ರಾಂಚಿ (ಜಾರ್ಖಂಡ್) – ಜಾರ್ಖಂಡದಲ್ಲಿನ ಕಾನೂನ ಬಾಹಿರ ಗಣಿಗಾರಿಕೆಯ ಸಂಬಂಧಿತ ಕಾನೂನು ಬಾಹಿರ ಆರ್ಥಿಕ ವ್ಯವಹಾರ (ಮನಿ ಲ್ಯಾಂಡ್ರಿಂಗ್) ಪ್ರಕರಣದಲ್ಲಿ ಈಡಿಯಿಂದ ರಾಂಚಿ ಮತ್ತು ರಾಜಸ್ಥಾನದಲ್ಲಿನ ೧೦ ಸ್ಥಳಗಳಲ್ಲಿ ದಾಳಿ ನಡೆಸಿದೆ. ಇದರಲ್ಲಿ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ ಇವರ ಪ್ರಸಾರ ಮಾಧ್ಯಮ ಸಲಹೆಗಾರ ಅಭಿಷೇಕ ಪ್ರಸಾದ ಇವರ ಸಮಾವೇಶ ಕೂಡ ಇದೆ. ಇದಲ್ಲದೆ ಹಜಾರಿಬಾಗನ ಪೊಲೀಸ ಅಧಿಕಾರಿ ರಾಜೇಂದ್ರ ದುಬೆ ಮತ್ತು ಸಾಹೇಬಗಂಜನ ಉಪ ಜಿಲ್ಲಾಧಿಕಾರಿ ರಾಮ ನಿವಾಸ ಇವರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗಿದೆ. ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಯ ಜವಾಬ್ದಾರಿ ಇರುವಾಗ ಹೇಮಂತ ಸೋರೆನ ಇವರು ೨೦೨೧ ರಲ್ಲಿ ಸ್ವಂತಕ್ಕಾಗಿ ಗಣಿಯನ್ನು ಬಾಡಿಗೆ ಆಧಾರದಲ್ಲಿ (‘ಲಿಜ್’ಗೆ) ಪಡೆದು ಚುನಾವಣಾ ನಿಯಮದ ಉಲ್ಲಂಘನೆ ಮಾಡಿದ್ದಾರೆ, ಎಂದು ಅವರ ಮೇಲೆ ಆರೋಪ ಕೂಡ ಮಾಡಲಾಗಿದೆ; ಆದರೆ ಸೋರೆನ ಇವರು ಈ ಆರೋಪ ನಿರಾಕರಿಸಿದ್ದಾರೆ. ಆದಿವಾಸಿ ನಾಯಕನಿಗೆ ಕಿರುಕುಳ ನೀಡುವುದಕ್ಕಾಗಿ ಈ ಷಡ್ಯಂತರ ರಚಿಸಲಾಗಿದೆ ಎಂದು ಹೇಳಿದ್ದಾರೆ. (ಭ್ರಷ್ಟಾಚಾರದಲ್ಲಿ ಸಿಲುಕಿದಾಗ ಪ್ರತಿಯೊಬ್ಬರಿಗೂ ಜಾತಿ ಧರ್ಮ ಮುಂತಾದವು ನೆನಪಿಗೆ ಬರುತ್ತದೆ ಮತ್ತು ಅದರ ಆಧಾರದಲ್ಲಿ ತಮ್ಮನ್ನು ನಿರಪರಾಧಿ ಎಂದು ನಿಶ್ಚಯಿಸುವ ಪ್ರಯತ್ನ ಮಾಡುತ್ತಾರೆ ! – ಸಂಪಾದಕರು)
ಭೂಮಿ ಹಗರಣಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ, ‘ಈಡಿ’ ಇಂದ ಸೋರೆನ ಇವರಿಗೆ ಏಳನೆಯ ಸಲ ನೋಟಿಸ ಜಾರಿ ಮಾಡಲಾಗಿತ್ತು. ಈ ನೋಟಿಸಿನ ಪ್ರಕಾರ ಸೋರೆನ ಇವರಿಗೆ ಅವರ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿತ್ತು; ಆದರೆ ಸೋರೆನ ಇವರು ಈ ನೋಟೀಸ್ಅನ್ನು ‘ಕಾನೂನ ಬಾಹಿರ’ ಎಂದು ಹೇಳಿದ್ದಾರೆ. ‘ಈಡಿ’ ಇಂದ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸೋರೆನ ಆರೋಪಿಸಿದ್ದಾರೆ.