ಬಾಹ್ಯಾಕಾಶದಿಂದಲೇ ನೆರೆಯ ದೇಶಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗುವುದು !
ಮುಂಬಯಿ – ನಾವು ಬರುವ ೫ ವರ್ಷಗಳಲ್ಲಿ ೫೦ ಉಪಗ್ರಹಗಳನ್ನು ಉಡಾವಣೆ ಮಾಡುವ ಸಿದ್ಧತೆಯಲ್ಲಿ ಇದ್ದೇವೆ. ಪೃಥ್ವಿಯ ಬೇರೆ ಬೇರೆ ಕಕ್ಷೆಗಳಲ್ಲಿ ಈ ಉಪಗ್ರಹಗಳನ್ನು ಸ್ಥಾಪಿಸಲಾಗುವುದು, ಇದರಲ್ಲಿ ಸೈನ್ಯದ ಚಟುವಟಿಕೆ ಮತ್ತು ಸಾವಿರಾರು ಕಿಲೋಮೀಟರ್ ಕ್ಷೇತ್ರದ ಛಾಯಾ ಚಿತ್ರಗಳನ್ನು ಸಂಗ್ರಹಿಸುವ ಕ್ಷಮತೆ ಇರುವುದು. ಬಾಹ್ಯಾಕಾಶದಿಂದ ದೇಶದ ಗಡಿಯ ಮತ್ತು ನೆರೆಯ ಪ್ರದೇಶದ ಮೇಲೆ ಗಮನ ಇರಿಸಲು ಸಕ್ಷಮವಾಗಿರುವುದು. ನಾವು ಅದಕ್ಕೆ ಅತ್ಯಂತ ಮಹತ್ವ ನೀಡಿ ಕೆಲಸ ಮಾಡುತ್ತಿದ್ದೇವೆ; ಕಾರಣ ಯಾವುದೇ ರಾಷ್ಟ್ರದ ಶಕ್ತಿ ಅದರ ಸುತ್ತಮುತ್ತ ಏನು ನಡೆಯುತ್ತಿದೆ ? ಇದನ್ನು ತಿಳಿದುಕೊಳ್ಳುವ ಕ್ಷಮತೆಯ ಮೇಲೆ ಅವಲಂಬಿಸಿರುತ್ತದೆ, ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮುಖ್ಯಸ್ಥ ಡಾ ಎಸ್. ಸೋಮನಾಥ ಇವರು ಮಾಹಿತಿ ನೀಡಿದರು. ಅವರು ಇಲ್ಲಿಯ ‘ಮುಂಬಯಿ ಐಐಟಿ’ಯ ವಾರ್ಷಿಕ ವಿಜ್ಞಾನ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು.
ಇಸ್ರೋದ ಮುಖ್ಯಸ್ಥ ಡಾ. ಎಸ್ ಸೋಮನಾಥ ಇವರು ಮಾತನ್ನು ಮುಂದುವರೆಸಿ, ಮುಂಬರುವ ಸಮಯದಲ್ಲಿ ಹವಾಮಾನ ಬಹಳ ಮಹತ್ವದ್ದಾಗಿದೆ. ವಾಯು ಮಾಲಿನ್ಯ, ಹಸಿರು ಮನೆಯ ಅನಿಲಗಳು, ಮಹಾಸಾಗರಗಳ ವರ್ತನೆ, ಮಣ್ಣು ಮತ್ತು ವಿಕಿರಣಗಳಂತಹ ಘಟನೆಗಳ ಅಧ್ಯಯನ ನಡೆಸಿ ಭಾರತ ಈ ಕ್ಷೇತ್ರದಲ್ಲಿ ಕೊಡುಗೆ ನೀಡಲು ಇಚ್ಚಿಸುತ್ತಿದೆ. ನಾವು ಇದಕ್ಕಾಗಿ ಒಂದು ಉಪಗ್ರಹ ತಯಾರಿಸುವ ಪ್ರಸ್ತಾವ ಮಂಡಿಸಿದ್ದೇವೆ ಮತ್ತು ನಮಗೆ ಜಿ20 ದೇಶಗಳು ಭಾರತಕ್ಕೆ ಬರಬೇಕು ಮತ್ತು ಅದಕ್ಕಾಗಿ ಉಪಕರಣಗಳು ಮತ್ತು ಇತರ ಕೊಡುಗೆ ನೀಡಬೇಕೆಂದು ನಮ್ಮ ಆಸೆ ಆಗಿದೆ. ನಾವು ಈ ಉಪಗ್ರಹ ೨ ವರ್ಷದಲ್ಲಿಯೇ ಉಡಾವಣೆ ಮಾಡುವವರಿದ್ದೇವೆ ಮತ್ತು ಇದು ಜಗತ್ತಿಗಾಗಿ ಭಾರತದ ಕೊಡುಗೆ ಆಗುವುದು. ಇದರಿಂದ ದೊರೆಯುವ ಮಾಹಿತಿ ಸಂಪೂರ್ಣ ಜಗತ್ತಿಗಾಗಿ ಲಭ್ಯವಾಗಬೇಕು, ಅದರಿಂದ ಇತರ ದೇಶಗಳು ಅವರ ಸಂಶೋಧನೆಯಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಾಗುವುದು, ಹೀಗೆ ನಮ್ಮ ಇಚ್ಛೆಯಾಗಿದೆ.
Indian Space Research Organisation (ISRO) chief S Somanath on Thursday said that India is planning to launch 50 satellites in the next five years for geo-intelligence gatheringhttps://t.co/0oKOOeq3Vs
— Business Today (@business_today) December 29, 2023
ಜನವರಿ ೬ ರಂದು ಮಧ್ಯಾಹ್ನ ೪ ಗಂಟೆಗೆ ಲ್ಯಾಗ್ರೇಜ್ ಪಾಯಿಂಟಿ ತಲುಪಿದ ಆದಿತ್ಯ ಎಲ್ 1 ಉಪಗ್ರಹ !
(‘ಲ್ಯಾಗ್ರೇಜ್ ಪಾಯಿಂಟ್’ ಎಂದರೆ ಈ ಬಿಂದುವಿನಿಂದ ಸೂರ್ಯ ಯಾವುದೇ ಅಡಚಣೆ ಇಲ್ಲದೆ ಸತತ ದೃಷ್ಟಿಗೆ ಸಿಗುತ್ತದೆ)
ದೇಶದಲ್ಲಿನ ಮೊದಲ ಸೌರ ಅಭಿಯಾನದ ಬಗ್ಗೆ ಡಾ. ಎಸ್ ಸೋಮನಾಥ ಇವರು, ‘ಆದಿತ್ಯ ಎಲ್ 1’ ಈ ಉಪಗ್ರಹ ಜನವರಿ ೬ ರಂದು ಮಧ್ಯಾಹ್ನ ೪ ಗಂಟೆಗೆ ಲ್ಯಾಗ್ರೇಜ್ ಪಾಯಿಂಟಿಗೆ ತಲುಪುವುದು. ‘ಆದಿತ್ಯ ಎಲ್ 1’ನ ಎಲ್ಲಾ ಉಪಕರಣಗಳ ಪರೀಕ್ಷೆ ಮಾಡಲಾಗಿದ್ದು ಅವು ಒಳ್ಳೆಯ ರೀತಿಯಲ್ಲಿ ಕಾರ್ಯ ಮಾಡುತ್ತಿವೆ.
ಶ್ರೀಹರಿಕೋಟಾ (ಆಂಧ್ರಪ್ರದೇಶ) ಇಲ್ಲಿಯ ಸತೀಶ ಧವನ ಸ್ಪೇಸ್ ಸೆಂಟರ್ ನಿಂದ ಸೆಪ್ಟೆಂಬರ್ ೨, ೨೦೨೩ ರಂದು ‘ಆದಿತ್ಯ ಎಲ್ 1’ ಉಡಾವಣೆ ಮಾಡಲಾಯಿತು. ಸೂರ್ಯನ ಅಧ್ಯಯನ ಮಾಡುವುದಕ್ಕಾಗಿ ಈ ಅಭಿಯಾನ ಪ್ರಾರಂಭಿಸಲಾಗಿದೆ. ಲ್ಯಾಗ್ರೇಜ್ ಪಾಯಿಂಟ್ ಪೃಥ್ವಿಯಿಂದ ೧೪ ಲಕ್ಷ ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಿದರು.
ಸೋಮನಾಥ ಇವರು ಮಾತು ಮುಂದುವರೆಸಿ, ಲ್ಯಾಗ್ರೇಜ್ ಪಾಯಿಂಟ್ ಇದು ಒಂದು ಇಂತಹ ಪ್ರದೇಶವಾಗಿದೆ ಅಲ್ಲಿ ಸೂರ್ಯ ಮತ್ತು ಪೃಥ್ವಿ ಇವುಗಳಲ್ಲಿ ಗುರುತ್ವಾಕರ್ಷಣ ಇಲ್ಲದಾಗಿದೆ. ಆದಿತ್ಯ ಎಲ್ 1 ಅಲ್ಲಿ ತಲುಪಿದ ನಂತರ ಸೂರ್ಯನ ಅಧ್ಯಯನ ಮಾಡಲು ಸಾಧ್ಯವಾಗುವುದು. ‘ಸೋಲಾರ್ ಕೊರೋನಾ’ (ಸೂರ್ಯನ ಬಿಸಿ ಬಾಹ್ಯ ವಾತಾವರಣಕ್ಕೆ ಸೋಲಾರ್ ಕೊರೋನ ಎನ್ನುತ್ತಾರೆ) ‘ಮಾಸ್ ಇಂಜೆಕ್ಷನ್’ (ಸೂರ್ಯನ ಪೃಷ್ಟ ಭಾಗದಲ್ಲಿನ ಎಲ್ಲಕ್ಕಿಂತ ಬೃಹತ್ ಸ್ಪೋಟಗಳಲ್ಲಿ ಒಂದು) ಮತ್ತು ಅದರ ನಮ್ಮ ಹವಾಮಾನದ ಮೇಲೆ ಆಗುವ ಪರಿಣಾಮ ಇದರ ಸಂಬಂಧವೇನು ಇದನ್ನು ನಾವು ಹುಡುಕಬಹುದು ಎಂದು ಹೇಳಿದರು.