ದೇವಸ್ಥಾನ ಮತ್ತು ಅರ್ಚಕರ ಸಮಸ್ಯೆ ಪರಿಹರಿಸಲು ಸರಕಾರ ಸಕಾರಾತ್ಮಕ!
ನಾಗ್ಪುರ, ಡಿ.16 (ಸುದ್ದಿ.) – ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ದೇವಸ್ಥಾನ ಮಹಾಸಂಘವು ಎತ್ತಿರುವ ಎಲ್ಲ ಬೇಡಿಕೆಗಳ ಬಗ್ಗೆ ಸರಕಾರ ಸಕಾರಾತ್ಮಕವಾಗಿದ್ದು, ದೇವಾಲಯಗಳು ಮತ್ತು ಅರ್ಚಕರ ಸಮಸ್ಯೆಗಳನ್ನು ಪರಿಹರಿಸಲು ಸರಕಾರದಿಂದ ಸಭೆಗಳನ್ನು ಆಯೋಜಿಸಲಾಗುವುದು. ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ ಮತ್ತು ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವರ ನಡುವಿನ ಸಮನ್ವಯವನ್ನು ಶ್ರೀ. ಗಿರೀಶ ಮಹಾಜನ್ ಮತ್ತು ಶಿವಸೇನೆ ಶಾಸಕರಾದ ಶ್ರೀ. ಭರತಶೆಟ್ ಗೋಗಾವಲೆ ನೋಡಲಿದ್ದಾರೆ ಎಂದು ಮುಖ್ಯಮಂತ್ರಿ ಶ್ರೀ. ಏಕನಾಥ ಶಿಂಧೆ ಇವರು ಸ್ಪಷ್ಟಪಡಿಸಿದರು. ಈ ವೇಳೆ ಪರಿಹಾರ ಮತ್ತು ಪುನರ್ವಸತಿ ಸಚಿವ ಶ್ರೀ. ಸಂಜಯ ರಾಥೋಡ್ ಮತ್ತು ಶಿವಸೇನೆ ಶಾಸಕರಾದ ಶ್ರೀ. ಪ್ರತಾಪ ಸರನಾಯಕ್ ಉಪಸ್ಥಿತರಿದ್ದರು.
ದೇವಸ್ಥಾನ ಮಹಾಸಂಘದ ವತಿಯಿಂದ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ
ಈ ಸಮಯದಲ್ಲಿ ‘ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ದ ರಾಜ್ಯ ಸಮನ್ವಯಕರಾದ ಶ್ರೀ. ಸುನಿಲ್ ಘನವಟ್ ಮತ್ತು ‘ದೇವಸ್ಥಾನ ಸಮನ್ವಯ ಸಮಿತಿ ವಿದರ್ಭ’ದ ಶ್ರೀ. ಅನುಪ ಜಯಸ್ವಾಲ ಇವರು ಮಾತನಾಡಿ, 2023 ರ ಡಿಸೆಂಬರ್ 2 ಮತ್ತು 3 ರಂದು, ಶ್ರೀಕ್ಷೇತ್ರ ಓಜರ್ (ಪುಣೆ) ನಲ್ಲಿರುವ ಶ್ರೀ ವಿಘ್ನಹರ ಗಣಪತಿ ದೇವಸ್ಥಾನದಲ್ಲಿ ‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್’ ನಲ್ಲಿ ರಾಜ್ಯದ 650 ಕ್ಕೂ ಹೆಚ್ಚು ದೇವಾಲಯದ ಟ್ರಸ್ಟಿಗಳು ಮತ್ತು ಅರ್ಚಕರು ಭಾಗವಹಿಸಿದ್ದರು.
ಮಹಾರಾಷ್ಟ್ರದಲ್ಲಿನ ತೀರ್ಥಕ್ಷೇತ್ರಗಳ ಆಧುನಿಕ ಸೌಲಭ್ಯಗಳಿಗಾಗಿ 2 ಸಾವಿರ ಕೋಟಿ ರೂಪಾಯಿ – ಮುಖ್ಯಮಂತ್ರಿ
ಮಹಾರಾಷ್ಟ್ರದ ವಿವಿಧ ತೀರ್ಥಕ್ಷೇತ್ರಗಳಲ್ಲಿರುವ ದೇವಸ್ಥಾನಗಳಲ್ಲಿನ ಆಧುವಿಕ ಸೌಲಭ್ಯ ಒದಗಿಸುವುದು, ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ದೇವಸ್ಥಾನಗಳ ಅಲಂಕಾರಕ್ಕಾಗಿ ಸರಕಾರದ 2 ಸಾವಿರ ಕೋಟಿ ರುಪಾಯಿಗಳ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಮಂತ್ರಿಮಂಡಳದ ಸಭೆಯಲ್ಲಿ ಅಂಗೀಕರಿಸಲಾಯಿತು. ಮುಖ್ಯಮಂತ್ರಿ ಎಕನಾಥ ಶಿಂದೆಯವರೊಂದಿಗೆ ನಡೆದ ಸಭೆಯಲ್ಲಿ ‘ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ದ ಪದಾಧಿಕಾರಿಗಳು ದೇವಸ್ಥಾನದ ದುಸ್ಥಿತಿಯನ್ನು ತಡೆಯುವುದು, ದೇವಸ್ಥಾನಗಳ ಪ್ರದೇಶಗಳಲ್ಲಿ ಮಾಂಸ-ಮದ್ಯದಂಗಡಿ ಮಾರಾಟವನ್ನು ನಿಷೇಧಿಸುವುದು, ದೇವಸ್ಥಾನಗಳ ಎದುರು ಅತಿಕ್ರಮಣ ತೆರುವುದಗೊಳಿಸುವುದು, ದೇವಸ್ಥಾನಗಳ ಜೀರ್ಣೋದ್ಧಾರ, ಅಲಂಕಾರ ಹಾಗೂ ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರಗಳ ಮೇಲೆ ಕ್ರಮ ಕೈಗೊಳ್ಳುವುದು ಈ ರೀತಿಯ ಅನೇಕ ಬೇಡಿಕೆಗಳನ್ನು ಓದಿ ಅದನ್ನು ಪೂರ್ಣಗೊಳಿಸುವಂತೆ ವಿನಂತಿಸಲಾಯಿತು.
Maharashtra Govt is positive to solve the problems of #temples and priests!🚩
Minister Shri @girishdmahajan & MLA Bharatsheth Gogawle will co-ordinate to discuss with #Maharashtra_Mandir_Mahasangh ! – @CMOMaharashtra#FreeHinduTemples@Vishnu_Jain1@IPrabhakarSP@Rajput_Ramesh pic.twitter.com/P88tV8rWh1
— Sunil Ghanwat🛕🛕 (@SG_HJS) December 16, 2023