‘ಲಡಾಖ ನಮ್ಮ ಭಾಗವಾಗಿದ್ದು, ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದು ತಪ್ಪು!’ (ಅಂತೆ)- ಚೀನಾ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ

ಬೀಜಿಂಗ್ (ಚೀನಾ) – ಕೇಂದ್ರ ಸರ್ಕಾರವು 2019 ರಲ್ಲಿ ಕಾಶ್ಮೀರಕ್ಕಾಗಿ 370 ವಿಧಿಯನ್ನು ರದ್ದುಗೊಳಿಸಿದ ಬಳಿಕ, ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯ ಅದನ್ನು ವಜಾಗೊಳಿಸಿತು. ಇದಕ್ಕೆ ಪಾಕಿಸ್ತಾನ ಕಿರುಚಾಟದ (?) ಪ್ರತಿಕ್ರಿಯೆ ವ್ಯಕ್ತಪಡಿಸಿದ ಬಳಿಕ ಈಗ ಚೀನಾ ಕೂಡ ಪ್ರತಿಕ್ರಿಯಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ ಇವರು ಮಾತನಾಡಿ ಈ ನಿರ್ಣಯದಿಂದ ಚೀನಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತ-ಚೀನಾ ಗಡಿಯ ಪಶ್ಚಿಮ ಭಾಗ(ಲಡಾಖ) ಯಾವಾಗಲೂ ಚೀನಾದ ಭಾಗವಾಗಿಯೇ ಇದೆಯೆಂದು ಹೇಳಿದ್ದಾರೆ.

1. ಮಾವೋ ನಿಂಗ ಮಾತನ್ನು ಮುಂದುವರಿಸುತ್ತಾ, ನಾವು ಎಂದಿಗೂ ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿ ಸ್ಥಾಪಿಸಲಾದ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ ಅನ್ನು ಒಪ್ಪಿಕೊಂಡಿಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯವೂ ‘ಕಾಶ್ಮೀರದ ಪಶ್ಚಿಮ ಭಾಗ (ಲಡಾಖ್) ಚೀನಾಕ್ಕೆ ಸೇರಿದ್ದು’ ಎಂಬ ವಾಸ್ತವವನ್ನು ಸ್ವತಃ ಭಾರತದ ಸರ್ವೋಚ್ಚ ನ್ಯಾಯಾಲಯವೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

2. ಕಾಶ್ಮೀರ ಪ್ರಶ್ನೆಯ ಕುರಿತು 2 ದಿನಗಳ ಹಿಂದೆ ಮಾವೊ ನಿಂಗ ಇವರು ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ಸಂಘರ್ಷವಿದೆ.ಹಾಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಅಗತ್ಯವಾಗಿದೆ. ಒಟ್ಟಾರೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ದೇಶಗಳು ಚರ್ಚಿಸಿ ,ಈ ಪ್ರಶ್ನೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಹೇಳಿದ್ದರು

3. ಭಾರತವು ಆಗಸ್ಟ್ 5, 2019 ರಂದು 370 ವಿಧಿಯನ್ನು ತೆಗೆದುಹಾಕಿತ್ತು ಮತ್ತು ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಹೀಗೆ 2 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತ್ತು, ಆಗಲೂ ಚೀನಾ ಇದನ್ನು ವಿರೋಧಿಸಿತ್ತು.

ಸಂಪಾದಕರ ನಿಲುವು

* ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳುತ್ತಿದ್ದ ಚೀನಾ ಇದೀಗ, ಲಡಾಕ ಮೇಲೆಯೂ ತನ್ನ ಹಕ್ಕಿದೆಯೆಂದು ಹೇಳುತ್ತಿರುವುದು ಚೀನಾದ ವಿಸ್ತಾರವಾದಿ ನೀತಿಗೆ ಭಾರತವು ಕಳೆದ 75 ವರ್ಷಗಳಲ್ಲಿ `ತಕ್ಕ ಪ್ರತ್ಯುತ್ತರ’ ನೀಡದೇ ಇರುವುದರ ಪರಿಣಾಮವೇ ಇದಾಗಿದೆಯೆಂದು ಹೇಳಬೇಕಾಗುವುದು!

* ಭಾರತವು ಈಗ ಟಿಬೆಟ್‌ನ ಸ್ವಾತಂತ್ರ್ಯಕ್ಕಾಗಿ ಮಾತನಾಡಲು ಪ್ರಾರಂಭಿಸಬೇಕು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನು ಮಂಡಿಸಬೇಕು.