ಜನವರಿ 26 ರ ಮೊದಲು ಪೌರತ್ವ ತಿದ್ದುಪಡಿ ಕಾಯಿದೆಯ ಪ್ರಕ್ರಿಯೆಗಳ ಅಧಿಸೂಚನೆ ಪ್ರಸಾರ

ನವ ದೆಹಲಿ – ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಪ್ರಕ್ರಿಯೆಗಳ ಅಧಿಸೂಚನೆಯನ್ನು ಜನವರಿ 26 ರ ಮೊದಲು ಪ್ರಸಾರ ಮಾಡಲಾಗುವುದು. ಕೇಂದ್ರ ಸರಕಾರದ ನಿರ್ಣಯವನ್ನು ಬಾಂಗ್ಲಾದೇಶದಲ್ಲಿರುವ ಹಿಂದೂ ನಿರಾಶ್ರಿತರಿಗೆ ಆಶಾಕಿರಣವಾಗಿದೆ. ಇದರೊಂದಿಗೆ ಪಾಕಿಸ್ತಾನದ ದೌರ್ಜನ್ಯಗಳಿಂದ ಬೇಸತ್ತು ಭಾರತಕ್ಕೆ ಬಂದಿರುವ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಬಹಳ ಸಮಾಧಾನ ಸಿಗಲಿದೆ. ಒಂದು ಅಂಕಿಅಂಶಗಳ ಪ್ರಕಾರ, 2014 ರವರೆಗೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 32 ಸಾವಿರ ನಾಗರಿಕರು ಭಾರತಕ್ಕೆ ಬಂದಿದ್ದಾರೆ.

1. ಸಂಸತ್ತು ಡಿಸೆಂಬರ್ 11, 2019 ರಂದು ಪೌರತ್ವ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡಿತ್ತು. ಈ ಕಾನೂನನ್ನು ಜಾರಿಗೆ ತರಲು ನಿಯಮಗಳನ್ನು ರೂಪಿಸುವ ಕಾಲಾವಧಿಯನ್ನು ಸರಕಾರ 8 ಬಾರಿ ವಿಸ್ತರಿಸಿತ್ತು.

2. ಈ ಕಾನೂನಿನ ಅಡಿಯಲ್ಲಿ, ಡಿಸೆಂಬರ್ 31, 2014 ರ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ದೌರ್ಜನ್ಯಗಳಿಗೆ ಬೇಸತ್ತು ಭಾರತಕ್ಕೆ ಬಂದಿರುವ ಹಿಂದೂ, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿ ಮತ್ತು ಕ್ರೈಸ್ತ ಸಮುದಾಯಗಳಿಗೆ ಸೇರಿದ ಜನರಿಗೆ ಪೌರತ್ವ ನೀಡಲಾಗುವುದು.

3. ಅನಧಿಕೃತವಾಗಿ ಭಾರತಕ್ಕೆ ಬಂದಿರುವ ನಿರಾಶ್ರಿತರನ್ನು ಹೊರಹಾಕುವುದಕ್ಕೂ ‘ಸಿಎಎ’ ಕಾನೂನಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕಾಗಿ ವಿದೇಶಿ ಕಾಯಿದೆ 1946 ಮತ್ತು ಪಾಸ್ ಪೋರ್ಟ್ ಕಾಯಿದೆ 1920 ಈಗಾಗಲೇ ಜಾರಿಯಲ್ಲಿದೆ ಎಂದು ಹೇಳಲಾಗಿದೆ.