿಧ ಒಪ್ಪಂದಗಳಿಗೆ ಸಹಿಹಾಕಿರುವ ಪಾಕಿಸ್ತಾನದ ಪರಿಸ್ಥಿತಿ ಇನ್ನೇನಾಗಲು ಸಾಧ್ಯ ?