ಹಿಂದೂಗಳು ಧರ್ಮಕ್ಕಾಗಿ ಸಮಯವನ್ನು ಮೀಸಲಿಡಬೇಕು – ಶ್ರೀ ಸಂದೀಪ್ ಗುರೂಜಿ, ಹಿಂದೂ ರಾಷ್ಟ್ರ ಸೇನೆ

ಉಡುಪಿ (ಕರ್ನಾಟಕ) – “ಭಾರತದಾದ್ಯಂತ ಹಿಂದೂಗಳು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ 195 ದೇಶಗಳಿವೆ, ಅದರಲ್ಲಿ 136 ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತವೆ ಮತ್ತು 56 ಇಸ್ಲಾಂ ಧರ್ಮವನ್ನು ಅನುಸರಿಸುತ್ತವೆ. ಹಿಂದೂ ಬಹುಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಕೇವಲ 3 ದೇಶಗಳಿವೆ. ನಮ್ಮ ಋಷಿ-ಮುನಿಗಳ ತಪಸ್ಸು, ವೇದಗಳು ಮತ್ತು ಅನೇಕ ಹಿಂದೂ ಸಂಘಟನೆಗಳು ಮಾಡಿದ ಜಾಗೃತಿ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಸಂರಕ್ಷಿಸಲು ಮಾಡಿದ ಪ್ರಯತ್ನಗಳಿಂದಾಗಿ ಭಾರತದಲ್ಲಿ ಹಿಂದೂ ಧರ್ಮವು ಉಳಿದಿದೆ ” ಎಂದು ಹಿಂದೂ ರಾಷ್ಟ್ರ ಸೇನೆಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ ಸಂದೀಪ್ ಗುರೂಜಿ ಹೇಳಿದ್ದಾರೆ. ಅವರು ಜನವರಿ 7 ರಂದು ಇಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಅಧಿವೇಶದಲ್ಲಿ ಮಾತನಾಡುತ್ತಿದ್ದರು.

ಶ್ರೀ ಸಂದೀಪ್ ಗುರೂಜಿ

1. ನಾವು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಬಗ್ಗೆ ಮಾತನಾಡುವಾಗ, ನಾವು ನಮ್ಮ ಇತಿಹಾಸವನ್ನು ಸಹ ತಿಳಿದುಕೊಳ್ಳಬೇಕು, 1989-1990 ರ ಘಟನೆಗಳನ್ನು ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ ಎಂದು ನೆನಪಿಸಿಕೊಳ್ಳಿ. ಭಯೋತ್ಪಾದಕರು ಮಸೀದಿಗಳಲ್ಲಿ ಆಶ್ರಯ ಪಡೆದರು ಮತ್ತು ಮಧ್ಯರಾತ್ರಿಯಲ್ಲಿ ಅಮಾಯಕ ಹಿಂದೂ ಕಾಶ್ಮೀರಿ ಪಂಡಿತರ ಮೇಲೆ ಹೇಳಲಾಗದಷ್ಟು ಭಯಾನಕ ಚಿತ್ರಣವನ್ನು ಆ ಚಲನಚಿತ್ರದ ಮೂಲಕ ಬಿಚ್ಚಿಟ್ಟರು. 4 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ತಮ್ಮ ಎಲ್ಲಾ ಆಸ್ತಿ ಮತ್ತು ಸಂಪತ್ತನ್ನು ಬಿಟ್ಟು ರಾತ್ರೋರಾತ್ರಿ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಬೇಕಾಯಿತು.

2. 2022 ರಲ್ಲಿ PFI ಮತ್ತು SDPI ಮೇಲೆ NIA ನಡೆಸಿದ ದಾಳಿಗಳಿಂದ ಭಾರತವನ್ನು 2047 ರ ವೇಳೆಗೆ ಗಜ್ವಾ ಎ-ಹಿಂದ್ ಆಗಿ ಪರಿವರ್ತಿಸುವ ಯೋಜನೆಯು ಬಯಲಾಯಿತು. ಇಂಡಿಯನ್‌ ಮುಜಾಹಿದ್ದೀನ್, ಇಸ್ಲಾಮಿಕ್ ಮತಾಂಧರು ಮತ್ತು ಅವರ ಬೆಂಬಲಿಗರು ಇವರೆಲ್ಲ ಭಾರತದ್ರೋಹಿಗಳಾಗಿದ್ದು ಯುವಕರನ್ನು ಉಗ್ರವಾದಿಗೊಳಿಸುತ್ತಾರೆ ಮತ್ತು ಇಸ್ಲಾಂಗೆ ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಶಕ್ತಿಗಳ ವಿರುದ್ಧ ನಾವು ಎಚ್ಚರದಿಂದಿರಬೇಕು ಮತ್ತು ಎದುರಿಸಲು ತತ್ಪರರಿರಬೇಕು.

3. ದಾವಣಗೆರೆಯಲ್ಲಿ ವೀರಶೈವ ಮಹಾಸಭಾವು ಸತ್ಯಶೋಧನಾ ಮಿಷನ್ ಆಯೋಜಿಸಿತು. ಲಂಬಾಣಿ, ಕುರುಬ, ವೀರಶೈವ, ಲಿಂಗಾಯತ, ಬ್ರಾಹ್ಮಣ ಮುಂತಾದ ಅನೇಕ ಹಿಂದೂ ಸಮುದಾಯದ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದನ್ನು ಅವರು ಕಂಡುಕೊಂಡರು. ಒಂದು ಕಡೆ ಇಸ್ಲಾಮಿಸ್ಟ್‌ಗಳು ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳಿಸುತ್ತಾರೆ, ಇನ್ನೊಂದು ಕಡೆ ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಾರೆ.

4. ಭಾರತದ 2011 ರ ಜನಗಣತಿಯು 10 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ತೋರಿಸಿದೆ. ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಿದ್ದರೆ ಕೇರಳ, ತಮಿಳುನಾಡು ಮತ್ತು ಪಂಜಾಬ್‌ನಲ್ಲಿ ಹಿಂದೂಗಳ ಮತಾಂತರಗಳು ಹೆಚ್ಚುತ್ತಿವೆ.

5. ಕರ್ನಾಟಕದ ಧರ್ಮಸ್ಥಳದಲ್ಲಿ, ನಾವು ಹಿಂದೂಗಳ ಮನೆಗಳನ್ನು ಗಮನಿಸಿದ್ದೇವೆ, ಅಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಫೋಟೋವನ್ನು ತೆಗೆದು ಯೇಸುಕ್ರಿಸ್ತನನ್ನು ಇರಿಸಲಾಗಿದೆ. ಹಿಂದೂ ರಾಷ್ಟ್ರ ಸೇನೆಯು ಈ ಜನರನ್ನು ಸಂಪರ್ಕಿಸಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿತು, ಅವರಿಗೆ ಹಿಂದೂ ಧರ್ಮದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತು ಮತ್ತು ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಪರಿವರ್ತಿಸಿತು. ಶ್ರೀ ಮಂಜುನಾಥ ಸ್ವಾಮಿಯ ರುದ್ರಾಕ್ಷಿ ಮಾಲೆಯ ಭಾವಚಿತ್ರವನ್ನು ಮತ್ತೊಮ್ಮೆ ಅಳವಡಿಸಿ ಜನರಿಗೆ ದೀಕ್ಷೆ ನೀಡಲಾಯಿತು.

6. ಕ್ರಿಶ್ಚಿಯನ್ ಮಿಷನರಿಗಳು ಮತಾಂತರಕ್ಕಾಗಿ ಹಳ್ಳಿಗಳು, ಬುಡಕಟ್ಟು ಪ್ರದೇಶಗಳು, ದೂರದ ಏಕಾಂತ ಸ್ಥಳಗಳಲ್ಲಿ ಜನರನ್ನು ಗುರಿಯಾಗಿಸುತ್ತಾರೆ. ಬಲವಂತದ ಧಾರ್ಮಿಕ ಮತಾಂತರವನ್ನು ನಡೆಸುತ್ತಿರುವ ಮಿಷನರಿಗಳನ್ನು ಕಂಡಾಗಲೆಲ್ಲಾ ನಾವು ಅವರ ಮೇಲೆ ಹಲ್ಲೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಬದಲಾಗಿ, ನಾವು ಕಾನೂನುರೀತ್ಯಾ ವರ್ತಿಸಬೇಕು, ಅಂತಹ ಘಟನೆಗಳ ವೀಡಿಯೊ ಸಾಕ್ಷ್ಯವನ್ನು ಸಂಗ್ರಹಿಸಿ, ಪೊಲೀಸರಿಗೆ ದೂರು ನೀಡಬೇಕು ಮತ್ತು ಅವರ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವಕೀಲರ ಮಾರ್ಗದರ್ಶನದೊಂದಿಗೆ ಕಾನೂನು ಕ್ರಮಗಳನ್ನು ಅನುಸರಿಸಬೇಕು.

7. ಹಿಂದೂಗಳನ್ನು ಇತರ ಧರ್ಮಕ್ಕೆ ಮತಾಂತರಗೊಳಿಸಲು ಹಣ ಮತ್ತು ಔಷಧಗಳ ಆಮಿಷ ಒಡ್ಡಲಾಗುತ್ತದೆ. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಂತಹವರಿಗೆ ಹಿಂದೂ ಧರ್ಮವನ್ನು ಅನುಸರಿಸಲು ಮನವರಿಕೆ ಮಾಡಲು ನಾವು ಪ್ರಯತ್ನಿಸಬೇಕು. ಎಲ್ಲಿ ಸಾಧ್ಯವೋ ಅಲ್ಲಿ ಹಣದ ಅಥವಾ ಇತರ ರೀತಿಯ ಅಗತ್ಯತೆಯನ್ನು ಪೂರೈಸಿ ಹಿಂದೂಗಳಿಗೆ ಸಹಾಯ ಮಾಡಲು ಶಕ್ಯಾನುಸಾರ ಸಹಾಯ ಮಾಡಬೇಕು.

8. ಭಾರತವನ್ನು ಹಿಂದೂ ರಾಷ್ಟ್ರವೆಂದು ಸಾಂವಿಧಾನಿಕವಾಗಿ ಘೋಷಿಸುವುದು ಸಾಕಾಗುವುದಿಲ್ಲ. ಹಿಂದೂ ರಾಷ್ಟ್ರವೆಂದರೆ ಎಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಯಾವುದೇ ಬಲವಂತದ ಮತಾಂತರ ಇರುವುದಿಲ್ಲವೋ, ಎಲ್ಲಿ ಲವ್ ಜಿಹಾದ್ ಇರುವುದಿಲ್ಲ, ಹಲಾಲ್ ಜಿಹಾದ್ ಇರುವುದಿಲ್ಲ ಹಾಗೂ ಎಲ್ಲಿ ಹಿಂದೂ ಧರ್ಮವನ್ನು ಆಚರಣೆಯಲ್ಲಿ ತರಲಾಗುವುದೋ ಮತ್ತು ಜನರು ಸಾತ್ವಿಕರಾಗಿರುವರೋ. ಎಲ್ಲಿ ವೇದ ಮತ್ತು ಪ್ರಾಚೀನ ಗ್ರಂಥಗಳಾದ ರಾಮಾಯಣ, ಭಗವದ್ಗೀತೆ, ರಾಮಚರಿತಮಾನಸ ಇವುಗಳು ಮತ್ತೊಮ್ಮೆ ಪ್ರಾಮುಖ್ಯತೆ ಪಡೆಯುತ್ತವೆಯೋ ಇದುವೇ ನಿಜವಾದ ಹಿಂದೂ ರಾಷ್ಟ್ರ.