ಕೆನಡಾದ ರಾಜಕಾರಣದಲ್ಲಿ ಖಲಿಸ್ತಾನಿ ಸಹಭಾಗಿ ಇರುವುದರಿಂದ ಉಭಯ ದೇಶಗಳಲ್ಲಿನ ಸಂಬಂಧ ಹದಗೆಟ್ಟಿದೆ ! – ಡಾ.ಎಸ್. ಜೈ ಶಂಕರ

ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈ ಶಂಕರ ಇವರ ಸ್ಪಷ್ಟನೆ !

ನವ ದೆಹಲಿ – ಕೆನಡಾ ರಾಜಕಾರಣದಲ್ಲಿ ಖಲಿಸ್ತಾನಿಗಳಿಗೆ ಬೃಹತ್ ಪ್ರಮಾಣದಲ್ಲಿ ಸ್ಥಾನ ನೀಡಲಾಗಿದೆ. ಇದರಿಂದಾಗಿ ಬಹಳಷ್ಟು ಪ್ರಮಾಣದಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಆದ್ದರಿಂದ ಅವರು ಈ ರೀತಿಯ ಕೃತಿಗಳು ಮಾಡುತ್ತಿದ್ದಾರೆ, ಇದರಿಂದ ಉಭಯ ದೇಶದ ಸಂಬಂಧ ಹದಗೆಟ್ಟಿದೆ. ನನಗೆ ಇದು ಭಾರತದ ಹಿತಕ್ಕಾಗಿ ಇಲ್ಲ ಹಾಗೂ ಕೆನಡಾದ ಹಿತಕ್ಕೂ ಒಳ್ಳೆಯದಲ್ಲ, ಎಂದು ನನಗೆ ಅನಿಸುತ್ತದೆ, ಎಂದು ಭಾರತದ ವಿದೇಶಾಂಗ ಸಚಿವಾ ಡಾ. ಜೈಶಂಕರ ಎ.ಎನ್.ಐ.ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪಾಕಿಸ್ತಾನದ ಷರತ್ತುಗಳ ಆಧಾರದಲ್ಲಿ ಚರ್ಚಿಸುವುದಿಲ್ಲ !

ಪಾಕಿಸ್ತಾನದ ಸಂದರ್ಭದಲ್ಲಿ ಡಾ. ಜೈ ಶಂಕರ ಅವರು, ಭಾರತದ ಮೇಲೆ ಚರ್ಚೆಗಾಗಿ ಒತ್ತಡ ತರಲು ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ಉಪಯೋಗಿಸುತ್ತಿದೆ. ನಾವು ನಮ್ಮ ನೆರೆಯವರ ಜೊತೆಗೆ ಚರ್ಚಿಸಬಾರದು ಎಂದೇನಿಲ್ಲ; ಆದರೆ ಪಾಕಿಸ್ತಾನವು ಯಾವ ಷರತ್ತು ಹೇಳುತ್ತಿದೆ ಅದರ ಆಧಾರದಲ್ಲಿ ನಾವು ಚರ್ಚಿಸುವುದಿಲ್ಲ. ನೆರೆಯವರೇ ಪರಸ್ಪರ ಸಹಾಯಕ್ಕೆ ಬರುತ್ತಾರೆ; ಎಂಬುದು ನಮಗೆ ಗೊತ್ತಿದೆ, ಆದರೆ ನಾವು ಪಾಕಿಸ್ತಾನದ ಷರತ್ತುಗಳ ಮೇಲೆ ಚರ್ಚಿಸಲಾರೆವು ಎಂದು ಹೇಳಿದರು.

ಚೀನಾದೊಂದಿಗೆ ಸರದಾರ ಪಟೇಲ್ ಇವರ ನೀತಿಯ ಪ್ರಕಾರ ವ್ಯವಹಾರ ಮಾಡುತ್ತಿದ್ದೇವೆ !

ಚೀನಾದ ಬಗ್ಗೆ ಡಾ. ಜೈಶಂಕರ ಇವರು, ನೆಹರು ಅವರು ‘ಚೀನಾ ಫಸ್ಟ್’ ಈ ನೀತಿಯ ಮೇಲೆ ಕಾರ್ಯ ಮಾಡಿದರು. ನೆಹರು ಮತ್ತು ಸರದಾರ ಪಟೇಲ್ ಇವರಲ್ಲಿ ಹಿಂದಿನಿಂದಲೂ ಚೀನಾಗೆ ಪ್ರತ್ಯುತ್ತರ ಹೇಗೆ ನೀಡಬೇಕು ? ಇದರ ಕುರಿತು ಮತಭೇದವಿತ್ತು. ಸರದಾರ ಪಟೇಲ ಇವರು ಚೀನಾದ ಜೊತೆಗೆ ವ್ಯವಹಾರ ನಡೆಸುತ್ತಿರುವಾಗ ವಾಸ್ತವಿಕೆ ಪ್ರಕಾರ ಮೋದಿ ಸರಕಾರ ಕಾರ್ಯ ಮಾಡುತ್ತಿದೆ. ಪರಸ್ಪರ ಸಂಬಂಧಗಳ ಮೇಲೆ ಆಧಾರಿತ ಇಂತಹ ಸಂಬಂಧಗಳಿಗೆ ಮಾನ್ಯತೆ ದೊರೆಯುವುದಿಲ್ಲ, ಅಲ್ಲಿಯವರೆಗೆ ಇಂತಹ ಸಂಬಂಧ ಮುಂದೆ ಹೋಗುವುದು ಕಠಿಣವಾಗುತ್ತದೆ ಎಂದು ಹೇಳಿದರು.

ಜಗತ್ತಿನಲ್ಲಿನ ಅನೇಕ ದೇಶದ ನಾಯಕರಿಗೆ ಭಾರತಕ್ಕೆ ಬರುವುದಿದೆ !

‘ಭಾರತ ಸ್ವಂತದ ವಿಚಾರ ಜಗತ್ತಿನ ಮೇಲೆ ಹೇರುತ್ತಿದೆಯೇ ?’, ಈ ಪ್ರಶ್ನೆಗೆ ಉತ್ತರ ನೀಡುವಾಗ ವಿದೇಶಾಂಗ ಸಚಿವಾ ಡಾ. ಜೈಶಂಕರ ಇವರು, ನಾವು ನಮ್ಮ ಅಭಿಪ್ರಾಯ ಯಾರ ಮೇಲೆ ಹೇರುತ್ತಿದ್ದೇವೆ, ಎಂದು ನನಗೆ ಅನಿಸುವುದಿಲ್ಲ. ಭಾರತದ ಕಡೆ ಎಲ್ಲಕ್ಕಿಂತ ಹೆಚ್ಚು ಸಮರ್ಪಕ ದೃಷ್ಟಿಯಿಂದ ನೋಡಲಾಗುತ್ತದೆ. ಅನೇಕ ದೇಶದ ನಾಯಕರಿಗೆ ಭಾರತಕ್ಕೆ ಬರುವುದಿದೆ. ‘ಪ್ರಧಾನಮಂತ್ರಿ ಪ್ರತಿ ವರ್ಷ ಜಗತ್ತಿನಲ್ಲಿನ ಪ್ರತಿಯೊಂದು ದೇಶಕ್ಕೆ ಏಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ?’, ಇದು ಆ ಸಂಬಂಧಿತ ದೇಶಗಳು ಸ್ಪಷ್ಟ ಪಡಿಸುವುದು, ಇದು ವಿದೇಶಾಂಗ ಸಚಿವ ಈ ಸಂಬಂಧದಿಂದ ನನ್ನ ಎದುರು ಒಂದು ದೊಡ್ಡ ಸವಾಲ್ ಇದೆ. ಪ್ರತಿಯೊಬ್ಬರಿಗೂ, ಮೋದಿ ಇವರು ನಮ್ಮ ದೇಶಕ್ಕೆ ಭೇಟಿ ನೀಡಬೇಕು ಎಂದು ಅನಿಸುತ್ತದೆ ಎಂದು ಹೇಳಿದರು.