|
ಮುಂಬಯಿ – ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶರದ ಪವಾರ ಗುಂಪಿನ ಶಿರ್ಡಿ ಇಲ್ಲಿಯ ಶಿಬಿರದಲ್ಲಿ ‘ರಾಮ ಮಾಂಸಾಹಾರಿ ಆಗಿದ್ದನು’ ಎಂದು ಹೇಳಿರುವ ಗುಂಪಿನ ಮುಖ್ಯಸ್ಥ ಜಿತೇಂದ್ರ ಅವ್ಹಾಡ ಇವರ ವಿರುದ್ಧ ನಾಶಿಕದಲ್ಲಿನ ಪಂಚವಟಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬಗ್ಗೆ ನಾಶಿಕದಲ್ಲಿನ ಪ್ರಸಿದ್ಧ ಶ್ರೀ ಕಾಳಾರಾಮ ದೇವಸ್ಥಾನದ ಮಹಂತ ಶ್ರೀ ಮಹಂತ ಸುಧಿರದಾಸ ಮಹಾರಾಜ ಇವರು ಪೊಲೀಸರಿಗೆ ದೂರು ನೀಡಿದ್ದರು. ಇದರ ಜೋತೆಗೆ ಆವ್ಹಾಡ ವಿರುದ್ಧ ಮುಂಬಯಿ, ಪುಣೆ ಮುಂತಾದ ನಗರಗಳಲ್ಲಿ ಪ್ರತಿಭಟನೆ ಕೂಡ ನಡೆಸಿದರು.
ರೋಹಿತ ಪವಾರ ಇವರಿಂದ ಅವ್ಹಾಡ ಇವರಿಗೆ ಕಪಾಳಮೋಕ್ಷ !
ರಾಷ್ಟ್ರವಾದಿ ಕಾಂಗ್ರೆಸ್ ನ ಶರದ ಪವಾರ ಗುಂಪಿನ ರೋಹಿತ ಪವಾರ ಇವರು, ‘ಯಾರು ದೇವರು ಧರ್ಮದ ರಾಜಕಾರಣ ಮಾಡಬಾರದು. ಜನರು ಅವರಿಗೆ ಪ್ರತ್ಯುತ್ತರ ನೀಡದೆ ಇರಲಾರರು’, ಎಂಬ ಪದಗಳಲ್ಲಿ ಆವ್ಹಾಡ್ ಇವರಿಗೆ ಕಪಾಳಮೋಕ್ಷ ಮಾಡಿದರು.
‘ಶ್ರೀ ರಾಮ ಮಾಂಸಾಹಾರಿಯಾಗಿದ್ದರು’, ಎಂದು ಎಲ್ಲಿಯು ಉಲ್ಲೇಖ ಇಲ್ಲ ! – ಶ್ರೀ ಮಹಂತ ಸುಧಿರದಾಸ ಮಹಾರಾಜ, ಶ್ರೀ ಕಾಳಾರಾಮ ಮಂದಿರ, ನಾಶಿಕ
ಶ್ರೀ ಮಹಂತ ಸುಧಿರದಾಸ ಮಹಾರಾಜ ಇವರು, ”ವಾಲ್ಮೀಕಿ ರಾಮಾಯಣದಿಂದ ಯಾವುದೇ ೧೪ ರಾಮಾಯಣಗಳಲ್ಲಿ ‘ಶ್ರೀರಾಮ ಮಾಂಸಾಹಾರಿಯಾಗಿದ್ದರು’, ಎಂದು ಉಲ್ಲೇಖ ಇಲ್ಲ, ತತ್ವಿರುದ್ಧ ‘ರಾಮಚಂದ್ರ ಹಣ್ಣುಗಳು ಮತ್ತು ಗೆಡ್ಡೆಗೆಣಸುಗಳನ್ನು ಸೇವಿಸಿ ಬ್ರಹ್ಮಚಾರ್ಯಾವ್ರತ ಧಾರಣೆ ಮಾಡಿ ವಾಸಿಸಿದ್ದನು’, ಎಂದು ರಾಮರಕ್ಷೆಯಲ್ಲಿ ಉಲ್ಲೇಖ ಇದೆ ಎಂದು ಹೇಳಿದರು.
ನಿರಂತರ ಇಫ್ತಾರ್ ಕೂಟದಿಂದ ಜಿತೇಂದ್ರ ಆವ್ಹಾಡ್ ಇವರ ಬುದ್ಧಿ ಭ್ರಮೆಯಾಗಿದೆ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ
ಮುಂಬಯಿ : ಭಗವಾನ್ ಶ್ರೀರಾಮನ ಕುರಿತು ಜಿತೇಂದ್ರ ಆವ್ಹಾಡ್ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಎಷ್ಟೇ ಖಂಡಿಸಿದರೂ ಕಡಿಮೆಯೇ ಆಗಿದೆ. ಮುಂಬ್ರಾದಲ್ಲಿ ಚುನಾಯಿತರಾಗಿ ಸದಾ ಇಫ್ತಾರ್ ಕೂಟಗಳನ್ನು ನಡೆಸುವ ಮೂಲಕ ಬುದ್ಧಿ ಭ್ರಮಣೆಗೆ ಒಳಗಾಗುತ್ತದೆ ಎಂಬುದಕ್ಕೆ ಜಿತೇಂದ್ರ ಆವ್ಹಾಡ್ ಉದಾಹರಣೆಯಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಇವರು, ಆವ್ಹಾಡ್ ವಿರುದ್ಧ ‘ಹೇಟ್ ಸ್ಪೀಚ್’ (ದ್ವೇಷ ಭಾಷಣ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು, ಇಲ್ಲದಿದ್ದರೆ ಹಿಂದೂಗಳು ಬೀದಿಗಿಳಿಯುತ್ತಾರೆ ಎಂದು ಎಚ್ಚರಿಸಿದ್ದಾರೆ.
Nationalist Congress Party leader Jitendra Avhad’s statement that, ‘Lord Ram is eating meat’ is condemned!
If a case of #HateSpeech is not filed against Avhad, we will protest on the streets! –
Hindu Janajagruti Samiti
@Ramesh_hjs@HinduJagrutiOrg pic.twitter.com/hm8PT83rfH
— Sunil Ghanwat🛕🛕 (@SG_HJS) January 4, 2024
ಶ್ರೀ. ರಮೇಶ ಶಿಂದೆ ಅವರು ಮಾತು ಮುಂದುವರೆಸಿ, “’ಜಿತೇಂದ್ರ ಆವ್ಹಾಡ್ ಅವರಿಗೆ ಯಾವತ್ತೂ ಇತರ ಧರ್ಮಗಳೊಂದಿಗೆ ಯಾವುದೇ ಸಮಸ್ಯೆ ಇರುವುದಿಲ್ಲ; ಆದರೆ ಅವರು ನಿರಂತರವಾಗಿ ಹಿಂದೂ ದೇವರುಗಳ ಬಗ್ಗೆ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಾರೆ. ಶರದ್ ಪವಾರ್ ವಿರುದ್ಧ ಅಂತಹ ಭಾಷೆ ಬಳಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಜಿತೇಂದ್ರ ಆವ್ಹಾಡ್ ಹೇಳಿಕೆಗೆ ಎನ್.ಸಿ.ಪಿ.ಯ ಶರದ್ ಪವಾರ್ ಬಣದ ಸಂಪೂರ್ಣ ಬೆಂಬಲವಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. 14 ವರ್ಷಗಳ ಕಾಲ ಕಾಡಿನಲ್ಲಿ ನೆಲೆಸಿದ ಶ್ರೀರಾಮನು ಏನು ತಿಂದನು ? ಈ ಪ್ರಶ್ನೆಯನ್ನು ಕೇಳಿದಾಗ, ಜಿತೇಂದ್ರ ಆವ್ಹಾಡ್, ‘ಕಾಡಿನಲ್ಲಿ ತಿನ್ನಲು ಏನೂ ಸಿಗುವುದಿಲ್ಲ’ ಎಂದು ಹೇಳುತ್ತಾರೆ; ಆದರೆ ಕಾಡಿನಲ್ಲಿ ಸಂಪೂರ್ಣ ಸಸ್ಯಾಹಾರಿಗಳು ಅನೇಕ ಪ್ರಾಣಿಗಳಿವೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಕಾಡಿನಲ್ಲಿ ಹಣ್ಣುಗಳು ಮತ್ತು ಗೆಡ್ಡೆಗಳು ಸಹ ಇರುತ್ತವೆ. ಹೀಗಿರುವಾಗ ಆವ್ಹಾಡ್ ಹೇಳಿಕೆ ಹಿಂದೂ ಧರ್ಮದ ಮಾನಹಾನಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದಕ್ಕೆ ಜಿತೇಂದ್ರ ಆವ್ಹಾಡ್ ಅವರನ್ನು ನಾವು ಖಂಡಿಸುತ್ತೇವೆ. ಜಿತೇಂದ್ರ ಆವ್ಹಾಡ್ ವಿರುದ್ಧ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿತೇಂದ್ರ ಆವ್ಹಾಡ ಇವರು ಶ್ರೀ ರಾಮನ ಕುರಿತು ನೀಡಿರುವ ಅವಮಾನಕಾರಿ ಹೇಳಿಕೆ !ಆವ್ಹಾಡ ಒಮ್ಮೆ ಶ್ರೀ ಸರಸ್ವತಿ ದೇವಿಯ, ಇನ್ನೊಮ್ಮೆ ಪ್ರಭು ಶ್ರೀ ರಾಮನ ಹಾಗೂ ಕೆಲವೊಮ್ಮೆ ಹಿಂದೂ ಧರ್ಮದ ಬಗ್ಗೆ ಹೀನ ಭಾಷೆಯಲ್ಲಿ ಅವಮಾನಿಸುವುದನ್ನು ನೋಡಿದರೆ ಅವರ ನರನಾಡಿಗಳಲ್ಲಿ ಹಿಂದೂದ್ವೇಷ ಎಷ್ಟು ತುಂಬಿದೆ ? ಇದು ಕಾಣುತ್ತದೆ ! ಆವ್ಹಾಡ ಇವರಿಗೆ ಮತ ನೀಡಿ ಆರಿಸಿದ ಹಿಂದುಗಳಿಗೆ ಇದು ಒಪ್ಪಿಗೆಯೇ ? ಹಿಂದೂಗಳ ದೇವತೆಯ ಬಗ್ಗೆ ಅವಮಾನ ಮಾಡುವ ಆವ್ಹಾಡ ಎಂದಾದರೂ ಮುಸಲ್ಮಾನ ಅಥವಾ ಕ್ರೈಸ್ತರ ಶ್ರದ್ಧಾಸ್ಥಳಗಳ ಬಗ್ಗೆ ಅವಮಾನ ಮಾಡುವುದಿಲ್ಲ, ಇದನ್ನು ಗಮನಿಸಿ ! ಪದೇ ಪದೇ ಹಿಂದೂ ದೇವತೆಗಳ ಅವಮಾನ ಮಾಡುವ ಜಿತೇಂದ್ರ ಅವ್ಹಾಡ ಇವರ ಕುರಿತು ಶರದ ಪವಾರ್ ಚಕಾರ ಶಬ್ದವು ಮಾತನಾಡುವುದಿಲ್ಲ ಅಥವಾ ಇಂತಹ ಹೇಳಿಕೆ ನೀಡುವುದನ್ನು ತಡೆಯುವುದು ಇಲ್ಲ ಇದನ್ನು ಗಮನಿಸಿ ! ಹಿಂದುತ್ವನಿಷ್ಠರ ಕುರಿತು ಕಥಿತ ದ್ವೇಷಪೂರಿತ ಭಾಷಣ ಮಾಡಿರುವ ಪ್ರಕರಣದಲ್ಲಿ ‘ಹೇಟ್ ಸ್ಪೀಚ್’ ಅಡಿಯಲ್ಲಿ ದೂರು ದಾಖಲಿಸುವ ಪೊಲೀಸರು ಆವ್ಹಾಡ ಇವರ ‘ಹೇಟ್ ಸ್ಪೀಚ್’ ಬಗ್ಗೆ ಮೌನ ಏಕೆ ? ‘ಬೇಟೆಯಾಡಿ ತಿನ್ನುವ ರಾಮ ಇವನು ಎಲ್ಲರವನಾಗಿದ್ದಾನೆ. ರಾಮನ ಆದರ್ಶ ಹೇಳಿ ಜನರ ಮೇಲೆ ಸಸ್ಯಹಾರ ಹೇರಲಾಗುತ್ತಿದೆ. ೧೪ ವರ್ಷ ಕಾಡಿನಲ್ಲಿರುವ ರಾಮ ಬೇಟೆ ಆಡುವನು. ರಾಮನು ೧೪ ವರ್ಷ ವನವಾಸ ಅನುಭವಿಸಿದ್ದನು, ಹಾಗಾದರೆ ಅವನು ಸಸ್ಯಹಾರಿ ಹೇಗೆ ಇರಲು ಸಾಧ್ಯ ? ರಾಮ ಮೆಂತೆಯ ಸೊಪ್ಪು ತಿನ್ನುತ್ತಿದ್ದನು ಎಂದು ಯಾರಾದರೂ ಹೇಳಬಹುದೆ ? |
ನಾನು ಇತಿಹಾಸ ತಿರುಚಿದೆ ಎಂದು ಅವ್ಹಾಡ ಇವರಿಂದ ಖೇದ !
ಠಾಣೆ – ನಾನು ಶ್ರೀ ರಾಮನು ಮಾಂಸಹಾರಿ ಆಗಿದ್ದನು ಎಂದು ಹೇಳಿದೆ. ಯಾರು ಇದರ ವಿರುದ್ಧ ಮಾತನಾಡುತ್ತಿದ್ದಾರೆ, ಅವರ ಮಾಹಿತಿಗಾಗಿ ವಾಲ್ಮೀಕಿ ರಾಮಾಯಣದ ಒಂದು ಸಂದರ್ಭ ಇದೆ. ಅದರಲ್ಲಿನ ಅಯೋಧ್ಯಾ ಕಾಂಡದಲ್ಲಿ ಒಂದು ಶ್ಲೋಕ ಇದೆ, ಅದನ್ನು ನಾನು ಓದುವುದಿಲ್ಲ. ೧೮೯೧ ರಲ್ಲಿ ಕೂಡ ಈ ವಿಷಯದ ಒಂದು ಸಂದರ್ಭ ಇದೆ. ಮಮತಾ ನಾಥದತ್ತ, ಐಐಟಿ ಕಾನ್ಪುರ, ಗೀತಾ ಪ್ರೆಸ್, ಹರಿಪ್ರಸಾದ ಶಾಸ್ತ್ರಿ ಮುಂತಾದವರು ಯಾವ ಅನುವಾದ ಮಾಡಿದ್ದಾರೆ, ಅದು ಉಪಲಬ್ಧವಿದೆ. ನನ್ನ ಹೇಳಿಕೆಯಿಂದ ಯಾರ ಭಾವನೆಗೆ ನೋವುಂಟು ಆಗಿದ್ದರೆ ಅದಕ್ಕಾಗಿ ನಾನು ಖೇದ ವ್ಯಕ್ತಪಡಿಸುತ್ತೇನೆ, ಎಂದು ಕೂಡ ಜಿತೇಂದ್ರ ಆವ್ಹಾಡ ಇವರು ಹೇಳಿದರು.
#WATCH | On his “non-vegetarian” comment on Lord Ram, NCP-Sharad Pawar faction leader Jitendra Awhad says, “I express regret. I did not want to hurt anyone’s sentiments.” pic.twitter.com/wFIAXQXAKb
— ANI (@ANI) January 4, 2024