ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಹೆಸರು ‘ಮಹರ್ಷಿ ವಾಲ್ಮೀಕಿ ಅಯೋಧ್ಯಾ ಧಾಮ್’

ಇಂದು ಪ್ರಧಾನಮಂತ್ರಿ ಮೋದಿಯವರಿಂದ ಉದ್ಘಾಟನೆ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿ ಕಟ್ಟಲಾದ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗಿದೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್’ ಎಂದು ಅದರ ನಾಮಕರಣ ಮಾಡಲಾಗಿದೆ. ಪ್ರಧಾನಮಂತ್ರಿ ಮೋದಿ ಇವರು ಇಂದು ಅಯೋಧ್ಯೆಗೆ ಹೋಗಿ ಈ ವಿಮಾನ ನಿಲ್ದಾಣದ ಉದ್ಘಾಟನೆ ಮಾಡುವವರು. ಇದಲ್ಲದೆ ಅಯೋಧ್ಯೆಯ ಪುನರ್ವಿಕಾಸ ರೈಲುನಿಲ್ದಾಣದ ಉದ್ಘಾಟನೆ ಕೂಡ ಪ್ರಧಾನಮಂತ್ರಿ ಮೋದಿ ಇವರಿಂದ ಆಗಲಿದೆ. ಪ್ರಧಾನಮಂತ್ರಿ ಮೋದಿ ಸಮಯದಲ್ಲಿ ಹೊಸದಾದ ಅಮೃತ ಭಾರತ ಮತ್ತು ಒಂದೇ ಭಾರತ ರೈಲಿಗೆ ಹಸಿರು ಬಾವುಟ ತೋರಿಸುವರು. ಅವರು ರಾಜ್ಯದಲ್ಲಿನ ೧೫ ಸಾವಿರದ ೭೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿ ಅಡಿಪಾಯ ಇಡುವರು.

ಅಯೋಧ್ಯೆಯಲ್ಲಿನ ಅತ್ಯಾಧುನಿಕ ವಿಮಾನ ನಿಲ್ದಾಣದ ಮೊದಲನೆಯ ಹಂತ ೧ ಸಾವಿರದ ೪೫೦ ಕೋಟಿ ರೂಪಾಯಿಗಿಂತಲೂ ಹೆಚ್ಚು ಖರ್ಚು ಮಾಡಿ ಅಭಿವೃದ್ಧಿಗೊಳಿಸಲಾಗಿದೆ. ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡದ ಕ್ಷೇತ್ರಫಲ ೬ ಸಾವಿರದ ೫೦೦ ಸ್ಕ್ವಯರ್ ಫೀಟ್ ಆಗಿದೆ, ಅದು ಪ್ರತಿ ವರ್ಷ ಸುಮಾರು ೧೦ ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವುದಕ್ಕಾಗಿ ಸಜ್ಜಾಗಿದೆ. ಟರ್ಮಿನಲ್ ಕಟ್ಟಡದ ಮುಂದಿನ ಭಾಗ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಹಾಗೆ ಕಟ್ಟಲಾಗಿದೆ. ಟರ್ಮಿನಲ್ ಕಟ್ಟಡದ ಒಳಗಿನ ಭಾಗದಲ್ಲಿ ಸ್ಥಳೀಯ ಕಲೆ, ಚಿತ್ರಗಳು ಮತ್ತು ಭಗವಾನ್ ಶ್ರೀ ರಾಮನ ಜೀವನದ ದೃಶ್ಯಗಳಿಂದ ಅಲಂಕರಿಸಲಾಗಿದೆ.