‘ತಾಳ್ಮೆಯನ್ನಿಟ್ಟುಕೊಂಡು ಯಶಸ್ಸಿಗಾಗಿ ದಾರಿ ಕಾಯುವುದು’ ಇದೊಂದು ತಪಶ್ಚರ್ಯವೇ ಆಗಿದೆ !

(ಪೂ.) ಸಂದೀಪ ಆಳಶಿ

‘ಕೆಲವು ಸಾಧಕರು ಕೆಲವು ವರ್ಷ ಗಳಿಂದ ಸಾಧನೆ ಮಾಡುತ್ತಿದ್ದರೂ ಅವರಿಗೆ ಅಪೇಕ್ಷಿತ ಆಧ್ಯಾತ್ಮಿಕ ಪ್ರಗತಿಯ ಸ್ವರೂಪದಲ್ಲಿ ಯಶಸ್ಸು ಪ್ರಾಪ್ತವಾಗಿರುವುದು
ಕಂಡು ಬರುವುದಿಲ್ಲ. ಆದ್ದರಿಂದ ಕೆಲವೊಮ್ಮೆ ಅವರು ನಿರಾಶರಾಗುತ್ತಾರೆ ಅಥವಾ ‘ಈಗ ನನ್ನ ಸಾಧನೆಯಿಂದ ನನ್ನ ಪ್ರಗತಿ ಆಗುತ್ತದೆ’ ಎಂಬ ಅವರ ಆತ್ಮವಿಶ್ವಾಸವೇ ಕಡಿಮೆ ಆಗತೊಡಗುತ್ತದೆ.

ಯಾವುದೇ ದೊಡ್ಡ ಧ್ಯೇಯವನ್ನು ಸಾಧಿಸಲು ತಾಳ್ಮೆ ಇಡಬೇಕಾಗುತ್ತದೆ; ಏಕೆಂದರೆ ‘ಅದನ್ನು ಇಟ್ಟುಕೊಳ್ಳುವುದು’ ಸಹ ಒಂದು ರೀತಿಯ ತಪಶ್ಚರ್ಯವೇ ಆಗಿದೆ. ತಾಳ್ಮೆಯಿಂದಿರುವ ಮಾಧ್ಯಮದಿಂದ ಮನಸ್ಸು ಸ್ಥಿರವಾಗಿದ್ದು ಅದು ಮನಸ್ಸಿನ ಯಾವುದೇ ಪ್ರತಿಕೂಲ ಸ್ಥಿತಿಯೊಂದಿಗೆ ಹೋರಾಡಲು ಸಿದ್ಧವಾಗಿರುತ್ತದೆ. ಅನೇಕ ಋಷಿಮುನಿಗಳು, ಸಂತರು ಮುಂತಾದವರು ಅನೇಕ ವರ್ಷಗಳ ವರೆಗೆ ಈಶ್ವರನ ಮೇಲೆ ಶ್ರದ್ಧೆಯನ್ನಿಟ್ಟು ಮತ್ತು ತಾಳ್ಮೆಯನ್ನಿಟ್ಟು ತಪಶ್ಚರ್ಯವನ್ನು ಮಾಡಿದರು. ಅದರ ಫಲವಾಗಿ ಅವರಿಗೆ ಕೊನೆಗೆ ಈಶ್ವರಪ್ರಾಪ್ತಿಯಾಯಿತು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಾಧಕರೆದುರು ೧೯೯೮ ರಲ್ಲಿ ‘೨೦೨೫ ರ ವರೆಗೆ ಈಶ್ವರೀ ರಾಜ್ಯವು ಸ್ಥಾಪನೆ ಆಗುವುದು’ ಎಂಬ ಧ್ಯೇಯವನ್ನು ಇಟ್ಟರು ಮತ್ತು ಅದಕ್ಕಾಗಿ ಸಾಧಕರನ್ನು ಕೃತಿಶೀಲರನ್ನಾಗಿ ಮಾಡಿದರು. ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಯ ಕಾರ್ಯಕ್ಕೆ ವಿರೋಧವೆಂದು ಇದುವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಮತ್ತು ಅವರು ಸ್ಥಾಪಿಸಿದ ಸನಾತನ ಸಂಸ್ಥೆಯ ಮೇಲೆ ಅನೇಕ ಸಂಕಟಗಳು ಬಂದವು; ಆದರೂ ಅವರು ಆ ಸಂಕಟಗಳನ್ನು ಶ್ರದ್ಧೆಯಿಂದ ಎದುರಿಸಿ ಮತ್ತು ತಾಳ್ಮೆಯನ್ನಿಟ್ಟುಕೊಂಡು ಇಂದಿಗೂ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರಯತ್ನಶೀಲರಾಗಿದ್ದಾರೆ. ಆದ್ದರಿಂದಲೇ ಈಶ್ವರೀ ರಾಜ್ಯದ ಅವರ ಕನಸು ಸಹ ನನಸಾಗಲಿದೆ.

ಸಾಧನೆಯಲ್ಲಿ ಅಪೇಕ್ಷಿತ ಪ್ರಗತಿಯಾಗದಿರಲು ವಿವಿಧ ಕಾರಣಗಳಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಸಾಧಕರು ಅಗತ್ಯವೆನಿಸಿದರೆ ತಮ್ಮ ಜವಾಬ್ದಾರ-ಸಾಧಕರೊಂದಿಗೆ ಮಾತನಾಡಬೇಕು ಮತ್ತು ಅವರಿಂದ ಸಾಧನೆಯ ಪ್ರಯತ್ನಗಳ ಬಗ್ಗೆ ಮಾರ್ಗದರ್ಶನವನ್ನು ಪಡೆಯಬೇಕು. ಪ್ರಗತಿ ಆಗದಿ ರುವುದರಿಂದ ನಿರಾಶರಾಗಿದ್ದರೆ ಅಥವಾ ಆತ್ಮವಿಶ್ವಾಸವು ಕಡಿಮೆ ಆಗಿದ್ದರೆ ಆ ಕುರಿತು ಅವಶ್ಯಕತೆಗನುಸಾರ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು.

ಇಂದಿನ ಕಗ್ಗತ್ತಲಿನಲ್ಲಿಯೇ ನಾಳೆಯ ಉಷಃಕಾಲ ಅಡಗಿರುತ್ತದೆ. ನಾವು ಜಿಗುಟುತನದಿಂದ ಆ ಉಷಃಕಾಲದ ದಾರಿಯನ್ನು ಕಾಯುತ್ತಿದ್ದರೆ ಮಾತ್ರ ಸಾಧನೆಯ ಮುಂದಿನ ಪ್ರಯತ್ನಗಳ ದಾರಿಯೂ ಕಾಣಿಸತೊಡಗುತ್ತದೆ. ಆದ್ದರಿಂದ ಸಾಧಕರು ಶ್ರದ್ಧೆ ಮತ್ತು ತಾಳ್ಮೆಯನ್ನಿಟ್ಟು ಸಾಧನೆಯ ಮಾರ್ಗಕ್ರಮಿಸುತ್ತಿರಬೇಕು.’

– (ಪೂ.) ಸಂದೀಪ ಆಳಶಿ (೨೭.೯.೨೦೨೩)