‘ಇಡಿ’ಗೆ ಛೀಮಾರಿ ಹಾಕಿದ ಮುಂಬಯಿ ಹೈಕೋರ್ಟ್ !

ಪ್ರಕರಣ ಬಾಕಿ ಇರುವಾಗಲೇ ಆರೋಪಿಯನ್ನು ವರ್ಷಗಟ್ಟಲೆ ಕಸ್ಟಡಿಯಲ್ಲಿಟ್ಟಿರುವುದು ಜಾರಿ ನಿರ್ದೇಶನಾಲಯ ಮಾಡಿದ ಅನ್ಯಾಯ !

ಮುಂಬಯಿ – ಮೊಕದ್ದಮೆಗಳು ಬಾಕಿ ಇರುವಾಗ ಜಾರಿ ನಿರ್ದೇಶನಾಲಯ ಆರೋಪಿಗಳನ್ನು ಜೈಲಿನಲ್ಲಿಡುವುದು ಇದು ಅನ್ಯಾಯವೇ ಆಗಿದೆ ಎಂದು ಕಳೆದ 5 ವರ್ಷಗಳಿಂದ ಬಂಧನದಲ್ಲಿರುವ ಆರೋಪಿಗಳಿಗೆ ಮುಂಬಯಿ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಾ ಇಡಿ ಗೆ ಛೀಮಾರಿ ಹಾಕಿದೆ. ಈ ಆರೋಪಿ 2019ರಿಂದ ಗೃಹಬಂಧನದಲ್ಲಿದ್ದಾನೆ. ಶಿಕ್ಷೆಯ ನಂತರ ಈ ಅವಧಿಯನ್ನು ಎಣಿಕೆ ಮಾಡಬಾರದು ಎಂಬ ಇಡಿ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಯ ಹೆಸರು ಮೊಹಮ್ಮದ್ ಫಾರೂಕ್ ಮೊಹಮ್ಮದ್ ಹನೀಫ್ ಶೇಖ್ ಅಲಿಯಾಸ್ ಫಾರೂಕ್ ಶೇಖ್ ಎಂದಾಗಿದೆ. ನ್ಯಾಯಮೂರ್ತಿ ಅಜಯ ಗಡ್ಕರಿ ಮತ್ತು ನ್ಯಾಯಮೂರ್ತಿ ಶಾಮ್ ಚಂದಕ್ ಅವರ ವಿಭಾಗೀಯ ಪೀಠವು ಶೇಖ್‌ಗೆ ಜಾಮೀನು ನೀಡಿದ್ದು, 1 ಲಕ್ಷ ರೂಪಾಯಿ ತುಂಬಲು ಹೇಳಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಶೇಖ್ ಮುಂಬಯಿನಿಂದ ಹೊರಗೆ ಹೋಗಬಾರದು ಮತ್ತು ಅವರ ಮನೆ ವಿಳಾಸ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಇಡಿ ತನಿಖಾಧಿಕಾರಿಗೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

2018ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶೇಖ್ ನನ್ನು ಬಂಧಿಸಲಾಗಿತ್ತು. ಈತ 5 ವರ್ಷ 8 ತಿಂಗಳಿನಿಂದ ಬಂಧನದಲ್ಲಿದ್ದಾನೆ. ಆತನನ್ನು ಬಂಧಿಸಿದ ಅಪರಾಧಕ್ಕೆ 7 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಅವರ ವಿರುದ್ಧ ಯಾವುದೇ ಆರೋಪ ದಾಖಲಾಗಿಲ್ಲ. ಆದ್ದರಿಂದ ಅವನಿಗೆ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ರಾಜೀವ್ ಚವಾಣ್ ಆಗ್ರಹಿಸಿದ್ದರು.

ಈ ಬಗ್ಗೆ ನ್ಯಾಯಾಲಯವು ‘ಸಂವಿಧಾನವು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಿದೆ ಎಂದು ನ್ಯಾಯಾಲಯ ಹೇಳಿದೆ. ವರ್ಷಗಳ ಕಾಲ ಬಂಧನವು ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಿದೆ. ಶೇಖ್ ಮಾಡಿದ ಅಪರಾಧಕ್ಕೆ 7 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಅವರು ಅರ್ಧಕ್ಕಿಂತ ಹೆಚ್ಚು ಸಮಯವನ್ನು ಗೃಹಬಂಧನದಲ್ಲಿ ಕಳೆದಿದ್ದಾರೆ. ಈ ಅವಧಿಯು ಅವನ ಶಿಕ್ಷೆಯನ್ನು ಪೂರೈಸುವಂತಿದೆ’ ಎಂದು ಗಮನಿಸಿದರು.