ಸರ್ವೋಚ್ಚ ನ್ಯಾಯಾಲಯದ ನಿರ್ಣಯದಿಂದ ಕಿಡಿಕಾರಿದ ಪಾಕಿಸ್ತಾನದ !
ಇಸ್ಲಾಮಾಬಾದ್ (ಪಾಕಿಸ್ತಾನ) – ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಣಯ ಯೋಗ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ಪಾಕಿಸ್ತಾನ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ಪಾಕಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಮೇಲಿನ ಭಾರತೀಯ ಸಂವಿಧಾನದ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವುದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದಿಂದ ಬೇರ್ಪಡಿಸುವ ಭಾರತದ ಪ್ರತಿಯೊಂದು ಯೋಜನೆಯೂ ವಿಫಲಗೊಳ್ಳುತ್ತದೆ ಎಂದು ಹೇಳಿದರು.
1. ಜಿಲಾನಿ ಮಾತನ್ನು ಮುಂದುವರಿಸಿ, ಜಮ್ಮು ಮತ್ತು ಕಾಶ್ಮೀರದ ವಿಷಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ವಿವಾದವಾಗಿದೆ. ಈ ವಿಷಯವು 7 ದಶಕಗಳಿಗಿಂತಲೂ ಹೆಚ್ಚು ಕಾಲ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿದೆ. ಕಾಶ್ಮೀರಿ ಜನರು ಮತ್ತು ಪಾಕಿಸ್ತಾನದ ಇಚ್ಛೆಗೆ ವಿರುದ್ಧವಾಗಿ ಭಾರತಕ್ಕೆ.ಈ ವಿವಾದಿತ ಪ್ರದೇಶವನ್ನು ಏಕಪಕ್ಷೀಯವಾಗಿ ನಿರ್ಧರಿಸುವ ಹಕ್ಕು ಇಲ್ಲ. ಪಾಕಿಸ್ತಾನದಲ್ಲಿ, ಭಾರತೀಯ ಸಂವಿಧಾನದ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರಕ್ರಿಯೆಗೆ ಯಾವುದೇ ಕಾನೂನಿನ ಮನ್ನಣೆಯಿಲ್ಲ. ಭಾರತವು ತನ್ನ ಕಾನೂನು ಮತ್ತು ನ್ಯಾಯಾಂಗ ನಿರ್ಧಾರಗಳ ಆಧಾರದಲ್ಲಿ ಅಂತರರಾಷ್ಟ್ರೀಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
2. ಪಾಕಿಸ್ತಾನಿ ಪತ್ರಕರ್ತರು ಜಿಲಾನಿಯವರಿಗೆ ‘ಗಡಿಯಲ್ಲಿ ಇನ್ನು ಮುಂದೆಯೂ ಶಾಂತಿ ಸ್ಥಾಪಿತವಾಗಿರುವುದೇ?’ ಎಂದು ಪ್ರಶ್ನಿಸಿದಾಗ, ಕಳೆದ 2-3 ವರ್ಷಗಳಿಂದ ಗಡಿಯಲ್ಲಿ ಶಾಂತಿ ಕಾಪಾಡುವಲ್ಲಿ ಯಶಸ್ಸು ಸಿಕ್ಕಿತ್ತು. ಇನ್ನು ಮುಂದೆಯೋ ಇದೇ ವಾತಾವರಣ ಮುಂದುವರಿಯಬೇಕೆಂದು ನಾವು ಬಯಸುತ್ತೇವೆ. ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಭವಿಷ್ಯದ ನೀತಿಯನ್ನು ನಿರ್ಧರಿಸಲು ಸಂಬಂಧಪಟ್ಟವರ ಸಭೆಯನ್ನು ಕರೆದು ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲಾಗುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತಾವನೆಯ ಕಾರ್ಯಕಲಾಪದಲ್ಲಿ ಈ ವಿಷಯವನ್ನು ತೆಗೆದುಳ್ಳಬೇಕು. ಇದರಲ್ಲಿ ಕಾಶ್ಮೀರಿ ಜನರಿಗೆ ಅವರ ಇಚ್ಛೆಯನ್ನು ವ್ಯಕ್ತಪಡಿಸಲು ಜನಾಭಿಪ್ರಾಯವನ್ನು ಪರಿಗಣಿಸುವ ವಿಷಯದಲ್ಲಿ ನಿಬಂಧನೆಯನ್ನು ನಮೂದಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನ ಒಪ್ಪುತ್ತದೆಯೋ ಇಲ್ಲವೋ ಎಂಬುದು ಮಹತ್ವದ್ದಿಲ್ಲ; ಏಕೆಂದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಎಷ್ಟೇ ಕೂಗಾಡಿದರೂ ಇದರಲ್ಲಿ ಬದಲಾವಣೆಯಾಗುವುದಿಲ್ಲ, ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು! |