ಭಾರತೀಯ ಹಿಂದೂಗಳೇ, ಇದನ್ನು ಎಂದೂ ಮರೆಯದಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತೀಯ ಹಿಂದೂಗಳೇ, ಇದನ್ನು ಎಂದೂ ಮರೆಯದಿರಿ !

‘ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಆಗಿದ್ದ ನೇಪಾಳವನ್ನು ಚೀನಾದಿಂದಾಗಿ ಸಾಮ್ಯವಾದಿ ಮಾಡಲಾಯಿತು. ಇದನ್ನು ದೇಶದ ಹಿಂದೂಗಳು ಎಂದೂ ಮರೆಯಬಾರದು.’

ಈಶ್ವರಪ್ರಾಪ್ತಿಗಾಗಿ ‘ಅನಗತ್ಯ’ ಎಂದು ಸಾಬೀತಾದ ಇಂದಿನ ಶಿಕ್ಷಣ ಪದ್ಧತಿ !

‘ನಾಮಜಪ, ಸತ್ಸೇವೆಯಂತಹ ಅಧ್ಯಾತ್ಮಿಕ ಕೃತಿಗಳನ್ನು ಮಾಡಿದಾಗ ಅಧ್ಯಾತ್ಮಿಕ ಸ್ತರದಲ್ಲಿ ಉಪಾಯ ಆಗುವುದು, ತನು-ಮನ-ಧನದ ತ್ಯಾಗವಾಗುವುದು ಇಂತಹ ಲಾಭಗಳಾಗುತ್ತವೆ. ಇದರಿಂದ ಮಾನವಜನ್ಮದ ಮೂಲ ಧ್ಯೇಯವಾದ ‘ಈಶ್ವರಪ್ರಾಪ್ತಿ ಮಾಡಿಕೊಳ್ಳಲು’ ಸಾಧ್ಯ ಆಗುತ್ತದೆ. ಇಂದಿನ ಶಿಕ್ಷಣದಲ್ಲಿ ಇಂತಹ ಯಾವುದೇ ಕೃತಿಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿಲ್ಲ. ಏನು ಕಲಿಸಲಾಗುತ್ತಿದೆಯೋ, ಅದರಿಂದ ಆಧ್ಯಾತ್ಮಿಕ ಉನ್ನತಿ ಆಗಲು ಸಾಧ್ಯವೇ ಇಲ್ಲ. ಶಾಲಾ ಶಿಕ್ಷಣದಲ್ಲಿ ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಅನಗತ್ಯ ಕೃತಿಗಳನ್ನು ಕಲಿಸಲಾಗುತ್ತಿದೆ.’

ಹಿಂದೂ ರಾಷ್ಟ್ರದಲ್ಲಿ ಭಾರತೀಯ ಭಾಷೆಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುವುದು !

‘ಹಿಂದೂಗಳೇ, ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಓದಿಸಬೇಡಿರಿ; ಏಕೆಂದರೆ ಹಿಂದೂ ರಾಷ್ಟ್ರದಲ್ಲಿ ಭಾರತೀಯ ಭಾಷೆಗಳು ಮಾತ್ರ ಶಾಲೆಗಳ ಮತ್ತು ಸರಕಾರಿ ಕೆಲಸಗಳ ಮಾಧ್ಯಮವಾಗಿರುವುದು’ ಚೀನಾದ ಬಗ್ಗೆ ಕಳಕಳಿ ಇರುವವರೇ ಇದನ್ನು ಗಮನದಲ್ಲಿಡಿ !

‘ಹಿಂದೂ-ಚೀನೀ ಭಾಯಿ ಭಾಯಿ’, ಎಂದು ಹೇಳುವವರು ಚೀನಾದ ಆಕ್ರಮಣದಲ್ಲಿ ಸಾವಿಗೀಡಾದರೆ ಯಾರಾದರೂ ಏಕೆ ದುಃಖಿಸಬೇಕು ?’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ