ಮಾಲ್ಡೀವ್ಸ್ ಪ್ರಕರಣದ ಬಗ್ಗೆ ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಮೇಲೆ ಟೀಕೆ !

ಬೀಜಿಂಗ (ಚೀನಾ) – ಕೆಲವು ಭಾರತೀಯ ನಾಯಕರು, ಮಾಲ್ಡೀವ್ ರಾಷ್ಟ್ರಾಧ್ಯಕ್ಷರಾದ ಮುಯಿಝ್ಝ ಅವರನ್ನು ‘ಚೀನಾ ಬೆಂಬಲಿಗ’ ಎಂದು ಉಲ್ಲೇಖಿಸುವುದು ಅವರ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ಚೀನಾದೊಂದಿಗೆ ಸ್ಪರ್ಧಿಸಲು ಭಾರತವು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಹಾಳುಮಾಡಿಕೊಂಡಿದೆ. ಈಗ ಅದರ ಹೊಣೆಯನ್ನು ಚೀನಾ ಮೇಲೆ ಹೊರಿಸಬಾರದು ಎಂದು ಚೀನಾ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಟೀಕಿಸಿದೆ. ಸಧ್ಯಕ್ಕೆ ಮಾಲ್ಡೀವ್ ರಾಷ್ಟ್ರಾಧ್ಯಕ್ಷರಾದ ಮಯಿಜ್ಜೂ ಚೀನಾ ಪ್ರವಾಸದಲ್ಲಿದ್ದಾರೆ. ‘ಚೀನಾ ಮಾಲ್ಡೀವ್ಸ್‌ಗೆ ಎಂದಿಗೂ ಭಾರತದಿಂದ ದೂರವಿರಲು ಹೇಳಿಲ್ಲ, ಹಾಗೆಯೇ ‘ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ, ಎಂದರೆ ಚೀನಾಕ್ಕೆ ಅಪಾಯ’ ಎನ್ನುವ ದೃಷ್ಟಿಯಿಂದ ನೋಡುವುದಿಲ್ಲ’, ಎಂದೂ ‘ಗ್ಲೋಬಲ್ ಟೈಮ್ಸ್’ ಹೇಳಿದೆ.

‘ಗ್ಲೋಬಲ್ ಟೈಮ್ಸ್’ ತನ್ನ ಪತ್ರಿಕೆಯಲ್ಲಿ,

1. ರಾಷ್ಟ್ರಾಧ್ಯಕ್ಷ ಮುಯಿಝ್ಝ ಇವರು ಚೀನಾ ಅಥವಾ ಭಾರತದ ಪರವಾಗಿಲ್ಲ. ಅವರಿಗೆ ಹಾಗೆ ಮಾಡುವ ಆವಶ್ಯಕತೆಯೂ ಇಲ್ಲ, ಅವರು ಬಹುತೇಕವಾಗಿ ತಮ್ಮ ದೇಶದ ಹಿತಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಭಾರತ ಮುಯಿಝ್ಝ ಇವರನ್ನು ಚೀನಾ ಬೆಂಬಲಿಗರೆಂದು ತಿಳಿದು ಅವರ ಮೇಲೆ ಒತ್ತಡ ಹೇರಲು ಇಚ್ಛಿಸುತ್ತಿದೆ.

2. ಚೀನಾವು ಭಾರತ ಮತ್ತು ಮಾಲ್ಡೀವ್ಸ್‌ನೊಂದಿಗೆ ತ್ರಿಪಕ್ಷೀಯ ಸಹಕಾರವನ್ನು ಕೈಗೊಳ್ಳಲು ಸಿದ್ಧವಾಗಿದೆ. ಭಾರತವು ಮುಕ್ತ ಮನಸ್ಸಿನಿಂದ ಮತ್ತು ಉದಾರವಾಗಿ ಯೋಚಿಸಬೇಕು. ಭಾರತವು ‘ತನ್ನ ಪ್ರಭಾವ ಈ ಪ್ರದೇಶದಲ್ಲಿ ನಿರಂತರವಾಗಿರಬೇಕು’, ಎಂದು ಭಾರತದ ಅಭಿಪ್ರಾಯವಿದೆ. ಮಾಲ್ಡೀವ್ಸ್ ಮತ್ತು ಇತರ ನೆರೆಯ ದೇಶಗಳು ಅದನ್ನು ಅನುಸರಿಸಿದವು ಮತ್ತು ಚೀನಾದಿಂದ ದೂರ ಉಳಿದವು. ದಕ್ಷಿಣ ಏಷ್ಯಾದ ದೇಶಗಳಿಗೆ ಚೀನಾ ದೇಶವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಇದನ್ನು ಭಾರತ ವಿಚಾರ ಮಾಡಬೇಕಾಗಿದೆ.

ಸಂಪಾದಕೀಯ ನಿಲುವು

‘ಭಾರತವು ಚೀನಾದೊಂದಿಗೆ ಸ್ಪರ್ಧಿಸುವಾಗ ನೆರೆಯ ದೇಶಗಳೊಂದಿಗೆ ಸಂಬಂಧವನ್ನು ಹಾಳುಮಾಡಿಕೊಂಡಿದೆ ಮತ್ತು ಈಗ ಅದನ್ನು ಚೀನಾ ಮೇಲೆ ಹೊರಿಸಬಾರದಂತೆ !’

‘ಭಾರತವಲ್ಲ, ಚೀನಾ ದೇಶವೇ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಹಾಳು ಮಾಡಿಕೊಂಡಿದೆ. ಚೀನಾಗೆ ಒಂದೇ ಒಂದು ಮಿತ್ರ ದೇಶವಿಲ್ಲ, ಇದು ಜಗತ್ತಿಗೆ ತಿಳಿದಿದೆ. ಚೀನಾ ಯಾವ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆಯೋ, ಅದು ಕೇವಲ ಸ್ವಾರ್ಥಕ್ಕಾಗಿಯೇ ಇದೆ. ಇದು ಬಹಿರಂಗ ಸತ್ಯವಾಗಿದೆ. ಆದುದರಿಂದ ಚೀನಾ ಭಾರತದೆಡೆಗೆ ಬೆರಳು ತೋರಿಸುವುದಕ್ಕಿಂತ ಮೊದಲು ತನ್ನ ಕಡೆಗೆ ನೋಡಿಕೊಳ್ಳಬೇಕು’, ಎಂದು ಭಾರತ ಚೀನಾ ದೇಶಕ್ಕೆ ಕಠೋರವಾಗಿ ಹೇಳಬೇಕು’