ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳು ಕಳ್ಳ ಸಾಗಾಣಿಕೆ ನಡೆಯುತ್ತದೆ !
ನವ ದೆಹಲಿ – ಪಾಕಿಸ್ತಾನದಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಇದಕ್ಕಾಗಿ ಅದು ಡ್ರೋನ್ ಬಳಕೆ ಹೆಚ್ಚೆಚ್ಚು ಮಾಡುತ್ತಿರುವುದು ಆಗಾಗೆ ಬೆಳಕಿಗೆ ಬಂದಿದೆ. ಅದರ ಡ್ರೋನ್ ನಾಶ ಮಾಡುವುದಕ್ಕಾಗಿ ಭಾರತವು ಸ್ವದೇಶಿ ಡ್ರೋನ್ ವಿರೋಧಿ ವ್ಯವಸ್ಥೆ ಅಭಿವೃದ್ಧಿ ಪಡಿಸಿದೆ. ಭಾರತ ಈ ವ್ಯವಸ್ಥೆ ಮುಂದಿನ ಆರು ತಿಂಗಳಲ್ಲಿ ಕಾರ್ಯನಿರತಗೊಳಿಸುವ ಸಿದ್ಧತೆಯಲ್ಲಿ ಇದೆ.
ಭಾರತ ಡ್ರೋನ್ ವಿರೋಧಿ ವ್ಯವಸ್ಥೆಗಾಗಿ ಮೂರು ರೀತಿಯ ತಂತ್ರಜ್ಞಾನದ ಅಭ್ಯಾಸ ನಡೆಸಿ ಅದನ್ನು ಪರೀಕ್ಷಿಸುತ್ತಿದೆ. ಈ ಮೂರರಲ್ಲಿ ಒಂದು ತಂತ್ರಜ್ಞಾನ ಆಯ್ಕೆ ಮಾಡಲಾಗುವುದು ಅಥವಾ ಮೂರರ ಸಂಯೋಜನೆ ಮಾಡಲಾಗುವುದು.
(ಸೌಜನ್ಯ : newsX)
ಪಾಕಿಸ್ತಾನವು ಭಾರತದ ವಿರುದ್ಧ ಮಾಡಿದ್ದ ಡ್ರೋನ್ ಬಳಕೆ !
೧. ಪಾಕಿಸ್ತಾನ ಜಮ್ಮು-ಕಾಶ್ಮೀರ್, ಪಂಜಾಬ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಮಾದಕ ಪದಾರ್ಥ ತಲುಪಿಸುತ್ತದೆ.
೨. ಡಿಸೆಂಬರ್ ೨೯ ರಂದು ಪಂಜಾಬದಲ್ಲಿನ ಗುರುದಾಸಪುರ ಇಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆ.
೩. ಡಿಸೆಂಬರ್ ೨೦ ರಂದು ಪಂಜಾಬದಲ್ಲಿನ ತರನತಾರನ ಇಲ್ಲಿ ಪೊಲೀಸ ಮತ್ತು ಗಡಿ ಭದ್ರತಾ ಪಡೆಯ ಸಿಬ್ಬಂದಿ ಇವರು ಡ್ರೋನ್ ಸಹಿತ ಎರಡು ಕೆಜಿ ೫೦೦ ಗ್ರಾಂ ಹೆರೈನ್‌ವಶಪಡಿಸಿಕೊಂಡಿದೆ.
೪. ನವಂಬರ್ ೧, ೨೦೨೨ ರಿಂದ ಅಕ್ಟೋಬರ್ ೩೧, ೨೦೨೩ ಈ ಒಂದು ವರ್ಷದ ಕಾಲಾವಧಿಯಲ್ಲಿ ಸುರಕ್ಷಾ ದಳದಿಂದ ೯೦ ಡ್ರೋನ್‌ಗಳು ವಶಪಡಿಸಿಕೊಂಡಿದೆ. ಇದರಲ್ಲಿ ೮೧ ಪಂಜಾಬದಲ್ಲಿ ಮತ್ತು ೯ ರಾಜಸ್ಥಾನದಲ್ಲಿ ದೊರೆತಿದೆ. ಕಳೆದ ವರ್ಷದಲ್ಲಿ ಡ್ರೋನ್ ಕಾಣುವ ಸಂಖ್ಯೆ ೩೦೦ – ೪೦೦ರಷ್ಟು ಆಗಿದೆ.
ಭಾರತದ ಸ್ವದೇಶಿ ತಯಾರಿಕೆಯ ‘ಡಿ ೪ ಡ್ರೋನ್’ ವ್ಯವಸ್ಥೆ !
ಭಾರತದ ಬಳಿ ‘ಡ್ರೋನ್ ಡೀಟೆಕ್ಟ್, ಡೇಟರ್ ಮತ್ತು ಡಿಸ್ಟ್ರಾಯ್’ ಎಂದರೆ ‘ಡಿ ೪’ ಹೆಸರಿನ ಡ್ರೋನ್ ವ್ಯವಸ್ಥೆ ಇದೆ. ಇದು ಮೊದಲ ಸ್ವದೇಶಿ ಡ್ರೋನ್ ವಿರೋಧಿ ವ್ಯವಸ್ಥೆ ಆಗಿದೆ. ಅದು ರಕ್ಷಣಾ ಸಂಶೋಧನೆ ಮತ್ತು ವಿಕಾಸ ಸಂಸ್ಥೆ (ಡಿ.ಆರ್.ಡಿ.ಓ. ಇಂದ) ಮೂರು ವರ್ಷದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ‘ಡಿ ೪’ ಡ್ರೋನ್ ಗಾಳಿಯಲ್ಲಿ 3 ಕಿ.ಮೀ ಪರೀಧಿಯಲ್ಲಿನ ಶತ್ರುಗಳನ್ನು ಗುರುತಿಸುತ್ತದೆ ಹಾಗೂ ಅದಕ್ಕಾಗಿ ೩೬೦ ಅಂಶ ವಿಸ್ತಾರ ನೀಡುತ್ತದೆ. ಅದರ ಮೂಲಕ ಶತ್ರುವಿನ (ಡ್ರೋನ್) ಹುಡುಕಿ ಅದನ್ನು ನಾಶ ಮಾಡುತ್ತದೆ.
ಸಂಪಾದಕೀಯ ನಿಲುವುಭಾರತವನ್ನು ಅಸ್ಥಿರಗೊಳಿಸುವುದಕ್ಕಾಗಿ ಪಾಕಿಸ್ತಾನ ವಿವಿಧ ತಂತ್ರಜ್ಞಾನದ ಬಳಕೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ತಡೆಗಟ್ಟಲು ಭಾರತದಿಂದ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಆವಶ್ಯಕವಾಗಿದೆ; ಆದರೆ ಭಯೋತ್ಪಾದಕರ ಜನಕ ಪಾಕಿಸ್ತಾನವನ್ನು ಬೇರು ಸಹಿತ ನಾಶ ಮಾಡುವುದು ಹೆಚ್ಚು ಆವಶ್ಯಕವಾಗಿದೆ, ಇದನ್ನು ತಿಳಿಯಬೇಕು ! |