ಭಾಜಪದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವದಿಂದ ಎಚ್ಚರಿಕೆ !
ಬೆಳಗಾವಿ – ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು ತಾವಾಗಿ ತೆರವುಗೊಳಿಸುವುದು ಸೂಕ್ತ, ಇಲ್ಲವಾದಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಎಚ್ಚರಿಕೆ ನೀಡಿದ್ದಾರೆ. ಅವರು ಇಲ್ಲಿ ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ಈಶ್ವರಪ್ಪ ಅವರು ‘ದೇಶದ ದೇವಸ್ಥಾನಗಳ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಒಂದೇ ಒಂದು ಮಸೀದಿಯನ್ನು ಬಿಡುವುದಿಲ್ಲ’ ಎನ್ನುವ ಹೇಳಿಕೆ ನೀಡಿದ್ದರು.
ಈಶ್ವರಪ್ಪನವರು ತಮ್ಮ ಮಾತನ್ನು ಮುಂದುವರಿಸಿ, ಮಥುರಾ ಸಹಿತ ಇನ್ನೂ ಎರಡು ಸ್ಥಾನಗಳ ಚಿಂತನೆ ನಡೆಯುತ್ತಿದೆ. ನ್ಯಾಯಾಲಯದ ತೀರ್ಪು ಒಮ್ಮೆ ಹೊರಬರಲಿ. ಇಂದು ಅಥವಾ ನಾಳೆ, ನಾವು ದೇವಸ್ಥಾನಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುತ್ತೇವೆ, ಈ ವಿಷಯದಲ್ಲಿ ಕಿಂಚಿತ್ತೂ ಸಂಶಯ ಪಡಬಾರದು ಎಂದು ಹೇಳಿದರು.
Senior BJP leader and former minister from Karnataka K.S. Eshwarappa issues a warning!
Voluntarily vacate the mosques, which were constructed after demolishing Hindu temples, or else be prepared to face the consequences.
✍🏻 Visit to get ‘Bharatiya’ & ‘Hindu’ Editorial… pic.twitter.com/JoSs79DDos
— Sanatan Prabhat (@SanatanPrabhat) January 8, 2024