ರಾಜ್ಯ ಮಟ್ಟದ ದೇವಾಲಯ ಪರಿಷತ್ತು
ಬೆಂಗಳೂರು – ರಾಜ್ಯದಲ್ಲಿ ಅಂದಾಜು 35 ಸಾವಿರ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಗಿದೆ. ದೇವಸ್ಥಾನಗಳನ್ನು ಲೂಟಿ ಮಾಡುವುದು ಸರಕಾರದ ಮುಖ್ಯ ಉದ್ದೇಶ. ಸರಕಾರಿಕರಣಗೊಂಡಿರುವ ಎಲ್ಲ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ಆಗುತ್ತವೆ ಎಂದು ಇದರ ಅರ್ಥ ಎಂದು ವಕೀಲ ಕಿರಣ್ ಬೆಟ್ಟದಪುರ ಇಲ್ಲಿ ನಡೆದ ದೇವಸ್ಥಾನದ ಸಮಾವೇಶದಲ್ಲಿ ಸರಕಾರವನ್ನು ಟೀಕಿಸಿದರು. ಕರ್ನಾಟಕ ದೇವಸ್ತಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಮಿತಿ ಸಹಯೋಗದಲ್ಲಿ ಡಿಸೆಂಬರ್ 16 ಮತ್ತು 17ರಂದು ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್‌ನಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿತ್ತು. ಎರಡನೇ ದಿನದ ಅಧಿವೇಶನದಲ್ಲಿ ವಕೀಲ ಬೆಟ್ಟದಪುರ ಮಾತನಾಡುತ್ತಿದ್ದರು. ‘ದೇವಸ್ಥಾನಗಳಲ್ಲಿ ಅವ್ಯವಹಾರ, ಜಗಳ ನಡೆದರೆ ಅಂತಹ ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಬೇಕು; ಆದರೆ 2 ವರ್ಷದೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಮತ್ತೆ ಭಕ್ತರಿಗೆ ಹಸ್ತಾಂತರಿಸಬೇಕು’, ಎಂಬ ಕಾನೂನು ಇದೆ,’ ಎಂದು ಈ ವೇಳೆ ಹೇಳಿದರು.
1. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಈ ಸಮಯದಲ್ಲಿ ಹಲಾಲ್ ಪ್ರಮಾಣ ಪತ್ರದ ಕುರಿತು ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು. ಹಾಗೂ ಸಮಿತಿಯ ಶ್ರೀ. ಗುರುಪ್ರಸಾದ ಗೌಡಾ ಇವರು ಹಿಂದೂ ಜನಜಾಗೃತಿ ಸಮಿತಿ ಮತ್ತು ಅನೇಕ ಧಾರ್ಮಿಕ ಸಂಘಟನೆಗಳು ಒಟ್ಟಾಗಿ ಸರಕಾರ ನಡೆಸುತ್ತಿರುವ ದೇವಾಲಯಗಳಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೋರಾಡಿದವು ಎಂದು ಮಾಹಿತಿ ನೀಡಿದರು.
2. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ‘ನಗರ ನಕ್ಸಲಿಸಂ ಹಿಂದೂ ಧರ್ಮವನ್ನು ಹೇಗೆ ನಾಶಮಾಡಲು ಪ್ರಯತ್ನಿಸುತ್ತಿದೆ’ ಎಂದು ಮಾಹಿತಿ ನೀಡಿದರು. ಸನಾತನ ಸಂಸ್ಥೆಯ ಪೂ. ರಮಾನಂದ ಗೌಡ ಇವರು ಸನಾತನ ಸಂಸ್ಥೆಯ ಈವರೆಗಿನ ಕಾರ್ಯಗಳ ಕುರಿತು ಮಾಹಿತಿ ನೀಡಿ ದೇವಾಸ್ಥಾನವನ್ನು ಧರ್ಮಶಿಕ್ಷಣ ಕೇಂದ್ರವನ್ನಾಗಿಸಲು ಮಾರ್ಗದರ್ಶನ ಮಾಡಿದರು.