‘ಅನೇಕ ವರ್ಷಗಳಿಂದ ಸಾಧನೆ ಮಾಡಿಯೂ ಪ್ರಗತಿಯಾಗದಿರುವ ಕೆಲವು ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಸತ್ಸಂಗ ಲಭಿಸಿತು. ೨೫/೧೨ ನೇ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ಆ ಸತ್ಸಂಗದಲ್ಲಿ ಕೆಲವು ಅಂಶಗಳನ್ನು ಓದಿದೆವು. ಈ ವಾರ ಲೇಖನದ ಕೊನೆಯ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.
೫. ಸೇವೆಯಲ್ಲಿ ನಮ್ಮಿಂದ ಮತ್ತು ಇತರರಿಂದಾಗುವ ತಪ್ಪುಗಳನ್ನು ಸರಿಪಡಿಸಲು ಮಾಡಬೇಕಾದ ಪ್ರಯತ್ನ
೫ ಅ. ನಮ್ಮ ತಪ್ಪುಗಳು ತಿಳಿಯಲು ವಿಚಾರಗಳ ಸ್ತರದಲ್ಲಿ ನಿರೀಕ್ಷಣೆಯನ್ನು ಮಾಡುವುದು ಆವಶ್ಯಕ ! : ನಮ್ಮಿಂದಾಗುವ ತಪ್ಪುಗಳು ನಮಗೆ ತಿಳಿಯದಿದ್ದರೆ, ವಿಚಾರಗಳ ಸ್ತರದಲ್ಲಿ ನಿರೀಕ್ಷಣೆಯನ್ನು ಮಾಡಬೇಕು; ಏಕೆಂದರೆ ವಿಚಾರಗಳು ಹೆಚ್ಚು ಅಪಾಯಕಾರಿ ಆಗಿರುತ್ತವೆ ಮತ್ತು ಅವುಗಳನ್ನು ಹಾಗೆಯೇ ಬಿಟ್ಟರೆ, ಅವುಗಳ ಸ್ಫೋಟವಾಗಬಹುದು. ಕೆಲವೊಮ್ಮೆ ತಪ್ಪು ಕೃತಿಗಳನ್ನು ಸ್ವೀಕರಿಸಬಹುದು; ಆದರೆ ವಿಚಾರಗಳನ್ನು ಸ್ವೀಕರಿಸ ಲಾಗುವುದಿಲ್ಲ. ವಿಚಾರಗಳನ್ನು ಮನಸ್ಸಿನಲ್ಲಿಡಬಾರದು. ಅವು ಗಳನ್ನು ತಕ್ಷಣ ಬರೆದು ತೆಗೆಯಬೇಕು.
೫ ಆ. ತಪ್ಪುಗಳನ್ನು ಸುಧಾರಿಸಲು ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರಗಳನ್ನು ನೋಡಿ ಅವುಗಳ ಮೂಲವನ್ನು ತೆಗೆಯಬೇಕು : ಮನಸ್ಸಿನ ಕಡೆಗೆ ಸತತವಾಗಿ ಗಮನಕೊಡಬೇಕು. ಅದರಿಂದ ನಮಗೆ ನಮ್ಮ ತಪ್ಪುಗಳೂ ತಿಳಿಯುತ್ತವೆ. ಮನಸ್ಸಿನ ವಿಚಾರಪ್ರಕ್ರಿಯೆಗಳ ಕಡೆಗೆ ಗಮನಕೊಟ್ಟು ಅವುಗಳನ್ನು ಸರಿ ಪಡಿಸಬೇಕು. ‘ಒಂದು ವಿಚಾರ ಬಂದರೆ, ಅದನ್ನು ಹೇಗೆ ಪರಿಹರಿಸಬಹುದು ?’, ಎಂಬುದನ್ನು ನೋಡಬೇಕು. ಅಯೋಗ್ಯ ವಿಚಾರವನ್ನು ನೋಡಿ ಅದರ ಮೂಲವನ್ನು ತೆಗೆಯಬೇಕಾಗುವುದು. ‘ಮನಸ್ಸಿನಲ್ಲಿ ಅಪೇಕ್ಷೆ ಮತ್ತು ಕರ್ತೃತ್ವ ಏಕೆ ಇದೆ ?’, ಎಂಬುದನ್ನು ನೋಡಬೇಕು. ಮನಸ್ಸಿನಲ್ಲಿ ಯೋಗ್ಯ ವಿಚಾರಗಳ ಸಂಖ್ಯೆಯು ಹೆಚ್ಚಾದಂತೆ ಅದರಂತೆ ಕೃತಿಯಾಗುತ್ತವೆ. ಆಗ ಅಂತರ್ಮುಖತೆ ಬರುತ್ತದೆ.
೫ ಇ. ತಪ್ಪುಗಳನ್ನು ತಡೆಯಲು ದೇವರ ಬಳಿ ಪುನಃ ಪುನಃ ಮೊರೆಯಿಟ್ಟು ದೇವರ ಸಹಾಯವನ್ನು ಪಡೆಯಿರಿ ! : ‘ಮೊದಲನೇ ವಿಚಾರ ದೇವರದ್ದಾಗಿರುತ್ತದೆ ಮತ್ತು ಆ ವಿಚಾರ ವನ್ನು ಬಿಟ್ಟುಕೊಟ್ಟರೆ, ಸೇವೆಯಲ್ಲಿ ತಪ್ಪುಗಳಾಗುತ್ತವೆ’, ಈ ರೀತಿ ಅಡಚಣೆಗಳು ಕೆಲವು ಸಾಧಕರಿಗೆ ಬರುತ್ತವೆ. ಇಂತಹ ಸಮಯದಲ್ಲಿ ‘ದೇವರು ಕೊಟ್ಟ ವಿಚಾರ ಹೋಯಿತು’, ಎಂಬ ವಿಚಾರವನ್ನು ಮಾಡಬಾರದು. ನಾವು ಮರೆತರೂ ಈಶ್ವರನು ಪುನಃ ಸೂಚಿಸುತ್ತಾನೆ. ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಿರಬೇಕು. ದೇವರು ಕರುಣಾಮಯಿಯಾಗಿದ್ದಾನೆ. ಅವನು ನಮ್ಮನ್ನು ಸುಧಾರಿಸಿಕೊಳ್ಳುತ್ತಾನೆ.
೫ ಈ. ಇತರರು ತಪ್ಪುಗಳನ್ನು ಮಾಡಿದಾಗ ಅವುಗಳನ್ನು ಹೇಳ ಬೇಕು, ಬಿಡಬಾರದು : ಸಾಧಕರು ಯಾವುದಾದರೊಂದು ತಪ್ಪು ಮಾಡಿದರೆ ‘ಇರಲಿ ಅವನಿಗೆ ಹೇಳುವುದು ಬೇಡ’, ಎಂದು ಬಿಡಬಾರದು. ಅವನಿಗೆ ಒಳ್ಳೆಯ ರೀತಿಯಿಂದ ಹೇಳ ಬೇಕು, ಪ್ರತಿಕ್ರಿಯಾತ್ಮಕವಾಗಿ ಹೇಳಬಾರದು.
೫ ಉ. ಯಾವುದಾದರೊಬ್ಬ ಸಾಧಕನ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಆಗಿದ್ದರೂ, ಸಾಧಕನ ಎಲ್ಲ ಸ್ವಭಾವದೋಷಗಳು ಹೋಗಿರುವುದಿಲ್ಲ, ಆದುದರಿಂದ ಅವನಿಗೆ ಅವನ ತಪ್ಪುಗಳನ್ನು ಹೇಳಬೇಕು : ‘ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವಾಯಿತೆಂದರೆ ಅವನಲ್ಲಿ ಸ್ವಭಾವದೋಷಗಳೇ ಇರುವುದಿಲ್ಲ’, ಎಂದೇನಿಲ್ಲ. ಅವನಲ್ಲಿ ಸ್ವಭಾವದೋಷಗಳಿವೆ ಮತ್ತು ಅವುಗಳ ಜೊತೆಗೆ ಅವನಲ್ಲಿ ಕೆಲವೊಂದು ಗುಣಗಳಿವೆ; ಆದ್ದರಿಂದ ಶೇ. ೬೦ ರಷ್ಟು
ಆಧ್ಯಾತ್ಮಿಕ ಮಟ್ಟವಾಗಿದೆ’, ಎಂಬುದನ್ನು ಗಮನದಲ್ಲಿಟ್ಟು ಕೊಂಡು ಅವನಿಗೆ ಅವನ ತಪ್ಪುಗಳನ್ನು ಹೇಳಬೇಕು.
೬. ಸಾಧನೆ ನಿರಂತರವಾಗಿ ನಡೆಯುತ್ತಿರಲು ಮಾಡಬೇಕಾದ ಪ್ರಯತ್ನ
೬ ಅ. ವ್ಯಷ್ಟಿ ಸಾಧನೆಯ ಪ್ರಯತ್ನ ನಿಯಮಿತವಾಗಿ ಆಗಬೇಕು.
೬ ಆ. ಪ್ರತಿ ಅರ್ಧ ಗಂಟೆಗೊಮ್ಮೆ ಸಾಧನೆಯ ಪ್ರಯತ್ನ, ತನ್ನಿಂದಾದ ತಪ್ಪುಗಳು ಇತ್ಯಾದಿಗಳ ವರದಿಯನ್ನು ತೆಗೆದುಕೊಳ್ಳಬೇಕು : ಪ್ರತಿ ಅರ್ಧ ಗಂಟೆಗೊಮ್ಮೆ ತಮ್ಮ ವರದಿಯನ್ನು ತೆಗೆದುಕೊಳ್ಳಬೇಕು. ನಾವು ಸಾಧನೆಯ ಯಾವ ಪ್ರಯತ್ನಗಳನ್ನು ಮಾಡಿದೆವು ? ಸಾಧನೆಯಲ್ಲಿ ಎಲ್ಲಿ ಕಡಿಮೆ ಬಿದ್ದೆವು ? ತಮ್ಮ ಯಾವ ತಪ್ಪುಗಳು ಗಮನಕ್ಕೆ ಬಂದವು ? ಇತ್ಯಾದಿಗಳ ಅಧ್ಯಯನ ಮಾಡಬೇಕು. ಪ್ರತಿಯೊಂದು ಕೃತಿಯನ್ನು ಮಾಡುವಾಗ ನಾವು ಸಾಧನೆ ಎಂದು ಯಾವ ಪ್ರಯತ್ನಗಳನ್ನು ಮಾಡಲಿದ್ದೇವೆ ? ಎಂಬುದನ್ನು ಮೊದಲೇ ನಿರ್ಧರಿಸಬೇಕು ಮತ್ತು ಕೃತಿಯಾದ ನಂತರ ಅವುಗಳ ವರದಿಯನ್ನು ತೆಗೆದುಕೊಳ್ಳಬೇಕು.
೬ ಇ. ಸೇವೆಯನ್ನು ಮಾಡುವಾಗ ನಾಮಜಪ ಆಗುವುದು ಆವಶ್ಯಕ ! : ನಾಮಜಪವನ್ನು ಹೆಚ್ಚಿಸಬೇಕು. ಸೇವೆಯನ್ನು ಮಾಡುವಾಗ ಆಗಾಗ ನಾಮಜಪವಾಗಬೇಕು. ದೇವರ ಅನುಸಂಧಾನದಲ್ಲಿದ್ದರೆ ಎಲ್ಲ ಕೃತಿಯು ‘ಸಾಧನೆ’ ಆಗುತ್ತದೆ.
೬ ಈ. ಸ್ವಭಾವದೋಷಗಳಿಗೆ ಪ್ರತಿದಿನ ಮತ್ತು ನಿಯಮಿತವಾಗಿ ಸ್ವಯಂಸೂಚನೆಗಳನ್ನು ಕೊಡುವುದು ಆವಶ್ಯಕ : ನಾಮಜಪ ಆಗುತ್ತಿದ್ದರೆ ಮಾತ್ರ ಸ್ವಭಾವದೋಷಗಳು ಕಡಿಮೆ ಆಗುತ್ತವೆ; ಆದರೆ ಯಾವ ಸ್ವಭಾವದೋಷಗಳು ಹೆಚ್ಚು ತೊಂದರೆ ಕೊಡುತ್ತವೆಯೋ, ಅವುಗಳಿಗಾಗಿ ಸ್ವಯಂಸೂಚನೆ ಕೊಡಬೇಕು. ಸ್ವಭಾವದೋಷಗಳನ್ನು ಜಯಿಸಲು ಪ್ರತಿದಿನ ಮತ್ತು ನಿಯಮಿತವಾಗಿ ಸ್ವಯಂಸೂಚನೆ ಕೊಡುವುದು ಹಾಗೂ ಅದಕ್ಕನುಸಾರ ಕೃತಿ ಮಾಡುವುದು ಆವಶ್ಯಕವಾಗಿದೆ. ಸ್ವಭಾವದೋಷಗಳು ಹೆಚ್ಚಿದ್ದರೆ ಅಥವಾ ಯಾವುದಾದರೊಂದು ಅಹಂನ ಅಂಶವು ತೀವ್ರವಾಗಿದ್ದರೆ, ನಾಮಜಪವಾಗುವುದಿಲ್ಲ. ಇದರಿಂದ ಭಾವಜಾಗೃತಿ ಆಗುವುದಿಲ್ಲ.
೬ ಉ. ದೈನಂದಿನ ಕೃತಿಗಳನ್ನು ಮಾಡುವಾಗ ಸಾಧನೆ ಎಂದು ಭಾವ ವನ್ನಿಟ್ಟರೆ ೨೪ ಗಂಟೆ ಸಾಧನೆಯಾಗುವುದು : ದೈನಂದಿನ ಕೃತಿಗಳನ್ನು ಮಾಡುವಾಗ ಸಾಧನೆ ಎಂದು ಭಾವವನ್ನಿಟ್ಟರೆ, ೨೪ ಗಂಟೆ ಸಾಧನೆಯಾಗುತ್ತದೆ. ಇದು ಕೂಡಲೇ ಸಾಧ್ಯವಾಗುವುದಿಲ್ಲ; ಆದರೆ ಪ್ರಯತ್ನವನ್ನು ಮಾಡುತ್ತಿದ್ದರೆ ಅದರ ರೂಢಿಯಾಗುತ್ತದೆ. ಪ್ರತಿ ಅರ್ಧ ಗಂಟೆಗೊಮ್ಮೆ ಇದರ ವರದಿಯನ್ನು ತೆಗೆದುಕೊಳ್ಳಬೇಕು. ವರದಿ ತೆಗೆದುಕೊಳ್ಳುತ್ತಿದ್ದರೆ ನಮಗೆ, ‘ನಾವು ಈ ಅವಧಿಯಲ್ಲಿ ಏನು ಮಾಡಿದೆವು ?’ ಎಂಬುದು ಅರಿವಾಗುತ್ತದೆ. ಯಾವುದಾದರೊಂದು ಕೃತಿಯನ್ನು ಮಾಡುವಾಗ ಭಾವ ವನ್ನಿಡದಿದ್ದರೆ, ಶಿಕ್ಷಾ ಪದ್ಧತಿಯನ್ನು ಅವಲಂಬಿಸಬೇಕು. ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ಅದನ್ನು ಯಾರಿ ಗಾಗಿ ಮಾಡುತ್ತಿದ್ದೇನೆ ? ಏತಕ್ಕಾಗಿ ಮಾಡುತ್ತಿದ್ದೇನೆ ?’,
ಎಂಬುದರ ವಿಚಾರವನ್ನು ಮಾಡಬೇಕು. ಈ ರೀತಿ ನಿರಂತರ ವಾಗಿ ಪ್ರಯತ್ನವನ್ನು ಮಾಡಬೇಕು. ಸದ್ಯದ ಕಾಲವು ಭೀಕರ ಕಾಲವಾಗಿದೆ ಮತ್ತು ಕೆಟ್ಟ ಶಕ್ತಿಗಳ ಶಕ್ತಿಯೂ ಹೆಚ್ಚಾಗಿದೆ. ಆದ್ದರಿಂದ ಕಠಿಣ ಪರಿಶ್ರಮಪಡುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಮಾತ್ರ ಪ್ರಗತಿಯಾಗುವುದು.
೬ ಊ. ಪ್ರತಿಯೊಂದು ಕರ್ಮವನ್ನು ಸಾಧನೆ ಎಂದು ಮಾಡಬೇಕು : ಸಾಧನೆಯನ್ನು ಮಾಡಲು ಕಠಿಣ ಪರಿಶ್ರಮಪಡುವ ಸಿದ್ಧತೆ ಬೇಕು. ನಾವು ಕೇವಲ ಕರ್ಮಗಳನ್ನು ಮಾಡುತ್ತೇವೆ; ಆದರೆ ಆ ಕರ್ಮಗಳು ಸಾಧನೆಯೆಂದೇ ಆಗಬೇಕು. ಸಾಧನೆ ಎಂದು ಮಾಡದಿದ್ದರೆ ನಾವು ಹಿಂದೆ ಉಳಿಯುತ್ತೇವೆ.
೬ ಎ. ಪ್ರತಿದಿನ ತಳಮಳದಿಂದ ಸಾಧನೆಯಾದರೆ, ಮಾತ್ರ ಪ್ರಗತಿ ಆಗುತ್ತದೆ : ಈಗ ತೀವ್ರ ಆಪತ್ಕಾಲವಿರುವುದರಿಂದ ವರ್ಷಕ್ಕೆ ಶೇ. ೧ ರಷ್ಟೇ ಪ್ರಗತಿಯಾಗುತ್ತಿದೆ. ಪ್ರತಿದಿನ ತಳಮಳದಿಂದ ಸಾಧನೆಯಾದರೆ ಗುರುಕೃಪೆಯಾಗಿ ಪ್ರಗತಿಯಾಗುತ್ತದೆ.
೬ ಐ. ತನ್ನಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಾಧನೆಯನ್ನು ನಿಯಮಿತ ಮಾಡುವುದು ಮಹತ್ವದ್ದಾಗಿದೆ ! : ಸದ್ಯ ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿ (ನೆಗೆಟಿವಿಟಿ) ಬಹಳಷ್ಟು ಹೆಚ್ಚಾಗಿದೆ. ಆದ್ದರಿಂದ ಅದರ ವಿರುದ್ಧ ಹೋರಾಡಿ ನಮಗೆ ನಮ್ಮಲ್ಲಿನ ಸಕಾರಾತ್ಮಕ ಶಕ್ತಿ (ಪಾಜಿಟಿವಿಟಿ) ಹೆಚ್ಚಿಸಬೇಕಾಗುವುದು; ಆದ್ದರಿಂದ ಸಾಧನೆಯನ್ನು ನಿಯಮಿತ ಮತ್ತು ಹೆಚ್ಚು ಗಾಂಭೀರ್ಯದಿಂದ ಮಾಡುವುದು ಮಹತ್ವದ್ದಾಗಿದೆ. ಅದೇ ರೀತಿ ತನ್ನಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳಲ್ಲಿ ಸಾತತ್ಯವಿರಬೇಕು. (ಅಧ್ಯಾತ್ಮಿಕ ಉಪಾಯಗಳನ್ನು ನಿತ್ಯ ಗಾಂಭೀರ್ಯದಿಂದ ಮಾಡಬೇಕು.)
೬ ಓ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆಯಿಂದ ಸಾಧಕರ ಎಲ್ಲ ದೇಹಗಳ ಶುದ್ಧಿ ಯಾಗುತ್ತದೆ : ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಹಾಗೂ ನಾಮಜಪದಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಭಾವಜಾಗೃತಿ, ಸತ್ಸಂಗ ಮತ್ತು ಸತ್ಸೇವೆಯಿಂದ ಮನೋದೇಹದ ಶುದ್ಧಿಯಾಗುತ್ತದೆ. ತ್ಯಾಗದಿಂದ ಕಾರಣದೇಹ ಮತ್ತು ಪ್ರೀತಿಯಿಂದ ಮಹಾಕಾರಣದೇಹದ ಶುದ್ಧಿಯಾಗುತ್ತದೆ. ಸಾಧಕರ ಎಲ್ಲ ದೇಹಗಳ ಶುದ್ಧಿಯಾಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಷ್ಟಾಂಗ ಸಾಧನೆಯ ಮೂಲಕ ಪ್ರಯತ್ನಿಸಲು ಹೇಳಿದ್ದಾರೆ. ಅಷ್ಟಾಂಗ ಸಾಧನೆಯು ಸಾಧನೆಯ ಬೆನ್ನೆಲುಬಾಗಿದೆ.
೬ ಔ. ತನ್ನನ್ನು ಬದಲಾಯಿಸಲು ತಳಮಳ ಆವಶ್ಯಕವಾಗಿದೆ.
೬ ಅಂ. ಸಾಧನೆಯಲ್ಲಿ ಪ್ರಗತಿಯಾದರೆ ಸಾಧಕರ ಪ್ರತಿಯೊಂದು ಕೃತಿ ಪರಿಣಾಮಕಾರಿಯಾಗುವುದು : ಶೇ. ೬೦ ರ ಮಟ್ಟದ ಮಹತ್ವ ಏನೆಂದರೆ ಶೇ. ೬೦ ರಷ್ಟು ಸತ್ವ ಗುಣವಿರುವುದರಿಂದ ಅದನ್ನು ತಲುಪಿದ ನಂತರ ನಾವು ಮಾಡುವ ಸೇವೆಯು, ಉದಾ. ವೈದ್ಯಕೀಯ ಸೇವೆ, ಅಧ್ಯಾತ್ಮ ಪ್ರಸಾರ ಇತ್ಯಾದಿಗಳು, ಅವು ಪರಿಣಾಮಕಾರಿ ಮತ್ತು ಹೆಚ್ಚು ಪ್ರಭಾವಿಯಾಗುತ್ತವೆ. ಇಲ್ಲದಿದ್ದರೆ ನಾವು ಇತರರಿಗೆ ಸಕಾರಾತ್ಮಕತೆ ಕೊಡಲಾಗದು.’
ಸಾಧಕರ ಎಲ್ಲ ದೇಹಗಳ ಶುದ್ಧಿಯಾಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಷ್ಟಾಂಗ ಸಾಧನೆಯ ಮೂಲಕ ಪ್ರಯತ್ನಿಸಲು ಹೇಳಿದ್ದಾರೆ. ಅಷ್ಟಾಂಗ ಸಾಧನೆಯು ಸಾಧನೆಯ ಬೆನ್ನೆಲುಬಾಗಿದೆ.
(ಮುಕ್ತಾಯ)
– ಸದ್ಗುರು ಡಾ. ಮುಕುಲ ಗಾಡಗೀಳ