ಇಂಡೋನೇಷ್ಯಾದಲ್ಲಿ ರೊಹಿಂಗ್ಯಾ ನಿರಾಶ್ರಿತರ ಮೇಲೆ ಸ್ಥಳೀಯರಿಂದ ದಾಳಿ !

ಬಾಂದಾ ಅಚೆ (ಇಂಡೋನೇಷ್ಯಾ) – ಇಂಡೋನೇಷ್ಯಾದ ಬಾಂದಾ ಅಚೆ ರಾಜ್ಯದಲ್ಲಿ ರೋಹಿಂಗ್ಯಾ ನಿರಾಶ್ರಿತರ ಶಿಬಿರದ ಮೇಲೆ ನೂರಾರು ಜನರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಗುಂಪಿನಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ರೊಹಿಂಗ್ಯಾ ನಿರಾಶ್ರಿತರು ತಮ್ಮ ಕಡೆಗೆ ಬರುತ್ತಿರುವ ಜನರನ್ನು ಕಂಡು ಓಡಲಾರಂಭಿಸಿದರು. ಪೊಲೀಸರ ಪ್ರಯತ್ನದಿಂದ ರೋಹಿಂಗ್ಯಾ ನಿರಾಶ್ರಿತರನ್ನು ರಕ್ಷಿಸಿದರು. ರೋಹಿಂಗ್ಯಾ ನಿರಾಶ್ರಿತರ ವಿರುದ್ಧ ಅಧ್ಯಕ್ಷ ಜೋಕೊ ಬಿಡೋಡೋ ಅವರ ಸರಕಾರ ಏನನ್ನೂ ಮಾಡುತ್ತಿಲ್ಲ. ಈ ನಿರಾಶ್ರಿತರಿಂದಾಗಿ ಇಂಡೋನೇಷ್ಯಾದ ಜನರು ಹಸಿವಿನಿಂದ ಸಾಯುವ ಅಪಾಯವಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ವರದಿ ಪ್ರಕಾರ, ಹೆಚ್ಚಿನ ರೋಹಿಂಗ್ಯಾ ನಿರಾಶ್ರಿತರು ಪ್ರಸ್ತುತ ಮುಸ್ಲಿಂ ರಾಷ್ಟ್ರಗಳಾದ ಮಲೇಷ್ಯಾ ಮತ್ತು ಇಂಡೋನೇಷ್ಯಾಕ್ಕೆ ಹೋಗುತ್ತಿದ್ದಾರೆ.

1. ಸಮುದ್ರ ಮಾರ್ಗದ ಮೂಲಕ ನಿರಂತರವಾಗಿ ದೋಣಿ ಮೂಲಕ ಇಂಡೋನೇಷ್ಯಾಕ್ಕೆ ನುಸುಳುತ್ತಿರುವ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಇಲ್ಲಿನ ವಿದ್ಯಾರ್ಥಿಗಳು ದೊಡ್ಡ ಪ್ರತಿಭಟನೆ ಆರಂಭಿಸಿದ್ದಾರೆ.

2. ‘ಸರಕಾರ ಕೂಡಲೇ ರೋಹಿಂಗ್ಯಾಗಳನ್ನು ಅವರ ದೇಶಕ್ಕೆ ಅಂದರೆ ಮ್ಯಾನ್ಮಾರ್‌ಗೆ ಕಳುಹಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

3. ಪ್ರತಿ ವರ್ಷ ಮ್ಯಾನ್ಮಾರ್‌ನಿಂದ ಹೊರಹಾಕಲ್ಪಟ್ಟ ರೋಹಿಂಗ್ಯಾ ನಿರಾಶ್ರಿತರು ವಿವಿಧ ದೇಶಗಳಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಾರೆ. ಕಳೆದ ತಿಂಗಳು, ಅಂದಾಜು 250 ರೊಹಿಂಗ್ಯಾಗಳು ಮರದ ದೋಣಿಗಳಲ್ಲಿ ಇಂಡೋನೇಷ್ಯಾದ ಬಾಂದಾ ಅಚೆ ರಾಜ್ಯದ ಕಡಲತೀರಕ್ಕೆ ಬಂದಿದ್ದರು.

4. ಅವರನ್ನು ಸ್ಥಳೀಯ ಜನರು ಹಿಮ್ಮೆಟ್ಟಿಸಿದ್ದರು. ಇಂಡೋನೇಷ್ಯಾದ ಬಂದಾ ಆಚೆ ರಾಜ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರ ಒಳನುಸುಳುವಿಕೆಯ ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶದಲ್ಲಿ ಜನರು ತಮ್ಮ ಧರ್ಮಕ್ಕೆ ಸೇರಿದ ರೋಹಿಂಗ್ಯಾ ಮುಸ್ಲಿಮರನ್ನು ಓಡಿಸುತ್ತಾರೆ; ಆದರೆ ಭಾರತದೊಳಗೆ ನುಸುಳುವ ರೋಹಿಂಗ್ಯಾಗಳಿಗೆ ನಕಲಿ ಗುರುತಿನ ಚೀಟಿ ನೀಡಿ ಭಾರತದಲ್ಲಿ ವಾಸ್ತವ್ಯ ಹೂಡಿರುವುದು ನಾಚಿಕೆಗೇಡಿನ ಸಂಗತಿ!