ಅಮೆರಿಕದ ಹಿಂದೂ ದೇವಾಲಯದ ಮೇಲಿನ ದಾಳಿಗೆ ಭಾರತೀಯ ಮೂಲದ ಸಂಸದರಿಂದ ಖಂಡನೆ !

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!

ಕ್ಯಾಲಿಫೋರ್ನಿಯಾ (ಅಮೇರಿಕಾ) – ಇಲ್ಲಿನ ಸ್ವಾಮಿನಾರಾಯಣ ದೇವಸ್ಥಾನವನ್ನು ಖಲಿಸ್ತಾನಿಗಳು ಧ್ವಂಸಗೊಳಿಸಿರುವುದನ್ನು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಸತ್ ಸದಸ್ಯರು ಖಂಡಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸಂಸದ ರೋ ಖನ್ನಾ ಹೇಳಿದ್ದಾರೆ. ಈ ಘಟನೆಯಿಂದ ಎಲ್ಲರೂ ಒಗ್ಗೂಡಿಸಿದ್ದಕ್ಕೆ ಖುಷಿಯಾಗಿದೆ ಎಂದು ಹೇಳಿದರು.

1. ದೇವಸ್ಥಾನಗಳನ್ನು ಧ್ವಂಸ ಮಾಡುವವರಿಗೆ ಒಗ್ಗಟ್ಟಾಗಿ ಉತ್ತರ ನೀಡಬೇಕು ಎಂದು ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದರು.

2. ಸಂಸದ ಶ್ರೀ. ಠಾಣೆದಾರ ಇವರು, ಈ ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದರು.

3. ಯಾವುದೇ ರೀತಿಯ ದ್ವೇಷವನ್ನು ಸಹಿಸುವುದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಹಿಂದೂ ದ್ವೇಷವನ್ನು ಬೇರು ಸಮೇತ ಕಿತ್ತೆಸೆಯಬೇಕು ಎಂದು ಅಮೆರಿಕ ಮೂಲದ ಸಂಸತ್ ಸದಸ್ಯೆ ಬಾರ್ಬರಾ ಲೀ ಹೇಳಿದ್ದಾರೆ.

4. ಈ ಘಟನೆಯಿಂದ ಪೊಲೀಸರಾಗಿ ನಮಗೆ ಬೇಸರವಾಗಿದೆ ಎಂದು ಅಮೇರಿಕಾದ ಪೊಲೀಸರು ಹೇಳಿದ್ದಾರೆ. ಈ ಪ್ರಕಾರವು ಸೂಕ್ತವಲ್ಲ. ಇದನ್ನು ಸಹಿಸುವುದಿಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಭಾರತದ ಹೊರಗಿನ ಪ್ರತ್ಯೇಕತಾವಾದಿಗಳು ಮತ್ತು ಕಟ್ಟರವಾದಿಗಳಿಗೆ ಆಶ್ರಯ ನೀಡಬಾರದು ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಈ ಘಟನೆಯ ಕುರಿತು, ಇದರಿಂದ ನಾವು ಆತಂಕಗೊಂಡಿದ್ದೇವೆ. ಭಾರತದ ಹೊರಗಿನ ಪ್ರತ್ಯೇಕತಾವಾದಿಗಳು ಮತ್ತು ಕಟ್ಟರವಾದಿಗಳಿಗೆ ಆಶ್ರಯ ನೀಡಬಾರದು. ಈ ಸಂಬಂಧ ಭಾರತದ ವಾಣಿಜ್ಯ ರಾಯಭಾರಿಯು ಅಮೆರಿಕ ಸರಕಾರ ಮತ್ತು ಪೊಲೀಸರಿಗೆ ದೂರು ಸಲ್ಲಿಸಿದೆ. ಘಟನೆಯು ತನಿಖೆಯಲ್ಲಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.