|
ಮುಂಬಯಿ, ಡಿಸೆಂಬರ 23 (ಸುದ್ದಿ.) – ಮಹಾರಾಷ್ಟ್ರದ ಆರಾಧ್ಯ ದೈವವಾದ ಪಂಢರಪುರದ ಶ್ರೀ ವಿಠ್ಠಲ್ ಮತ್ತು ರುಕ್ಮಿಣಿ ದೇವಸ್ಥಾನದಲ್ಲಿ ಪ್ರಾಚೀನ ಕಾಲದಿಂದಲೂ ರಾಜರು, ಮಹಾರಾಜರು, ಸಂಸ್ಥೆಗಳು, ಪೇಶ್ವೆಗಳು ಮುಂತಾದವರು ನೀಡುತ್ತಿದ್ದ ಬೆಲೆಬಾಳುವ ಆಭರಣಗಳ ಆಯವ್ಯಯದಲ್ಲಿ ದಾಖಲೆಗಳು ಇಲ್ಲದಿರುವ ಆಘಾತಕಾರಿ ಅಂಶವು 2021-22ನೇ ಸಾಲಿನ ದೇವಸ್ತಾನ ಆಡಳಿತ ಸಮಿತಿಯ ಆಡಿಟ್ ವರದಿ ಬಹಿರಂಗಪಡಿಸಿದೆ. ಶ್ರೀ ವಿಠ್ಠಲನ 203 ಮತ್ತು ಶ್ರೀ ರುಕ್ಮಿಣಿದೇವಿಯ 111 ಪುರಾತನ ಆಭರಣಗಳು ಆಯವ್ಯಯದಲ್ಲಿ ದಾಖಲಾಗಿಲ್ಲ. ಒಟ್ಟಿನಲ್ಲಿ ಈ ಇಡೀ ವಿಷಯ ಅನುಮಾನಾಸ್ಪದವಾಗಿದ್ದು, ಚಿನ್ನಾಭರಣ ಕಳ್ಳತನವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
1985 ರಲ್ಲಿ, ಪಂಢರಪುರದ ಶ್ರೀ ವಿಠ್ಠಲ್-ರುಕ್ಮಿಣಿ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಯಿತು. ಅಂದಿನಿಂದ ದೇವಾಲಯದ ಆಡಳಿತವನ್ನು ‘ಶ್ರೀ ವಿಠ್ಠಲ್-ರುಕ್ಮಿಣಿ ಸಮಿತಿ, ಪಂಢರಪುರ’ ಎಂಬ ಸರಕಾರದ ಅನುಮೋದಿತ ಸಮಿತಿಯು ನೋಡಿಕೊಳ್ಳುತ್ತಿದೆ. 2021-22 ರ ಆರ್ಥಿಕ ವರ್ಷಕ್ಕೆ ದೇವಸ್ಥಾನದ ಲೆಕ್ಕಪರಿಶೋಧನೆಯನ್ನು ಸರಕಾರದಿಂದ ನೇಮಿಸಲ್ಪಟ್ಟ ಲೆಕ್ಕಪರಿಶೋಧಕ ಮೆ.ಬಿ.ಎಸ್.ಜಿ.ಅಂಡ್ ಅಸೊಸಿಎಟ್ಸ್ (ಪುಣೆ) ಮಾಡಿದ್ದಾರೆ. ದೇವಾಲಯಗಳ ಯೋಜನೆಗಾಗಿ ಸರಕಾರ ಕೈಗೆತ್ತಿಕೊಂಡಿರುವ ಈ ದೇವಾಲಯದ ಆಡಳಿತದಲ್ಲಿ ಅವ್ಯವಸ್ಥೆ ಇರುವುದು ವರದಿಯಿಂದ ಬಹಿರಂಗವಾಗಿದೆ.
ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಆಯವ್ಯಯ ಮತ್ತು ನೋಂದಣಿಯಲ್ಲಿ ದಾಖಲಾಗದ ವಸ್ತುಗಳು !
ಶ್ರೀ ವಿಠ್ಠಲ್-ರುಕ್ಮಿಣಿಗೆ ಅರ್ಪಿಸಿದ ಆಭರಣಗಳು ಮತ್ತು ದೇವಾಲಯಕ್ಕೆ ದೇಣಿಗೆಯಾಗಿ ನೀಡಲಾದ ಆಭರಣಗಳ ‘ಮುದ್ರೆ’ ಮಾಡದೇ ಇರುವ ಆಘಾತಕಾರಿ ಅಂಶ ಆಡಿಟ್ ವರದಿ ಬಹಿರಂಗಪಡಿಸಿದೆ. ಅರ್ಪಿಸಿದ ಆಭರಣಗಳನ್ನು ಆಯಾ ದಿನ ಚೀಲದಲ್ಲಿ ಇರಿಸಲಾಗುತ್ತದೆ. ಇದರಿಂದ ಚಿನ್ನಾಭರಣ ದೋಚಿರುವ ಸಾಧ್ಯತೆ ಇದ್ದು, ಈ ಹಿಂದೆಯೂ ನಡೆದಿರಬಹುದು.
ಲಕ್ಷ ರೂಪಾಯಿ ಬಾಡಿಗೆ ಕೊಟ್ಟರೂ ಸುಲಭ ಶೌಚಾಲಯ ನಿರ್ಮಾಣವಾಗಿಲ್ಲ !
ಶ್ರೀ ವಿಠ್ಠಲ್-ರುಕ್ಮಿಣಿ ಮಂದಿರ ಸಮಿತಿ ಮತ್ತು ರೈಲ್ವೆ ಖಾತೆಗಳ ನಡುವೆ 35 ವರ್ಷಗಳವರೆಗೆ ಪ್ರವೇಶಿಸಬಹುದಾದ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಕ್ಕಾಗಿ 2017ರ ಮಾರ್ಚ್ 21ರಂದು ದೇವಸ್ಥಾನ ಸಮಿತಿಯು ರೈಲ್ವೆ ಇಲಾಖೆಗೆ ಬಾಡಿಗೆ ರೂಪದಲ್ಲಿ 1 ಕೋಟಿ 54 ಲಕ್ಷ 46 ಸಾವಿರದ 41 ರೂಪಾಯಿ ನೀಡಿತ್ತು. ಈ ಬಾಡಿಗೆಗಾಗಿ ದೇವಸ್ಥಾನದಿಂದ ಪ್ರತಿ ವರ್ಷ 4 ಲಕ್ಷದ 41 ಸಾವಿರದ 315 ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ; ಆದರೆ, 5 ವರ್ಷ ಕಳೆದರೂ ಈ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
ಉಂಡೆಗಳನ್ನು ಒಣಗಿಸಲು ಬಳಸುವ ಟಾರ್ಪಾಲಿನ್ ತುಂಬಾ ದುರಾವಸ್ಥೆ !
ಉಂಡೆಗಳನ್ನು ತಯಾರಿಸುವ ಸ್ಥಳದಲ್ಲಿ ಒಣಗಿಸಲು ಬಳಸುವ ಟಾರ್ಪಾಲಿನ್‌ಗಳು ತುಂಬಾ ಕಳಪೆ, ಕೊಳಕು ಮತ್ತು ಕಪ್ಪಾಗಿದೆ ಎಂದು ಲೆಕ್ಕ ಪರಿಶೋಧಕರು ಗಮನಿಸಿದ್ದಾರೆ. ವರದಿಯೊಂದಿಗೆ ಭಾವಚಿತ್ರಗಳನ್ನೂ ಸರಕಾರಕ್ಕೆ ಸಲ್ಲಿಸಿದ್ದಾರೆ.
ಗೋಶಾಲೆಯಲ್ಲಿ ಗೋವುಗಳ ಕಡೆಗಣನೆ !
ದೇವಸ್ಥಾನದ ಗೋಶಾಲೆಯಲ್ಲಿ ಗೋವುಗಳ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟಿರಲಿಲ್ಲ. ಗೋಶಾಲೆಯಲ್ಲಿ ಕಸ, ಗುಜರಿ, ಖಾಲಿ ಎಣ್ಣೆ ಡಬ್ಬಿಗಳನ್ನು ಇಡಲಾಗಿದೆ. ಜನವರಿ 12, 2023 ರಂದು, ಲೆಕ್ಕ ಪರಿಶೋಧಕರು ಗೋಶಾಲೆಗೆ ಭೇಟಿ ನೀಡಿದಾಗ, 2 ಹಸುಗಳು ಮತ್ತು 3 ಕರುಗಳು ‘ಲಂಪಿ’ ರೋಗದಿಂದ ಬಳಲುತ್ತಿರುವುದು ಕಂಡುಬಂದಿದೆ; ಆದರೆ ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸಿಲ್ಲ. ಲಂಪಿಯಾಗಿರುವ ಪ್ರಾಣಿಗಳನ್ನು ಮರಗಳ ಕೆಳಗೆ ಕಟ್ಟಲಾಗಿತ್ತು.
ಲೆಕ್ಕ ಪರಿಶೋಧಕರ ಆಕ್ಷೇಪಕ್ಕೆ ದೇವಸ್ಥಾನ ಸಮಿತಿಯಿಂದ ಉಡಾಫೆ ಉತ್ತರ !
ಆಡಿಟ್ ವರದಿಯಲ್ಲಿ ದಾಖಲಾದ ಆಕ್ಷೇಪಣೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಶ್ರೀ ವಿಠ್ಠಲ್-ರುಕ್ಮಿಣಿ ಮಂದಿರ ದೇವಸ್ಥಾನ ಸಮಿತಿಯಿಂದ ಅನುಸರಣೆ ವರದಿಯನ್ನು ಸಲ್ಲಿಸಲಾಗಿದೆ; ಆದರೆ, ಅದರಲ್ಲಿ ನಿಖರವಾದ ಮತ್ತು ವಸ್ತುನಿಷ್ಠ ಕ್ರಮಗಳ ಬದಲಿಗೆ, ಹೆಚ್ಚಿನ ಆಕ್ಷೇಪಣೆಗಳಿಗೆ ‘ಅಗತ್ಯಕ್ಕೆ ಅನುಗುಣವಾಗಿ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಉಡಾಫೆಯ ಉತ್ತರ ನೀಡಲಾಗಿದೆ. (ಇದರಿಂದ ದೇವಸ್ಥಾನ ಸಮಿತಿಯು ಈ ಬಗ್ಗೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಇದು ತೋರಿಸುತ್ತದೆ ? – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂಗಳೇ, ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ದುಸ್ಥಿತಿಯನ್ನು ನೋಡಿದರೇ ಆದಷ್ಟು ಬೇಗ ದೇವಸ್ಥಾನವನ್ನು ಸರಕಾರದ ಕೈಯಿಂದ ಮುಕ್ತಗೊಳಿಸಲು ಮತ್ತು ದೇವಸ್ಥಾನವನ್ನು ಸರಿಯಾಗಿ ನಿರ್ವಹಿಸಲು ಪ್ರಯತ್ನಿಸಿ ! |