ಬೆಳಗಾವಿ (ಕರ್ನಾಟಕ) – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ. ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ‘ಎಲ್ಲರ ನಡುವೆ ಏಕತೆ ಇರಬೇಕು‘, ಎಂದು ಮುಸಲ್ಮಾನರ ಇಚ್ಥೆಯಿದೆ; ಆದರೆ ಕೇವಲ ಸ್ವಂತದ ರಾಜಕೀಯ ಸ್ವಾರ್ಥಕ್ಕಾಗಿ ಹಿಂದೂ ಮತ್ತು ಮುಸಲ್ಮಾನರು ಒಂದಾಗಬಾರದು, ಹೀಗೆ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ದೇಶ, ಎಂದು ಭಾಜಪದ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡುವಾಗ ಆರೋಪಿಸಿದ್ದಾರೆ.
ಈಶ್ವರಪ್ಪ ಮಾತು ಮುಂದೆ ಮಾತನಾಡುತ್ತಾ, ತ್ರಿವಳಿ ತಲಾಖ್ ರದ್ದುಗೊಳಿಸಿರುವ ನಿರ್ಧಾರವನ್ನು ಮುಸ್ಲೀಮರು ಒಪ್ಪಿಕೊಂಡಿದ್ದಾರೆ; ಆದರೆ ಕಾಂಗ್ರೆಸ್ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹಿಂದೂ-ಮುಸಲ್ಮಾನರ ನಡುವೆ ಒಡಕು ಬಯುಸುತ್ತಾರೆ, ಹೀಗೆ ಅವರ ಇಚ್ಛೆ ಇದೆ; ಆದರೆ ಮುಂದೆ ಭವಿಷ್ಯದಲ್ಲಿ ಎಲ್ಲರೂ ಒಂದಾಗುವರು, ಇದು ನನಗೆ ನಂಬಿಕೆ ಇದೆ ಎಂದರು.