(ಸೈಬರ ಅಪರಾಧ ಎಂದರೆ ಇಂಟರ್ನೆಟ್ ಮೂಲಕ ಮಾಡಿರುವ ಅಪರಾಧ)
ನವ ದೆಹಲಿ – ಕೇಂದ್ರ ಗೃಹ ಸಚಿವಾಲಯವು ‘ರಾಷ್ಟ್ರೀಯ ಸೈಬರ ಅಪರಾಧ ವರದಿ’ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ಮಾಧ್ಯಮದಿಂದ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುವ ಅಪರಾಧಗಳ ವರದಿ ಮಾಡಿದೆ. ಇದರ ಪ್ರಕಾರ ದೇಶದಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ಈ ರಾಜ್ಯಗಳಲ್ಲಿ ಎಲ್ಲಕಿಂತ ಹೆಚ್ಚು ಸೈಬರ ಅಪರಾಧ ವರದಿ ಆಗಿರುವುದು ಗಮನಕ್ಕೆ ಬಂದಿದೆ.
೧. ವರದಿಯ ಪ್ರಕಾರ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಾರ್ತೆ (ಫೆಕ್ ನ್ಯೂಸ್) ನೀಡುವ ಅಪರಾಧಗಳು ೬ ರಾಜ್ಯಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಕಂಡು ಬಂದಿದೆ. ಇದರಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಇಲ್ಲಿ ಎಲ್ಲಕಿಂತ ಹೆಚ್ಚು ಅಪರಾಧ ದಾಖಲಾಗಿದೆ. ೨೦೨೨ ರಲ್ಲಿ ನಕಲಿ ವಾರ್ತೆಯ ೨೩೦ ಅಪರಾಧದ ವರದಿಯಾಗಿದೆ. ಇವುಗಳ ಪೈಕಿ ತೆಲಂಗಾಣ ೮೧ ಹಾಗೂ ತಮಿಳನಾಡಿನಲ್ಲಿ ೩೭ ಅಪರಾಧ ದಾಖಲಾಗಿದೆ.
೨. ೨೦೨೨ ರಲ್ಲಿ ದೇಶಾದ್ಯಂತ ‘ಎಟಿಎಮ್’ ಮೂಲಕ ವಂಚನೆಯ ೧ ಸಾವಿರದ ೬೯೦ ಅಪರಾಧ ದಾಖಲಾಗಿದೆ. ಇದರಿಲ್ಲಿ ಬಿಹಾರ ಎಲ್ಲಕಿಂತ ಮುಂದೆ ಇದೆ. ಬಿಹಾರದಲ್ಲಿ ‘ಎಟಿಎಮ್’ ಮೂಲಕ ವಂಚನೆಯ ೬೩೮ ಪ್ರಕರಣ ವರದಿ ಆಗಿದೆ. ಇದರನಂತರ ತೆಲಂಗಾಣ (೬೨೪ ಅಪರಾಧ) ಮತ್ತು ಮಹಾರಾಷ್ಟ್ರ (೧೪೪ ಅಪರಾಧ) ಇವುಗಳ ಸರದಿ ಬರುತ್ತದೆ.
೩. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪರಿಚಯ (ಫೇಕ ಪ್ರೋಫಾಯಿಲ್) ತೋರಿಸಿ ವಂಚನೆ ಮಾಡಿರುವ ಎಲ್ಲಕಿಂತ ಹೆಚ್ಚು ಅಪರಾಧ ಮಹಾರಾಷ್ಟ್ರ ಮತ್ತು ರಾಜಸ್ಥಾನ ಇಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಪರಾಧದ ಒಟ್ಟು ೧೫೭ ಪ್ರಕರಣಗಳು ವರದಿ ಆಗಿದೆ. ಇದರಲ್ಲಿ ಮಹಾರಾಷ್ಟ್ರ ಒಂದರಲ್ಲಿಯೇ ೪೮ ಹಾಗೂ ರಾಜಸ್ಥಾನ ೩೩ ಪ್ರಕರಣಗಳು ಬೆಳಕಿಗೆ ಬಂದಿವೆ.
#Cybercrimes see highest spike among cognisable offences in 2022, says NCRB
(Reports @chetanecostani)https://t.co/oXqSlLQZBL pic.twitter.com/EB2YVfLzbT
— Hindustan Times (@htTweets) December 5, 2023