ರಾಂಚಿ (ಝಾರ್ಖಂಡ್)ಇಲ್ಲಿನ ರಾಮ-ಜಾನಕಿ ದೇವಸ್ಥಾನದಲ್ಲಿ ಅಪರಿಚಿತರಿಂದ ವಿಗ್ರಹಗಳನ್ನು ಕದ್ದು ಧ್ವಂಸ !

ರಾಂಚಿ (ಝಾರ್ಖಂಡ್‌) – ಇಲ್ಲಿನ ಬರಿಯಾತು ಪ್ರದೇಶದಲ್ಲಿ ಅಪರಿಚಿತರು ರಾಮ-ಜಾನಕಿ ಮಂದಿರದಲ್ಲಿ ಮೂರ್ತಿಗಳನ್ನು ಕದ್ದು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಆದಕಾರಣ ಇಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆ ಕುರಿತು ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸ್ಥಳಕ್ಕೆ ಭಾಜಪದ ಸಂಸದ ಸಂಜಯ ಸೇಠ್, ಶಾಸಕ ಸಿ.ಪಿ.ಸಿಂಗ್ ಮತ್ತು ಶಾಸಕ ಸಮರಿಲಾಲ್ ಆಗಮಿಸಿದ್ದರು. ಸಂಸದ ಸಂಜಯ ಸೇಟ್ ಮಾತನಾಡಿ, ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನಲೆಯಲ್ಲಿ ಅಯೋಧ್ಯೆ ವಾತಾವರಣ ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಈ ಷಡ್ಯಂತ್ರಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದರು.

ಸಂಪಾದಕೀಯ ನಿಲುವು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುತ್ತಿದ್ದರೂ, ದೇಶದಲ್ಲಿ ದೇವಾಲಯಗಳು ಇನ್ನೂ ಅಸುರಕ್ಷಿತವಾಗಿವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರ ಮಾಡುವುದು ಆವಶ್ಯಕವಾಗಿದೆ !