ಇಸ್ರೇಲ್ ನಿಂದ ಭಾರತದಲ್ಲಿನ ಇಸ್ರೇಲ್ ಗಳಿಗಾಗಿರುವ ಮಾರ್ಗದರ್ಶಕ ಸೂಚನೆಗಳು ಜಾರಿ !

  • ದೆಹಲಿಯಲ್ಲಿನ ಇಸ್ರೇಲ್ ರಾಯಭಾರಿ ಕಚೇರಿ ಹೊರಗೆ ನಡೆದ ಸ್ಫೋಟದ ಪ್ರಕರಣ

  • ರಾಯಭಾರಿ ಕಚೇರಿಯ ಹತ್ತಿರ, ಇಸ್ರೇಲ್ ಧ್ವಜಕ್ಕೆ ಸುತ್ತಿದ್ದ ಪತ್ರದಲ್ಲಿ, ಇಸ್ರೆಲ್ ನಿಂದ ಗಾಜಾ ಮೇಲೆ ನಡೆದ ದಾಳಿ ಮತ್ತು ಸೇಡು’ ಎಂದು ಬರಹ !

ನವ ದೆಹಲಿ – ದೆಹಲಿಯಲ್ಲಿನ ಚಾಣಕ್ಯಪುರಿಯಲ್ಲಿ ಇರುವ ಇಸ್ರೇಲ್ ರಾಯಭಾರಿ ಕಚೇರಿಯ ಹತ್ತಿರ ಡಿಸೆಂಬರ್ ೨೬ ರಂದು ಸಂಜೆ ಸ್ಪೋಟವಾಗಿದೆ. ಕಡಿಮೆ ತೀವ್ರತೆಯ ಸ್ಪೋಟದ ಸಂದರ್ಭದಲ್ಲಿ ಪೊಲೀಸರಿಗೆ ಸಿಸಿಟಿವಿಯ ಚಿತ್ರೀಕರಣ ದೊರೆತಿದ್ದು ಅದರಲ್ಲಿ ೨ ಶಂಕಿತರು ಕಾಣುತ್ತಿದ್ದಾರೆ. ಈ ಘಟನೆಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ. ಇನ್ನೊಂದು ಕಡೆಗೆ ಇಸ್ರೇಲ್ ನ ರಾಷ್ಟ್ರೀಯ ಸುರಕ್ಷಾ ಪರಿಷತ್ತಿನಿಂದ ಭಾರತದಲ್ಲಿ ವಾಸಿಸುವ ಇಸ್ರೇಲಿ ನಾಗರಿಕರಗಾಗಿ ಪ್ರಯಾಣಕ್ಕಾಗಿ ಸೂಚನೆ ಜಾರಿ ಮಾಡಿದೆ. ಇದರಲ್ಲಿ ಅವರು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಲು ನಿಷೇಧಿಸಿದೆ.

೧. ಪ್ರಸಾರ ಮಾಧ್ಯಮದಿಂದ ನೀಡಿರುವ ವಾರ್ತೆಯ ಪ್ರಕಾರ ದೆಹಲಿ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಇಸ್ರೆಲ್‌ನ ಧ್ವಜಕ್ಕೆ ಸುತ್ತಿದ್ದ ಪತ್ರ ದೊರೆತಿದೆ. ಇದರಲ್ಲಿ ‘ಇಸ್ರೇಲ್ ನಿಂದ ಗಾಝಾದಲ್ಲಿನ ದಾಳಿ ಮತ್ತು ಸೇಡು’ ಎಂದು ಬರೆಯಲಾಗಿತ್ತು. ಈ ಪತ್ರದಲ್ಲಿ ಇಸ್ರೇಲ್ ನಿಂದ ಗಾಝಾದಲ್ಲಿ ನಡೆದಿರುವ ಕಾರ್ಯಾಚರಣೆಯನ್ನು ಟೀಕಿಸಲಾಗಿದೆ.

೨. ದೆಹಲಿ ಪೊಲೀಸರಿಗೆ ಈ ಪ್ರದೇಶದಲ್ಲಿ ಯಾವುದೇ ಸ್ಪೋಟಕಗಳು ದೊರೆತಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಡಿಸೆಂಬರ್ ೨೬ ರಂದು ನಡೆದಿರುವ ಸ್ಫೋಟದ ಮಾಹಿತಿ ದೂರವಾಣಿಯ ಮೂಲಕ ದೊರೆತಿತ್ತು. ಅದರ ನಂತರ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ತಲುಪಿದೆ.

೩. ಇಸ್ರೇಲ್ ರಾಯಭಾರಿ ಕಚೇರಿಯ ವಕ್ತಾರರಾದ ಗಾಯ್ ನೀರ ಇವರು, ಮಂಗಳವಾರ ಸಂಜೆ ೫.೨೦ ಸುಮಾರಿಗೆ ರಾಯಭಾರಿ ಕಚೇರಿಯ ಹತ್ತಿರ ಸ್ಪೋಟ ಸಂಭವಿಸಿದೆ. ನಮ್ಮ ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ, ಎಂದು ಹೇಳಿದರು.

೪. ೨೦೨೧ ರಲ್ಲಿ ಇದೆ ರಾಯಭಾರಿ ಕಚೇರಿಯ ಹೊರಗೆ ಕಡಿಮೆ ತೀವ್ರತೆಯ ಸ್ಪೋಟ ನಡೆದಿತ್ತು. ಇದರಲ್ಲಿ ೩ ವಾಹನಗಳಿಗೆ ಹಾನಿ ಆಗಿತ್ತು. ಆ ಸಮಯದಲ್ಲಿ ಇಸ್ರೇಲ್ ಇರಾನಿನ ಮೇಲೆ ಷಡ್ಯಂತ್ರದ ಆರೋಪ ಮಾಡಿತ್ತು.