ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಶಸ್ತ್ರಾಸ್ತ್ರಗಳು ಸಿಗುತ್ತಿರುವುದರಿಂದ ಪಾಕಿಸ್ತಾನ ಕೆಂಡಾಮಂಡಲ
ಇಸ್ಲಾಮಾಬಾದ (ಪಾಕಿಸ್ತಾನ) – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತದ ಹೆಸರನ್ನು ತೆಗೆದುಕೊಳ್ಳದೇ ಭಾರತ ವಿರೋಧಿ ಆಕ್ರೋಶವನ್ನು ಹೊರಹಾಕಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ರಾಯಭಾರಿ ಮುಹಮ್ಮದ್ ಉಸ್ಮಾನ್ ಇಕ್ಬಾಲ್ ಜಾದುನ್ ಇವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ದಕ್ಷಿಣ ಏಷ್ಯಾದ ಒಂದು ದೇಶವು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಹಳ ಸುಲಭವಾಗಿ ಪಡೆಯುತ್ತಿದೆ ಎಂದು ಹೇಳಿದ್ದಾರೆ. ಇದು ಕಳವಳಕಾರಿ ವಿಷಯವಾಗಿದೆ. ಇದರಿಂದ ಅಸ್ಥಿರತೆ ಹೆಚ್ಚುತ್ತಿದೆ ಎಂದು ಹೇಳಿದರು.
ಜಾದುನ್ ತಮ್ಮ ಮಾತನ್ನು ಮುಂದುವರೆಸುತ್ತಾ, ದಕ್ಷಿಣ ಏಷ್ಯಾದಲ್ಲಿ ಅಸಮ ಬೆಳವಣಿಗೆಯ ದರವು ಸ್ಪಷ್ಟವಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಒಂದು ದೇಶವು ಮಿಲಿಟರಿಗೆ ಹೆಚ್ಚು ಖರ್ಚು ಮಾಡುವುದನ್ನು ನೋಡಬಹುದು. ಇದು ವರ್ಷಗಳಿಂದ ನಡೆಯುತ್ತಿರುವ ವಿವಾದವನ್ನು ಪರಿಹರಿಸುವಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಪರಮಾಣು ಸಶಸ್ತ್ರ ದೇಶಗಳಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು. ಜದುನ್ ವಿಶ್ವಸಂಸ್ಥೆಯಲ್ಲಿ ‘ಶಾಂತಿಗಾಗಿ ಶಸ್ತ್ರಾಸ್ತ್ರಗಳ ದುರ್ಬಳಕೆ ಮತ್ತು ಅಕ್ರಮ ಸಾಗಣೆಯಿಂದಾಗಿ ಆದಾಯದ ಬಿಕ್ಕಟ್ಟು ಮತ್ತು ಪರಿಹಾರಗಳು’ ವಿಷಯದ ಕುರಿತು ಮಾತನಾಡುತ್ತಿದ್ದರು.
ಸಂಪಾದಕೀಯ ನಿಲುವುಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರೊಂದಿಗೆ ಹೋರಾಡಲು ಭಾರತವು ಆಕ್ರಮಣಕಾರಿ ರಕ್ಷಣಾ ಕಾರ್ಯತಂತ್ರವನ್ನು ಯೋಜಿಸಿದೆ. ಈಗ ಅದಕ್ಕೇ ಪಾಕಿಸ್ತಾನದ ಪಿತ್ತ ನೆತ್ತಿಗೇರಿದರೆ ಅದರಲ್ಲಿ ಅಚ್ಚರಿ ಏನಿದೆ ! |