ISRO XPoSat Mission : ‘ಇಸ್ರೋ’ ಇಂದು ‘Black Hole’ ಸಂಶೋಧನೆಗೆ ಉಪಗ್ರಹ ಉಡಾವಣೆ ಮಾಡಲಿದೆ !

  • ಶ್ರೀಹರಿಕೋಟಾದಿಂದ ‘ಎಕ್ಸ್ ರೇ ಪೋಲಾರಿಮೀಟರ್’ ಉಪಗ್ರಹ ಉಡಾವಣೆ !

  • ತಿರುಪತಿ ಬಾಲಾಜಿಯ ಆಶೀರ್ವಾದ ಪಡೆಯಲಾಯಿತು !

ತಿರುಪತಿ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ‘ಇಸ್ರೋ’, ಮೊದಲ ಬಾರಿಗೆ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಜನವರಿ 1, 2024 ರಂದು ಉಡಾವಣೆ ಮಾಡಲಿದೆ. ಈ ಉಪಗ್ರಹವು ‘ಕೃಷ್ಣ ವಿವರ’ (‘ಬ್ಲ್ಯಾಕ್ ಹೋಲ್’) ಗೆ ಸಂಬಂಧಿಸಿದ ಸಂಶೋಧನೆ ನಡೆಸಲಿದೆ. ಇದರೊಂದಿಗೆ ಇತರ ಪ್ರಮುಖ ಭ್ರಹ್ಮಾಂಡ ಸೂತ್ರಗಳ ಸಂಶೋಧನೆಯು ಈ ಮೂಲಕ ನಡೆಯಲಿದೆ. ಈ ಮಿಷನ್‌ನ ಹೆಸರು ‘ಪಿ.ಎಸ್‌.ಎಲ್‌.ವಿ.-ಸಿ58’ ಅಥವಾ ‘ಎಕ್ಸ್‌ಪೋಸ್ಯಾಟ್ ಮಿಷನ್’ ಆಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗಾಗಿ, ಇಸ್ರೋ ವಿಜ್ಞಾನಿಗಳಾದ ಅಮಿತ್ ಕುಮಾರ್ ಪಾತ್ರಾ, ವಿಕ್ಟರ್ ಜೋಸೆಫ್, ಯಶೋದಾ ಮತ್ತು ಶ್ರೀನಿವಾಸ್ ಅವರು ತಿರುಮಲ-ತಿರುಪತಿಗೆ ಆಗಮಿಸಿ ತಿರುಪತಿ ಬಾಲಾಜಿಯ ಆಶೀರ್ವಾದ ಪಡೆದರು. ‘ಎಕ್ಸ್‌ಪೋಸ್ಯಾಟ್’ ಅನ್ನು ಜನವರಿ 1 ರಂದು ಬೆಳಿಗ್ಗೆ 9:10 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು.

ಈ ಅಭಿಯಾನದ ಉದ್ದೇಶ!

ವಿವಿಧ ಆಕಾಶ ಮೂಲಗಳಿಂದ ಬಾಹ್ಯಾಕಾಶದಲ್ಲಿ ಹೊರಸೂಸುವ ‘ಎಕ್ಸ್-ರೇ’ ಕಿರಣಗಳ ಧ್ರುವೀಕರಣವನ್ನು ಈ ಕಾರ್ಯಾಚರಣೆಯ ಮೂಲಕ ಅಳೆಯಲಾಗುತ್ತದೆ. ಇದು ಇಸ್ರೋದ ಮೊದಲ ಮಿಷನ್ ಆಗಿದೆ.

ಈ ಮಿಷನ್ ಎಕ್ಸ್-ರೇ ಕಿರಣಗಳ ತೀವ್ರತೆ ಮತ್ತು ಕೋನದ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ, ಇದು ಬ್ರಹ್ಮಾಂಡದ ಗ್ರಹಗಳ ವಿಕಿರಣದ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ.

ಇದಕ್ಕಾಗಿ ಈ ಉಪಗ್ರಹದಿಂದ ಎರಡು ‘ಪೇಲೋಡ್’ (ಯಂತ್ರ)ಗಳನ್ನು ಕಳುಹಿಸಲಾಗುವುದು. ಇವುಗಳಲ್ಲಿ ‘ಪೊಲಿಕ್ಸ್'(ಎಕ್ಸ್-ಕಿರಣಗಳಲ್ಲಿನ ‘ಪೋಲಾರಿಮೀಟರ್’ ಉಪಕರಣ) ಮತ್ತು ‘ಎಕ್ಸಸ್ಪೆಕ್ಟ’ (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಎಂಡ್ ಟೈಮಿಂಗ್) ಸೇರಿವೆ. ‘ಪೋಲಿಕ್ಸ್’ ಅನ್ನು ‘ರಮಣ ರಿಸರ್ಚ್ ಇನ್‌ಸ್ಟಿಟ್ಯೂಟ್’ ನಿರ್ಮಿಸಿದರೆ, ‘ಎಕ್ಸ್ಪೆಕ್ಟ್’ ಅನ್ನು ‘ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ಮಾಡಲಾಗಿದೆ.