|
ಸಹರಾನ್‌ಪುರ (ಉತ್ತರ ಪ್ರದೇಶ) – ಇಲ್ಲಿನ ದೆವಬಂದ್ ಪ್ರದೇಶದ ಮದ್ರಸಾದಲ್ಲಿ ಓದುತ್ತಿರುವ ತಲ್ಹಾ ಮಝರ್ ಎಂಬ ವಿದ್ಯಾರ್ಥಿಯು ‘ಎಕ್ಸ್’ ನಿಂದ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾನೆ. ಇದರಲ್ಲಿ ಅವರು 2019 ರ ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಅಲ್ಲಾಹನ ಕೃಪೆಯಿಂದ ದಾಳಿ ಅಡಲಾಯಿತು. ಮತ್ತೊಮ್ಮೆ ಅಲ್ಲಾಹನ ಕೃಪೆಯಿಂದ ಅದೇ ರೀತಿಯ ಮಾಡಲಾಗುವುದು. ಈ ಪ್ರಕರಣದಲ್ಲಿ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ತಲ್ಹಾ ಮಝರ್ ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಮೂಲದವವನಾಗಿದ್ದಾನೆ. ಅವನ ಇತರ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಸಹಾರನ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ಅವರು ವಿಷಯದ ಗಂಭೀರತೆಯನ್ನು ಪರಿಗಣಿಸಿ ಪ್ರಕರಣವನ್ನು ದಾಖಲಿಸಿ ಜಂಟಿ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.
2019 ರಲ್ಲಿ ಪುಲ್ವಾಮಾ ದಾಳಿ !
ಫೆಬ್ರವರಿ 14, 2019 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜಿಹಾದಿ ಭಯೋತ್ಪಾದಕರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ತಂಡದ ಮೇಲೆ ದಾಳಿ ನಡೆಸಿತ್ತು. ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ತಂಡದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಉಂಟಾದ ಪ್ರಬಲ ಬಾಂಬ್ ಸ್ಫೋಟದಲ್ಲಿ 40 ಯೋಧರು ಸಾವನ್ನಪ್ಪಿದ್ದರು.
ಸಂಪಾದಕೀಯ ನಿಲುವುಮದರಸಾಗಳಲ್ಲಿ ಯಾವ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ ಎಂಬುದು ವಿದ್ಯಾರ್ಥಿಯ ಇಂತಹ ಬೆದರಿಕೆಯಿಂದ ಸ್ಪಷ್ಟವಾಗಿದೆ. ಆದ್ದರಿಂದ ಬಿಜೆಪಿ ಸರಕಾರ ಎಲ್ಲ ಮದರಸಾಗಳನ್ನು ಮುಚ್ಚಿ ಅವರಿಗೆ ಮುಖ್ಯವಾಹಿನಿಯ ಶಿಕ್ಷಣ ನೀಡಲು ಮುಂದಾಗಬೇಕು ಎಂಬುದು ರಾಷ್ಟ್ರಪ್ರೇಮಿಗಳ ಅಪೇಕ್ಷೆ ! |