ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಐದನೆಯ ಬಾರಿ ಪ್ರಧಾನಮಂತ್ರಿ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಂದ ಶೇಖ ಹಸೀನಾ ಇವರ ಪಕ್ಷಕ್ಕೆ ೧೦೭ ಸ್ಥಾನಗಳು ದೊರೆತಿವೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾ ಇವರ ಅವಾಮಿ ಲೀಗ್ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ೨೦೪ ಸ್ಥಾನ ಹಾಗೂ ಅವಾಮಿ ಲೀಗ್ ದ ಸ್ವತಂತ್ರ ಅಭ್ಯರ್ಥಿಗಳು ೫೦ ಸ್ಥಾನ ಗೆದ್ದಿದ್ದಾರೆ. ಆದ್ದರಿಂದ ೨೯೯ ರಲ್ಲಿ ೨೫೪ ಸ್ಥಾನ ಪಡೆದಿರುವ ಶೇಖ ಹಸಿನಾ ಐದನೆಯ ಸಲ ಬಾಂಗ್ಲಾದೇಶದ ಪ್ರಧಾನಮಂತ್ರಿ ಆಗುವವರು. ವಿಶೇಷ ಎಂದರೆ ಬಾಂಗಲಾದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಹಿಂದೂ ಮತದಾರರು ಅವಾಮಿ ಲೀಗ್ ಗೆ ೧೦೭ ಸ್ಥಾನ ಗಳಿಸಿಕೊಟ್ಟಿದ್ದಾರೆ.

೧. ಚುನಾವಣೆಯಲ್ಲಿ ಮಾಜಿ ಪ್ರಧಾನಮಂತ್ರಿ ಖಾಲಿದ್ ಝಿಯ ಇವರ ಪಕ್ಷ ‘ಬಾಂಗ್ಲಾದೇಶ ನ್ಯಾಷನಲ್ ಲಿಸ್ಟ್ ಪಾರ್ಟಿ’ ಹಾಗೂ ‘ಜಮಾತ್ ಏ ಇಸ್ಲಾಮಿ’ ಚುನಾವಣೆಯಿಂದ ದೂರ ಉಳಿದರು. ಆದ್ದರಿಂದ ಶೇಕಡ ೪೦ ಮತದಾನ ನಡೆದಿದೆ ಆದ್ದರಿಂದ ಶೇಕಡಾ ೧೦ ಜನಸಂಖ್ಯೆಯ ಒಂದು ಗಂಟು ಹಿಂದೂ ಮತಗಳು ಅವಾಮಿ ಲೀಗ್ ಗೆ ದೊರೆತಿದೆ. ಇದರಿಂದ ಹಸೀನಾ ಇವರ ಪಕ್ಷ ೧೦೭ ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಇದರಲ್ಲಿನ ಅನೇಕ ಜಾಗದಲ್ಲಿ ಹಿಂದೂ ಮತಗಳು ಶೇಕಡ ೨೦ ರಿಂದ ೪೦ ಇದೆ.

೨. ‘ಹಿಂದೂ-ಬೌದ್ಧ-ಕ್ರೈಸ್ತ ಓಯಿಕ್ಯ ಪರಿಷತ್ತಿ’ನ ಸಂಸ್ಥಾಪಕರಲ್ಲಿ ಒಬ್ಬರಾದ ರಾಣಾ ದಾಸಗುಪ್ತ ಇವರು, ಈ ಮತದಾರ ಸಂಘದಲ್ಲಿ ಇಂದು ಜನಸಂಖ್ಯೆ ಅಪಾಯದಲ್ಲಿದೆ; ಆದ್ದರಿಂದ ಹಿಂದುಗಳು ಹಸೀನಾ ಇವರಿಗೆ ಮತ ನೀಡಿದ್ದಾರೆ ಎಂದು ಹೇಳಿದರು.

೩. ಬೌದ್ಧ ಮಹಾಸಂಘದ ಮಹಾ ಸಚಿವ ಭಿಕ್ಖು ಸುನಂದಪ್ರಿಯ ಇವರು, ೧೯೭೫ ರ ನಂತರ ಮೊದಲು ಬಾರಿ ಒಂದು ಕೂಡ ಕಟ್ಟರವಾದಿ ಗುಂಪು ಈ ವರ್ಷದ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಈ ಅವಕಾಶ ಉಪಯೋಗಿಸಿ ನಮಗೆ ಜಾತಿವಾದ ಇಲ್ಲದಿರುವ ಬಾಂಗ್ಲಾದೇಶ ನಿರ್ಮಾಣ ಮಾಡುವುದಿದೆ. ಈ ವರ್ಷ ನಾವು ಯಾವುದೇ ವಿಶಿಷ್ಟ ಪಕ್ಷವನ್ನು ನೋಡಲಿಲ್ಲ. ಆದರೆ ಜಾತಿಯವಾದ ಇಲ್ಲದಿರುವ ಬಾಂಗ್ಲಾದೇಶದ ನಿರ್ಮಾಣಕ್ಕಾಗಿ ಯಾರು ಮನಪೂರ್ವಕ ಕೆಲಸ ಮಾಡುತ್ತಾರೆ ಅಂತಹ ಅಭ್ಯರ್ಥಿಗಳನ್ನು ನಾವು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದುಗಳು ಶೇಖ ಹಸೀನಾ ಇವರ ಪಕ್ಷಕ್ಕೆ  ಮತ ನೀಡಿದ್ದಾರೆ. ಚುನಾವಣೆಯ ಕೆಲವು ದಿನಗಳ ಹಿಂದೆ ಶೇಖರ ಹಸೀನಾ ಇವರ ಪಕ್ಷದ ನಾಯಕರು ಹಿಂದುಗಳ ಮೇಲೆ ದಾಳಿ ನಡೆಸಿದ್ದರು, ಇದನ್ನು ಮರೆಯಲು ಸಾಧ್ಯವಿಲ್ಲ ! ಮುಂಬರುವ ಕಾಲದಲ್ಲಿ ಹಿಂದೂಗಳ ರಕ್ಷಣೆ ಮಾಡುವುದಕ್ಕಾಗಿ ಭಾರತ ಸರಕಾರವು ಹಸೀನಾ ಇವರ ಮೇಲೆ ಒತ್ತಡ ತರುವುದು ಅವಶ್ಯಕವಾಗಿದೆ !