ಮೊಘಲರು ಇದ್ದುದರಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಿತು !

ಬಿಹಾರದ ಆಡಳಿತಾರೂಢ ಜನತಾ ದಳ (ಸಂಯುಕ್ತ) ಪಕ್ಷದ ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚೌಧರಿ ಅವರ ವಿಷಕಾರಿ ಹೇಳಿಕೆ !

ಪಾಟಲಿಪುತ್ರ (ಬಿಹಾರ) – ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ಲೋಕೋಪಯೋಗಿ ಇಲಾಖೆ ಸಚಿವ ಅಶೋಕ ಚೌಧರಿಯವರು ಮೊಗಲರನ್ನು ಹೊಗಳಿದ್ದಾರೆ. ಚೌಧರಿಯವರು, ಮೊಗಲರು ಭಾರತದ ಮೇಲೆ ನಡೆಸಿದ ಆಡಳಿತದಿಂದಾಗಿ ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದೆ. ಮೊಗಲರು ತಮ್ಮ ಆಡಳಿತಾವಧಿಯಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿದ್ದರೂ, ಅವರು ಬ್ರಿಟಿಶರಂತೆ ನಮ್ಮನ್ನು ಲೂಟಿ ಮಾಡಲಿಲ್ಲ. (‘ಮೊಗಲರು ಹಿಂದೂಗಳನ್ನು ಲೂಟಿ ಮಾಡಲಿಲ್ಲ’, ಎಂದು ಹೇಳುವ ಚೌಧರಿ ಮಹಾಶಯರಿಗೆ ಅವರ ಐತಿಹಾಸಿಕ ಸಂಶೋಧನೆಗಾಗಿ ಪ್ರಶಸ್ತಿಯನ್ನು ನೀಡಬೇಕು ! – ಸಂಪಾದಕರು)

ಚೌಧರಿ ಮಾತು ಮುಂದುವರೆಸಿ,

1. ಮೊಗಲರು ನಮ್ಮ ದೇಶವನ್ನು ಬಿಟ್ಟು ಓಡಿ ಹೋಗಲಿಲ್ಲ. ಅವರದ್ದು ಏನಿತ್ತೋ, ಅದೆಲ್ಲವೂ ಈ ದೇಶದಲ್ಲಿಯೇ ಉಳಿಯಿತು.

2. ನಮಗೆ ಆರ್ಥಿಕವಾಗಿ ದುರ್ಬಲರನ್ನಾಗಿಸಿ ಬ್ರಿಟಿಷರು ತಮ್ಮ ಮನೆ ತುಂಬಿದರು.

3. ಭಾಜಪ ಶ್ರೀರಾಮ ಮಂದಿರವನ್ನು `ಮಾರ್ಕೆಟಿಂಗ್‘ ಮಾಡಿ, ಧರ್ಮದ ರಾಜಕಾರಣ ಮಾಡುತ್ತಿದೆ. ಶ್ರೀರಾಮ ಮಂದಿರದ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಕೇಂದ್ರ ಸರಕಾರವು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರದ ಕಡೆಗೆ ಗಮನ ಹರಿಸಬೇಕಾಗಿದೆ. ರಾಮನ ಹೆಸರನ್ನು ಹೇಳಿಕೊಂಡು ಯಾವುದೇ ವ್ಯಕ್ತಿ ಹೇಗೆ ತಾನೇ ಉಪವಾಸ ಇರಬಲ್ಲನು ? (ಈ ರೀತಿ ಹಿಂದೂಗಳ ಬುದ್ಧಿಯನ್ನು ಭ್ರಷ್ಟಗೊಳಿಸುವ ಹಿಂದೂದ್ವೇಷಿ ಸಚಿವ ಅಶೋಕ್ ಚೌಧರಿ ! – ಸಂಪಾದಕರು)

ಸಂಪಾದಕರ ನಿಲುವು

* ಕಳೆದ ಐದೂವರೆ ನೂರು ವರ್ಷಗಳ ಅವಿರತ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಚೌಧರಿಯಂತಹವರಿಗೆ ಇದರಿಂದ ಹೊಟ್ಟೆಕಿಚ್ಚು ಉಂಟಾಗುತ್ತಿದೆ ಮತ್ತು ರಾಜಕೀಯವಾಗಿಯೂ ಸೋಲಾಗಿದೆ ! ಚೌಧರಿ ಮತ್ತು ಅವರಂತಹ ಹಿಂದೂ ದ್ವೇಷಿ ರಾಜಕಾರಣಿಗಳು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ !

* ಈ ರೀತಿಯ ಹೇಳಿಕೆಗಳು ನಿಜವಾಗಿಯೂ ಪ್ರಜಾಪ್ರಭುತ್ವದ ತಮಾಷೆಯಾಗಿದೆ. ಒಂದು ಬಹುಸಂಖ್ಯಾತ ಸಮಾಜದ ಮೇಲೆ ಕಳೆದ ನೂರಾರು ವರ್ಷಗಳಿಂದ ಅಗಣಿತ ಅತ್ಯಾಚಾರ ಮಾಡುವ, ಅವರ ಸಂಸ್ಕೃತಿಯನ್ನು ನಷ್ಟಗೊಳಿಸಲು ಹಗಲು ರಾತ್ರಿ ಒಂದು ಮಾಡುವ, ಅವರ ಮಹಿಳೆಯರನ್ನು ಭ್ರಷ್ಟಗೊಳಿಸುವ, ಲಕ್ಷಾಂತರ ಜನರನ್ನು ಹತ್ಯೆ ಮಾಡುವ ಮೊಗಲರನ್ನು ಹೊಗಳುವುದೆಂದರೆ ಹಿಂದೂಗಳ ಅವಮಾನವೇ ಆಗಿದೆ !