ಅಯೋಧ್ಯೆಯಲ್ಲಿ 25 ಸಾವಿರ ಸೈನಿಕರ ನಿಯೋಜಿಸಲಾಗುವುದು: ಭದ್ರತಾ ವ್ಯವಸ್ಥೆಗೆ 100 ಕೋಟಿ ರೂಪಾಯಿಗಳ ವೆಚ್ಚ.

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀರಾಮ ಮಂದಿರದ ಭದ್ರತೆಗಾಗಿ 25 ಸಾವಿರ ಯೋಧರನ್ನು ನಿಯೋಜಿಸಲಾಗಿದೆ. ದೇವಸ್ಥಾನದ ಭದ್ರತಾ ವಿಶೇಷ ಕಾರ್ಯದಳದ ಕಡೆಗೆ ಇರಲಿದೆ. ಆತ್ಮಾಹುತಿ ದಾಳಿಗಳನ್ನು ತಡೆಯಲು ದೇವಸ್ಥಾನದ ಸುತ್ತ ಆಧುನಿಕ ತಂತ್ರಜ್ಞಾನದ ನೆರವಿನಿಂದ ಭದ್ರತಾ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. ದೇವಾಲಯದ ಆವರಣದಲ್ಲಿ ಸಿಸಿಟಿವಿ ಗಳನ್ನು ಅಳವಡಿಸಲಾಗಿದೆ. ಭದ್ರತಾ ವ್ಯವಸ್ಥೆಗಳಿಗೆ 100 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಜನವರಿ 22 ರಂದು ಪ್ರಾಣಪ್ರತಿಷ್ಠಾಪನೆಯ ದಿನದಂದು ಭದ್ರತಾ ಸಿಬ್ಬಂದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.

(ಸೌಜನ್ಯ – Janta Junction)

ಭದ್ರತಾ ವ್ಯವಸ್ಥೆ ಹೀಗಿರಲಿದೆ!

1. ಶರಯೂ ನದಿಯಲ್ಲಿ ಸ್ನೈಪರ್ (ದೂರದಿಂದ ಗುಂಡು ಹಾರಿಸುವ ಮೂಲಕ ಗುರಿಯನ್ನು ನಿಖರವಾಗಿ ಹೊಡೆಯಬಹುದು) ನಿಯೋಜಿಸಲಾಗುವುದು.

2. ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು `ಕೆಂಪು’ ಮತ್ತು `ಹಳದಿ’ ಹೀಗೆ 2 ವಿಭಾಗಗಳಲ್ಲಿ (‘ವಲಯಗಳಲ್ಲಿ’) ವಿಂಗಡಿಸಲಾಗಿದೆ. ‘. ಶ್ರೀರಾಮ ಮಂದಿರವು ‘ರೆಡ್ ಝೋನ್’ನಲ್ಲಿದ್ದರೆ, ಹನುಮಾನಗಡಿ ಮತ್ತು ಕನಕ ಭವನ ‘ಹಳದಿ ವಲಯ’ದಲ್ಲಿರಲಿದೆ.

3. ಕೇಂದ್ರ ಗೃಹ ಇಲಾಖೆಯು ಪ್ರತಿ 6 ತಿಂಗಳಿಗೊಮ್ಮೆ ಭದ್ರತಾ ವ್ಯವಸ್ಥೆಯ ಅಢಾವೆಯನ್ನು ತೆಗೆದುಕೊಳ್ಳಲಿದೆ.