ಸಾಧಕರೆ, ಜಿಜ್ಞಾಸುಗಳು ನಮ್ಮವರಾದ ನಂತರವಲ್ಲ, ನಮ್ಮವರಾಗಲು ಅವರನ್ನು ತತ್ಪರತೆಯಿಂದ ವಾಚಕರನ್ನಾಗಿ ಮಾಡಿರಿ !

ಜಿಜ್ಞಾಸುಗಳನ್ನು ಸಾಧನೆಯ ಕಡೆಗೆ ಹೊರಳಿಸಲು ಮತ್ತು ಧರ್ಮಪ್ರೇಮಿಗಳಿಗೆ ಪ್ರತ್ಯಕ್ಷ ಕೃತಿಗೆ ಪ್ರೇರಣೆ ನೀಡುವ ಸರ್ವೋತ್ಕೃಷ್ಟ ಮಾಧ್ಯಮ ಎಂದರೆ ಸನಾತನ ಪ್ರಭಾತ !

ಈ ಸನಾತನ ಪ್ರಭಾತವನ್ನು ನಿಯಮಿತವಾಗಿ ಓದುವುದರಿಂದ ವಾಚಕರಲ್ಲಿ ಸಾಧನೆಯ ಆಸಕ್ತಿ ಮೂಡುತ್ತದೆ ಹಾಗೂ ಅದರಲ್ಲಿನ ರಾಷ್ಟ್ರ ಮತ್ತು ಧರ್ಮದ ಕುರಿತಾದ ಪ್ರೇಮ ಹೆಚ್ಚುತ್ತಿದೆ. ಈ ಸಂಚಿಕೆಯ ವಾಚನದಿಂದ ನಮಗೆ ಮುಂದಿನ ದಿಶೆ ಮತ್ತು ಮಾರ್ಗದರ್ಶನ ದೊರೆಯುತ್ತದೆ ಎಂದು ಕೆಲವು ವಾಚಕರು ಉತ್ಸಾಹ ಭರಿತವಾಗಿ ಹೇಳುತ್ತಿದ್ದಾರೆ.

ಹೀಗಿದ್ದರೂ ಪ್ರಥಮ ಭೇಟಿಯಲ್ಲಿ ಜಿಜ್ಞಾಸುಗಳನ್ನು ವಾಚಕರನ್ನಾಗಿ ಹೇಗೆ ಮಾಡುವುದು ? ಅವರ ಜೊತೆಗೆ ಬಾಂಧವ್ಯ ಬೆಳೆದ ನಂತರ ವಾಚಕರಾಗುವುದಕ್ಕಾಗಿ ಪ್ರೇರೇಪಿತಗೊಳಿಸುವುದು, ಎಂದು ಅನೇಕ ಸಾಧಕರಿಗೆ ಅನಿಸುತ್ತದೆ, ಆದ್ದರಿಂದ ಅವರು ಜಿಜ್ಞಾಸುಗಳಿಗೆ ವಾಚಕರನ್ನಾಗಿ ಮಾಡಲು ತತ್ಪರತೆಯಿಂದ ಪ್ರೇರಣೆ ನೀಡುವುದಿಲ್ಲ.

ನಮ್ಮ ಅಯೋಗ್ಯ ವಿಚಾರ ಪ್ರಕ್ರಿಯೆಯಿಂದ ಜಿಜ್ಞಾಸುಗಳು ಅಮೂಲ್ಯ ಸತ್ಸಂಗದಿಂದ ವಂಚಿತರಾಗಬಾರದು, ಅದಕ್ಕಾಗಿ ಎಲ್ಲಾ ಕಡೆಯ ಸಾಧಕರು ಜಿಜ್ಞಾಸುಗಳನ್ನು ವಾಚಕರನ್ನಾಗಿ ಮಾಡಲು ಮೊದಲ ಭೇಟಿಯಿಂದಲೇ ಪ್ರಯತ್ನ ಮಾಡಬೇಕು. (೧೯.೧೨.೨೦೨೩)